ಶಿಗ್ಗಾವ್

ಶಿಗ್ಗಾವಿಗೆ ಉಪಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿಲ್ಲ : ಬೊಮ್ಮಾಯಿ

ಶಿಗ್ಗಾವಿಗೆ ಉಪಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿಲ್ಲ : ಬೊಮ್ಮಾಯಿ

ಶಿಗ್ಗಾವಿ 14 : ವಿಧಾನಸಭಾಕ್ಷೇತ್ರದಉಪಚುನಾವಣೆಯ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ನಾನಿನ್ನುರಾಜೀನಾಮೆಕೊಟ್ಟಿಲ್ಲ. ಇಂದಿಗೂ ನಾನು ಶಿಗ್ಗಾವಿ ಕ್ಷೇತ್ರದ ಶಾಸಕ.  ನಾನು ರಾಜಿನಾಮೆಕೊಟ್ಟ ನಂತರಉಪಚುನಾವಣೆ ಪ್ರಕ್ರಿಯೆ ಪ್ರಾರಂಭವಾಗುತ್ತದೆಎಂದರು. 

ತಮ್ಮ ಪುತ್ರನಿಗೆ ಉಪ ಚುನಾವಣೆಯಲ್ಲಿಟಿಕೆಟ್ ನೀಡುವ ವಿಚಾರದಕುರಿತು ಕೇಳಿದ ಪ್ರಶ್ನೆಗೆಟಿಕೆಟ್ ವಿಚಾರದಲ್ಲಿ ಪಕ್ಷತೀರ್ಮಾನ ಮಾಡುತ್ತದೆ.ಪಕ್ಷ ಮಾಡುವತೀರ್ಮಾನಕ್ಕೆ ನಾವು ಬದ್ಧವಾಗಿರಬೇಕು.ಪಕ್ಷಯಾರಿಗೇಟಿಕೆಟ್‌ಕೊಟ್ಟರುಅವರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆಎಂದರು. 

ಉ.ಕ. ಅನ್ಯಾಯದ ಪ್ರಶ್ನೆಇಲ್ಲ ?ಕೇಂದ್ರ ಸಂಪುಟದಲ್ಲಿಉತ್ತರಕರ್ನಾಟಕಕ್ಕೆಅನ್ಯಾಯದ ಪ್ರಶ್ನೆಯೇಇಲ್ಲ. ಕರ್ನಾಟಕಕ್ಕೆ ಹೆಚ್ಚು ಸಚಿವ ಸ್ಥಾನಗಳು ಸಿಕ್ಕಿವೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಿದ್ದಾರೆ. 

ಎನ್‌.ಡಿ.ಎಅಭ್ಯರ್ಥಿಯಾಗಿ ಮೋದಿ ಅವರನ್ನುಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಭಾಗಿಯಾದ ಸೌಭಾಗ್ಯ ನನ್ನದು.ಕರ್ನಾಟಕಕ್ಕೆಎಷ್ಟು ಮಂತ್ರಿ ಸ್ಥಾನ ಕೊಡಬೇಕೊಅಷ್ಟು ಸಚಿವ ಸ್ಥಾನ ಕೊಟ್ಟಿದ್ದಾರೆ.ಇನ್ನೇನು ನೀರೀಕ್ಷೆ ಮಾಡಲು ಸಾಧ್ಯವಿಲ್ಲ.  

ಮೂವರಿಗೆ ಸಂಪುಟದರ್ಜೆ ಮತ್ತುಇಬ್ಬರಿಗೆರಾಜ್ಯಖಾತೆಕೊಡಲಾಗಿದೆ.ಪ್ರದೇಶವಾರು ಸಚಿವ ಸ್ಥಾನ ಹಂಚಿಕೆ ಬಗ್ಗೆ ವಿಚಾರ ಮಾಡಬಾರದು.ಸಮಗ್ರಕರ್ನಾಟಕಅಭಿವೃದ್ಧಿಗೆ ನಾವೆಲ್ಲ ಕೆಲಸ ಮಾಡಬೇಕುಎಂದು ಹೇಳಿದರು. 

ಈ ಸಂದರ್ಭದಲ್ಲಿ  ಶಿವಾನಂದ ಮ್ಯಾಗೇರಿ, ಶ್ರೀಕಾಂತ ದುಂಡಿಗೌಡ್ರ, ಶಶಿಧರ ಯಲಿಗಾರ, ಗಂಗಾಧರ ಸಾತಣ್ಣವರ, ತಿಪ್ಪಣ್ಣ ಸಾತಣ್ಣವರ, ನರಹರಿಕಟ್ಟಿ, ಡಾ. ಮಲ್ಲೇಶಪ್ಪ ಹರಿಜನ, ಬಸವರಾಜ ನಾರಾಯಣಪೂರ, ರೇಣುಕನಗೌಡ ಪಾಟೀಲ, ಸಂಗೀತಾ ವಾಲ್ಮೀಕಿ, ಡಾ.ಶೋಭಾ ನಿಸ್ಸಿಮಗೌಡ್ರ, ಆನಂದ ಸುಭೇದಾರ, ಮಂಜುನಾಥ ಬ್ಯಾಹಟ್ಟಿ ಸೇರಿದಂತೆಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ