ಶಶಿಧರ ಶಾಸ್ತ್ರಿಗಳಿಗೆ ಒಲಿದ ಶಿವಯೋಗಿ ಶ್ರೀಪುಟ್ಟರಾಜ ಪ್ರಶಸ್ತಿ
ಲೋಕದರ್ಶನ ವರದಿ
ಕಂಪಿ ್ಲ12: ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯ ಗೌರವ ಪ್ರಾಚಾರ್ಯ ಎಂ.ಎಸ್. ಶಶಿಧರಶಾಸ್ತ್ರಿಗಳು ‘ಶಿವಯೋಗಿ ಶ್ರೀಪುಟ್ಟರಾಜ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇದೇ ಸೆ. 16ರಂದು ಗದಗಿನ ಗಾನಯೋಗಿ ಡಾ. ಪಂ.ಪುಟ್ಟರಾಜ ಸೇವಾ ಸಮಿತಿಯಿಂದ, ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಜರುಗಲಿರುವ, ಪೂಜ್ಯಶ್ರೀ ಶಿವಯೋಗಿ ಡಾ. ಪಂ.ಪುಟ್ಟರಾಜ ಕವಿ ಗವಾಯಿಗಳವರ 11ನೇ ಪುಣ್ಯಸ್ಮರಣೋತ್ಸವದಲ್ಲಿ, ಎಂ.ಎಸ್.ಶಶಿಧರಶಾಸ್ತ್ರಿಗಳ ಪೌರೋಹಿತ್ಯ ಕ್ಷೇತ್ರದಲ್ಲಿನ ಅನುಪಮ ಸೇವೆ, ಸಾಧನೆಯನ್ನು ಪರಿಗಣಿಸಿ ಪಂ.ಲಿಂ.ಚನ್ನವೀರ ಶಾಸ್ತ್ರಿಗಳು ಹಿಡ್ಕಿಮಠ ಸ್ಮರಣಾರ್ಥವಾಗಿ ಶಿವಯೋಗಿ ಶ್ರೀಪುಟ್ಟರಾಜ ಪ್ರಶಸ್ತಿ ಪ್ರದಾನಿಸುವುದಾಗಿ ಗದಗಿನ ಗಾನಯೋಗಿ ಡಾ.ಪಂ.ಪುಟ್ಟರಾಜ ಸೇವಾ ಸಮಿತಿ ಗೌರವಾಧ್ಯಕ್ಷ ಕಲ್ಲಯ್ಯಜ್ಜನವರು ಪ್ರಕಟಿಸಿದ್ದಾರೆ.