ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಿಂಧಿಕುರಬೇಟ ಶಾಲೆಯ ಅತ್ಯುತ್ತಮ ಫಲಿತಾಂಶ
ಘಟಪ್ರಭಾ 24: ನಿನ್ನೆ ಪ್ರಕಟಗೊಂಡ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಸಮಾತಾ ಶಿಕ್ಷಣ ಸಮಿತಿಯ ಶಿಂಧಿಕುರಬೇಟ ಮಾಧ್ಯಮಿಕ ಶಾಲೆ ಶಿಂಧಿಕುರಬೇಟ ಶಾಲೆಯು 98.07ಅ ಫಲಿತಾಂಶ ಮಾಡಿದ್ದು, ಪರೀಕ್ಷೆಯಲ್ಲಿ ತೇರ್ಗಡೆ ಯಾದ ಎಲ್ಲ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಹಾಗೂ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರಾದ ಪಿ ಎಚ್ ಗೋಸಬಾಳ ಅವರು ಅಭಿನಂದಿಸಿದ್ದಾರೆ.ಪ್ರಜ್ವಲ ಆನಂದ ಖಿಲಾರಿ 609(96ಅ) ಪಡೆದು ಪ್ರಥಮ, ವಿಠ್ಠಲ್ ಬಸವರಾಜ ನೀಲಜಗಿ 572(93.52ಅ)ದ್ವಿತೀಯ, ದಸ್ತಗೀರ ಮಿಟ್ಟುಸಾಬ ಸೌದಾಗರ 568(90.88ಅ) ತೃತೀಯ ಸ್ಥಾನ ಪಡೆದಿದ್ದಾರೆ.
ಪರೀಕ್ಷೆಯಲ್ಲಿ ಹಾಜರಾದ 52 ವಿದ್ಯಾರ್ಥಿ ಗಳಲ್ಲಿ 51 ವಿದ್ಯಾರ್ಥಿಗಳು ಉತ್ತಿರ್ಣ ರಾಗಿದ್ದು, ಶಾಲೆಯ ಶಿಕ್ಷಕರ ಪರಿಶ್ರಮ ವಿಶೇಷ ವರ್ಗಗಳು ನಡೆಸಿ 98.07ಅ ಶಾಲೆಯ ಫಲಿತಾಂಶ ಬರಲು ಸಾಧ್ಯವಾಗಿದ್ದು ಶ್ಲಾಘನೀಯ ಅಂತಾ ಶಾಲಾ ಆಡಳಿತ ಮಂಡಳಿಯವರು ಶಿಕ್ಷಕರಿಗೆ ಮತ್ತು ವಿದ್ಯಾರ್ಥಿ ಗಳಿಗೆ ಅಭಿನಂದಿಸಿ ಮುಂದಿನ ಶಿಕ್ಷಣ ಜೀವನ ಒಳ್ಳೆಯದಾಗಲಿ ಇನ್ನೂ ಹೆಚ್ಚಿನ ಪರಿಶ್ರಮ ಪಟ್ಟು ಜೀವನಲ್ಲಿರುವ ಗುರಿಯನ್ನು ಸಾಧಿಸಲಿ ಅಂತಾ ಆಶಿಸಿ, ವಿದ್ಯಾರ್ಥಿಗಳನ್ನು ಸತ್ಕರಿಸಿದರು.