ನೂತನ ಜಿಲ್ಲಾಧ್ಯಕ್ಷರಾಗಿ ಶೇಖರ ಅಂಗಡಿ ಆಯ್ಕೆ
ಮಹಾಲಿಂಗಪುರ: ಪಡಿತರ ವಿತರಕರ ಸಂಘದ ನೂತನ ಬಾಗಲಕೋಟ ಜಿಲ್ಲಾಧ್ಯಕ್ಷರಾಗಿ ಪಟ್ಟಣದ ನಾಗರೀಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ಶೇಖರ ಅಂಗಡಿ ಆಯ್ಕೆಯಾಗಿದ್ದಾರೆ.
ಸಮೀಪದ ಬನಹಟ್ಟಿ ಪಟ್ಟಣದ ನೀಲಕಂಠೇಶ್ವರ ದೇಗುಲದಲ್ಲಿ ಮಂಗಳವಾರ ನಡೆದ ಸರಳ ಸಮಾರಂಭದಲ್ಲಿ ಜಿಲ್ಲೆಯ ಪಡಿತರ ವಿತರಕರ ಪ್ರಸ್ತುತಿಯಲ್ಲಿ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಮತ್ತು ರಾಷ್ಟ್ರೀಯ ಕಾರ್ಯದರ್ಶಿ ಟಿ. ಕೃಷ್ಣಪ್ಪ ಮಹಾಲಿಂಗಪುರದ ಉತ್ಸಾಹಿ ಶೇಖರ ಅಂಗಡಿ ಅವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.
ಪಡಿತರ ವಿತರಕರಾದ ಭೀಮಶಿ ಗೌಂಡಿ, ರಾಘು ತೇಲಿ, ಮಹಾದೇವ ಕಡಬಲ್ಲವರ, ಗಜಾನನ ನಾಗರಾಳ, ಶೇಖರ ಸಜ್ಜನ, ಸುಭಾಸ್ ಗಿರಿಸಾಗರ, ವಿಜು ಜವಳಗಿ, ಸಂಜು ಮಾಲಾಪೂರ, ಕಲ್ಲಯ್ಯ ಹಿರೇಮಠ, ಅಜೀಜ ಮಹಿಷವಾಡಗಿ, ರೂಪಾ ಬಾಡಗಿ, ಸಿದ್ದಪ್ಪ ರಾಮೋಜಿ, ಮಹಾಲಿಂಗಪ್ಪ ಗೊಂದಿ, ಬಸವರಾಜ ಬಂಡಿವಡ್ಡರ, ಮಂಜು ಹಲಸಪ್ಪಗೋಳ, ಅಶೋಕ ಪವಾರ್, ಮಂಜು ಭಾವಿಕಟ್ಟಿ, ಚೆನ್ನಪ್ಪ ಮುಗಳಖೋಡ, ಮುಂತಾದವರು ಯಶಸ್ವಿ ಕಾರ್ಯಕ್ಕಾಗಿ ನೂತನ ಜಿಲ್ಲಾ ಅಧ್ಯಕ್ಷರನ್ನು ಅಭಿನಂದಿಸಿದ್ದಾರೆ.