ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಅವಮಾನ : ಶಿವಾಜಿ ಪೊಟೊ ಜತೆ ಅಶ್ಲೀಲ ಚಿತ್ರಗಳನ್ನು ಬಳಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕಿಡಿಗೇಡಿಗಳು
ಬೆಳಗಾವಿ, ಜ, 25 : ಹಿಂದುಗಳ ಆರಾಧ್ಯದೈವ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಅಶ್ಲೀಲ ಚಿತ್ರಗಳನ್ನು ಜೋಡಿಸಿ ಅವಮಾನ ಮಾಡುವ ಮೂಲಕ ಸಾಮಾಜಿಕ ಅಂತರಜಾಲದಲ್ಲಿ ಹರಿಬಿಟ್ಟಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.
ಈ ಘಟನೆಯು ಬೆಳಗಾವಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದ್ದು, ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಗಳಿಗೆ ಅಶ್ಲೀಲ ಚಿತ್ರಗಳನ್ನು ಜೋಡಿಸಿ ಸಾಮಾಜಿಕ ಅಂತರಜಾಲದ ಫೇಸ್‌ಬುಕ್ ನಲ್ಲಿ ಈ ಭಾವಚಿತ್ರಗಳನ್ನು ಕೀಡಿಗೇಡಿಗಳು ಹರಿಬಿಟ್ಟಿದ್ದಾರೆ. ಕೆಲವು ಭಾವಚಿತ್ರಗಳನ್ನು ಅವಹೇಳಕಾರಿ ಅಶ್ಲೀಲ ಭಂಗಿಯಂತೆ ವಿರೂಪ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿದೆ.
ಈ ವಿಷಯ ತಿಳಿದ ಕೆಲ ಹಿಂದು ಪರ ಕಾರ್ಯಕರ್ತರು ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಪೊಲೀಸ ಆಯುಕ್ತರನ್ನು ಭೇಟಿ ಮಾಡಿ ಕ್ರಮಕ್ಕೆ ಒತ್ತಾಯಿಸಿದ ಶಾಸಕ ಅಭಯ್ ಪಾಟೀಲ :

ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಅವಮಾನ ಮಾಡಿರುವ ಘಟನೆ ತಿಳಿದ ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ ಅವರ ನೇತೃತ್ವದಲ್ಲಿ ಮಂಗಳವಾರ ರಾತ್ರಿ ಕೆಲ ಕಾರ್ಯಕರ್ತರು ಬೆಳಗಾವಿ ನಗರ ಪೊಲೀಸ ಆಯುಕ್ತ ಡಾ. ಬೋರಲಿಂಗಯ್ಯ ಅವರನ್ನು ಭೇಟಿ ಮಾಡಿ ಕಿಡಿಗೇಡಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಮಂಗಳವಾರ ರಾತ್ರಿ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದ ಶಾಸಕ ಅಭಯ್ ಪಾಟೀಲ ಅವರು ಕಿಡಿಗೇಡಿಗಳ ವಿರುದ್ದು ಕಠಿಣ ಕ್ರಮಕೈಗೊಳ್ಳುವಂತೆ ಮನವಿ ನೀಡಿದರು. ಬಳಿಕ ಮಾಧ್ಯಮ ಗಳೊಂದಿಗೆ ಮಾತನಾಡಿದ ಶಾಸಕ ಅಭಯ್ ಪಾಟೀಲ ಅವರು ಶಿವಾಜಿ ಅವರ ಪೊಟೊ ಜತೆ ಅಶ್ಲೀಲ ಪೊಟೊ ಗಳನ್ನು ಜೊಡಿಸಿ ಅವಮಾನ ಮಾಡಿದ ಕಿಡಿಗೇಡಿಯನ್ನು ಪತ್ತೆ ಮಾಡಿ ಆತನನ್ನು ಶೀಘ್ರವಾಗಿ ಬಂಧಿಸಬೇಕು. ಅಲ್ಲದೆ ಆತನ ವಿರುದ್ದ ಕೇವಲ ಕೇಸು ದಾಖಲಿಸದೆ ಈ ಮುಂದೆ ಇಂತಹ ಕಿಡಿಗೇಡಿ ಕೃತ್ಯ ಮಾಡದ ಹಾಗೆ ಆತನಿಗೆ ವಿರುದ್ದ ಕ್ರಮಕೈಗೊಳ್ಳಬೇಕು. ಈ ಕುರಿತು ಪೊಲೀಸ್ ಆಯುಕ್ತರಲ್ಲಿ ಮನವಿ ಮಾಡಲಾಗಿದೆ ಎಂದು ನುಡಿದರು.