ಬೆಳಗಾವಿ

ಗಾಂಧೀಜಿ ಜಯಂತಿ ಆಚರಣೆ

ಗಾಂಧೀಜಿ ಜಯಂತಿ ಆಚರಣೆ


ಸಂಬರಗಿ, ಅ. 2: ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಗ್ರಾಮ ಪಂಚಾಯಿತಿ ಪಿಡಿಒ ಓ. ದರಿಯಪ್ಪ ಅವರು ಗಾಂಧೀಜಿ ಅವರ ಭಾವಚಿತ್ರಕ್ಕೆ ತಂಗಲ ಪೂಜೆ ಸಲ್ಲಿಸಿದರು. ಅನಂತಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಪಿಡಿಒ ಓ. ಶಂಕರಾನಂದ ಅವರು ಗಾಂಧೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ದರಿಯಪ್ಪ, ಢವಳಗಿ, ಶಹಾನೂರ್, ಬಂಡಾ ಚವಾಣ, ಅಜಿತ್ ಬನಸೋಡೆ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು. ಜಂಬಗಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಪಂಚಾಯಿತಿ ನೌಕರ ಪ್ರಶಾಂತ ವಾಘಮಾರೆ ಅವರು ಗಾಂಧೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮಹಾದೇವ ಬುರ್ಳಿ, ಮೀನಾಕ್ಷಿ ಮಾಳಿ, ಜಲಾಕ್ಷ, ಗೋಪಾಲ, ರಾಜಶ್ರೀ ಕಾಂಬಳೆ ಸೇರಿದಂತೆ ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. 


ಸುದ್ದಿ ಓದಿ