ಸೈದಾಪುರದ ಶಿವಲಿಂಗೇಶ್ವರ ಜಾತ್ರೆ ರದ್ದು
ಮಹಾಲಿಂಗಪುರ 24: ದೇಶದಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವದರಿಂದ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅವುಗಳನ್ನು ಅನುಸರಿಸುವ ನಿಮಿತ್ಯ ಸಮೀಪದ ಸೈದಾಪುರದ ಶಿವಲಿಂಗೇಶ್ವರ ಜಾತ್ರೆಯನ್ನು ರದ್ದುಗೊಳಿಸಲಾಗಿದೆ.
ಬುಧವಾರ ಸೈದಾಪುರದ ಶಿವಲಿಂಗೇಶ್ವರ ಟ್ರಸ್ಟ ಕಚೇರಿಯಲ್ಲಿ ಶಿವಲಿಂಗೇಶ್ವರ ದೇವಸ್ಥಾನ ಟ್ರಸ್ಟ ಕಮೀಟಿ ಅಧ್ಯಕ್ಷ ಮುರಗೆಪ್ಪ ಗುಣದಾಳ ಅವರ ಅಧ್ಯಕ್ಷತೆಯಲ್ಲಿ ಸೇರಿದ ಸಭೆಯಲ್ಲಿ ಟ್ರಸ್ಟ ಸದಸ್ಯರು ಹಾಗೂ ಗ್ರಾಮದ ಪ್ರಮುಖರು ಮುಂಬರುವ ಮೇ.5 ರಿಂದ 7ರವರೆಗೆ ಜರುಗಬೇಕಾಗಿದ್ದ ಜಾತ್ರೆಯನ್ನು ರದ್ದುಗೊಳಿಸುವ ನಿರ್ಧಾರ ಮಾಡಿದರು.
ಪ್ರಮುಖರಾದ ಆರ್.ಎಸ್.ಪಾಟೀಲ, ಶಿವಪ್ಪ ಬನಹಟ್ಟಿ, ಶಿವಪ್ಪ ಪಾಶ್ಚಾಪೂರ, ಪ್ರಕಾಶ ಉಳ್ಳಾಗಡ್ಡಿ, ಮಲ್ಲಪ್ಪ ಬಾಯಪ್ಪಗೋಳ, ಎಸ್.ಮ್.ಬ್ಯಾಳಿ, ಪಿ.ಸಿ.ಕೌಜಲಗಿ, ಎಸ್.ಎಮ್.ಮುತ್ತಪ್ಪಗೋಳ, ಎಸ್.ಎಸ್.ದೇಸಾಯಿ, ಎ.ಬಿ.ಉಳ್ಳಾಗಡ್ಡಿ, ಎಸ್.ಎನ್.ಮಲಾಬಾದಿ,ಎಲ್.ಕೆ.ಪಾಶ್ಚಾಪೂರ, ಎಸ್.ಎಸ್.ಪಾಶ್ಚಾಪೂರ,ಎಸ್.ಎನ್.ಮುಗಳಖೋಡ,ಎಮ್.ಎಸ್.ಪಾಶ್ಚಾಪೂರ,ಎ.ಬಿ.ಪಾಶ್ಚಾಪೂರ,ಎಲ್.ಬಿ.ಉಳ್ಳಾಗಡ್ಡಿ,ಎಮ್.ಬಿ.ಸನದಿ,ವೆಂಕಟೇಶ ರಜಪೂತ,ಮುತ್ತಪ್ಪ ನಾಯಕ ಮುಂತಾದವರು ಇದ್ದರು.