ಶಿರಹಟ್ಟಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಕಳ್ಳನಿಂದ ಏಳು ಬೈಕ್ ಗಳ ವಶ
ಲೋಕದರ್ಶನ ವರದಿ
ಶಿರಹಟ್ಟಿ 29: ತಾಲೂಕಿನ ವಿವಿಧಡೆ ಕಳವಾದ ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳುವಾದ ಮೋಟಾರ್ ಸೈಕಲ್ ಹಾಗೂ ಆರೋಪಿತರ ಪತ್ತೆ ಮಾಡುವ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಬಿ.ಎಸ್ ನೇಮಗೌಡ, ಡಿವೈಎಸ್ಪಿ ಎಂ.ಬಿ ಸುಂಕದ ಅವರ ಮಾರ್ಗದರ್ಶನದಲ್ಲಿ ಕಾಯರ್ಾಚರಣೆ ನಡೆಸಲಾಗಿದೆ.
ಶಿರಹಟ್ಟಿ ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್ಐ ಈರಪ್ಪ ರಿತ್ತಿ, ವಿಜಯಕುಮಾರ್ ತಳವಾರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚನೆ ಮಾಡಿ, ಕ್ರೈಮ್ ಸಿಬ್ಬಂದಿಗಳಾದ ಹನುಮಂತ ದೊಡ್ಡಮನಿ, ಆರ್.ಹೆಚ್ ಮುಲ್ಲಾ, ಎಸ್ ಹೆಚ್ ರಾಮಗಿರಿ, ಬಿಜೆ ಮುಳಗುಂದ ಪೋಲಿಸ್ ಸಿಬ್ಬಂದಿ ದಿನಾಂಕ 28.09.2023 ರಂದು ಬೆಳಗಿನ ಜಾವದಲ್ಲಿ ಆರೋಪಿ ಪಟ್ಟಣದ ವಿಜಯನಗರ ನಿವಾಸಿ ಗುಡ್ದಯ್ಯ ಲಕ್ಷ್ಮಣ ಮೋಡೇಕರ್ ಈತನನ್ನು ಹಿಡಿದುಕೊಂಡು ಪೊಲೀಸ್ ಠಾಣೆಯಲ್ಲಿ ಹಾಜರುಪಡಿಸಿದಾಗ ತಾಲೂಕಿನಾದ್ಯಂತ ಒಟ್ಟು 07 ಬೈಕ್ಗಳನ್ನು ಕಳುವು ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಆರೋಪಿತನಿಂದ 07 ಬೈಕುಗಳನ್ನು ವಶಪಡಿಸಿಕೊಳ್ಳುವಲ್ಲಿ ಶಿರಹಟ್ಟಿ ಪೋಲೀಸರು ಯಶಸ್ವಿಯಾಗಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ಈರಪ್ಪ ರಿತ್ತಿ, ಅಪರಾಧ ವಿಭಾಗದ ವಿಜಯಕುಮಾರ ತಳವಾರ ಹಾಗೂ ಸಿಬ್ಬಂದಿಗಳಾದ ಎಲ್.ಹೆಚ್ ಲಮಾಣಿ, ಆರ್ಎಸ್ ಯರಗಟ್ಟಿ, ಎಸ್ಸಿ ಕಪ್ಪತನವರ, ಎಂ.ವೈ ಫಿರಂಗಿ, ಕಿರಣ ಪವಾರ, ಸಿಸಿ ಗುಂಡೂರಮಠ, ರಾಜೇಶ ವೀರಾಪುರ, ಬಿಜೆ ಮುಳಗುಂದ, ಹನಮಂತ ದೊಡ್ಡಮನಿ, ಆರ್. ಹೆಚ್ ಮುಲ್ಲಾ, ಎಸ್.ಹೆಚ್ ರಾಮಗಿರಿ, ಟೆಕ್ನಿಕಲ್ ಸಿಬ್ಬಂದಿಗಳಾದ ಗುರುರಾಜ ಬೂದಿಹಾಳ, ಸಂಜೀವ ಕೊರಡೂರ ಇವರ ಉತ್ತಮ ಸಾಧನೆಗಾಗಿ ಎಸ್ಪಿ ಹಾಗೂ ಡಿಎಸ್ಪಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಪಿಎಸ್ಐ ಈರಪ್ಪ ರಿತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ