ಬೆಳಗಾವಿ

ಶಿವಾಪೂರ ಬಾಲಕಿಯರ ಖೋ-ಖೋ ತಂಡ ಜಿಲ್ಲಾ ಮಟ್ಟಕ್ಕೆ

ಶಿವಾಪೂರ ಬಾಲಕಿಯರ ಖೋ-ಖೋ ತಂಡ ಜಿಲ್ಲಾ ಮಟ್ಟಕ್ಕೆ

         

 ಗುರ್ಲಾಪೂರ 23 : ಸುಣಧೋಳಿಯಲ್ಲಿ ಸೆ.19ರಂದು ನಡೆದ ತಾಲೂಕು ಮಟ್ಟದ ಖೋ-ಖೋ ಸ್ಪರ್ಧೆಯಲ್ಲಿ ಶಿವಾಪೂರ (ಹ) ಸರಕಾರಿ ಪ್ರೌಢಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಶಾಲೆಯ ತಂಡವು ಸತತವಾಗಿ 10ನೇ ಬಾರಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು, ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿತ್ತು. ತಂಡದ ಸಾಧನೆಗೆ  ಮುಖ್ಯೋಪಾಧ್ಯಾಯರಾದ ಗೀತಾ ಕರಗಣ್ಣಿ, ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು, ಸಿಬ್ಬಂದಿ ವರ್ಗ, ದೈಹಿಕ ಶಿಕ್ಷಕ ಕೆ.ಎಚ್‌. ಪಾಟೀಲ ಮತ್ತು ದೈಹಿಕ ಪರೀವೀಕ್ಷಣಾಧಿಕಾರಿ ಎಸ್‌.ಬಿ. ಹಳಿಗೌಡರ ಅಭಿನಂದಿಸಿದ್ದಾರೆ. 


ಸುದ್ದಿ ಓದಿ