ಸೌಂದತ್ತಿ

ನ.28ರಿಂದ ಶಿವ ಚಿದಂಬರ ಸ್ವಾಮಿಗಳ ಜನ್ಮೋತ್ಸವ ಕಾರ್ಯಕ್ರಮ

ನ.28ರಿಂದ ಶಿವ ಚಿದಂಬರ ಸ್ವಾಮಿಗಳ ಜನ್ಮೋತ್ಸವ ಕಾರ್ಯಕ್ರಮ

ಸವದತ್ತಿ 23: ಪಟ್ಟಣದ ಗುರ್ಲಹೊಸೂರಿನ ರಾಜಾರಾಮ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನ.28ರಿಂದ ಡಿ.5ರವರೆಗೆ ಎಂಟು ದಿನಗಳ ಕಾಲ ಶಿವ ಚಿದಂಬರ ಮಹಾಸ್ವಾಮಿಗಳ 265ನೇ ಜನ್ಮೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 

ನ.28ರಂದು ಧ್ವಜಾರೋಹಣ ಗಂಟಮಾಳ ನಂದಾದೀಪ, ರುದ್ರಾಭಿಷೇಕ, ಚಿದಂಬರರ ಚರಿತ್ರೆ ಹಾಗೂ ವಿವಿಧ ಪಾರಾಯಣಗಳ ಪ್ರಾರಂಭ ಮತ್ತು ಅಖಂಡ ನಾಮ ಸ್ಮರಣೆ ಕಾರ್ಯಕ್ರಮಗಳು ನೆರವೇರಲಿವೆ. 

ನ.29ರಂದು ಸಂತ ಶಿರೋಮಣಿ ರಾಜಾರಾಮ ಮಹಾರಾಜರ ಪುಣ್ಯೋತ್ಸವ ಕಾರ್ಯಕ್ರಮ ನಡೆಯಲಿದೆ. ನ.30ರಂದು ಸಂತ ವಾಂಗ್ಮಯ ಕಾರ್ಯಕ್ರಮ, ಡಿ.1ರಂದು ಜ್ಞಾನದಾಸೋಹ, ಡಿ.2ರಂದು ಸಕಲ ವಾರಕರಿ ಭಕ್ತ ಮಂಡಳಿಯಿಂದ ಸ್ವಾಗತೋತ್ಸವದ ದಿಂಡಿ, ಡಿ.3ರಂದು ಸಂತ ರಾಜಾರಾಮ ಮಹಾರಾಜರ ವಾಣಿಯಂತೆ ಸಹಾವೇ ದಿನೇ ಷಷ್ಠಿ ವೃತ ಕರಾವೇ ಎಂಬಂತೆ ಶ್ರೀ ಚಿದಂಬರ ಮಹಾಸ್ವಾಮೀಜಿಯವರ ಜನ್ಮೋತ್ಸವ ಹಾಗೂ ತೊಟ್ಟಿಲೋತ್ಸವ ಕಾರ್ಯಕ್ರಮ ನಡೆಯುವದು. ಡಿ.4ರಂದು ಬುತ್ತಿ ಪೂಜಾ ಸಂತ ಪೂಜಾ ವಾಂಗ್ಮಯ ಸೇವೆ, ಜ್ಞಾನದಾಸೋಹ, ಅನ್ನಸಂತರೆ​‍್ಣ ಕಾರ್ಯಕ್ರಮಗಳು ನೆರವೇರುವವು. ಡಿ.5ರಂದು ಬಾಳಗೋಪಾಲ ಕಾಲಾದೊಂದಿಗೆ ಕಾರ್ಯಕ್ರಮಗಳು ಮಂಗಲಗೊಳ್ಳಲಿವೆ ಎಂದು ರಾಜಾರಾಮ ಮಠದ ಪೀಠಾಧಿಕಾರಿ ಗಂಗಾಧರ ದೀಕ್ಷಿತರು ತಿಳಿಸಿದ್ದಾರೆ. 


ಸುದ್ದಿ ಓದಿ