ಷೇರುದಾರರು ಏನೆ ಸಮಸ್ಯೆ ಇದ್ದರೂ ಬಗೆಹರಿಸಿಕೊಳ್ಳಲು ಕಾಲಾವಕಾಶವಿದೆ: ಕೋಳಿಗುಡ್ಡ
ಡಿಸೆಂಬರ್ ಅಥವಾ ಜನವರಿಯಲ್ಲಿ ಸ್ಥಳೀಯ ಅರ್ಬನ್ ಕೋ-ಆಪ್ ಬ್ಯಾಂಕ್ ಲಿ. ಚುನಾವಣೆ ನಡೆಯುವ ಸಂಭವವಿದ್ದು
ಮಹಾಲಿಂಗಪುರ : ಪಟ್ಟಣದ ದಿ.ಮಹಾಲಿಂಗಪುರ ಅರ್ಬನ್ ಕೋ-ಆಪ್ ಬ್ಯಾಂಕ್ ಲಿ. ಚುನಾವಣೆಯು ಬರುವ ಡಿಸೆಂಬರ್ ಅಥವಾ ಜನವರಿಯಲ್ಲಿ ನಡೆಯುವ ಸಂಭವವಿದ್ದು ಷೇರುದಾರರು ಸದರಿ ಬ್ಯಾಂಕಿನ ಹಕ್ಕುದಾರರು ಆಗಿರುತ್ತಿರಿ, ಕಾರಣ ಪ್ರಸ್ತುತ ಕೆಲವೊಂದು ಬ್ಯಾಂಕ್ ನಿಯಮಗಳು ಬದಲಾಗಿರುವುದರಿಂದ ತಾವು ಆ ನಿಯಮಗಳಿಗೆ ಒಳಪಡುತ್ತಿರೋ ಅಥವಾ ಇಲ್ಲವೋ ಮತ್ತು ತಮಗೆ ಬ್ಯಾಂಕ್ ಗೆ ಸಮ್ಮಂಧಿಸಿದಂತಹ ಇತರೆ ಏನೆ ಸಮಸ್ಯೆ ಇದ್ದರೂ ಮೌಖಿಕ ಅಥವಾ ಲಿಖಿತವಾಗಿ ಅರ್ಜಿ ಸಲ್ಲಿಸಲು ಕಾಲಾವಕಾಶವಿದ್ದು ಸದ್ಬಳಕೆ ಮಾಡಿಕೊಳ್ಳಲು ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ ತಿಳಿಸಿದ್ದಾರೆ.
ಶುಕ್ರವಾರ ಸಂಜೆ ಬ್ಯಾಂಕಿನ ಸಭಾಭವನದಲ್ಲಿ ಪತ್ರಿಕಾ ಪ್ರಕಟಣೆ ಬಗ್ಗೆ ಮಾತನಾಡಿದ ಅವರು, 5 ವರ್ಷಗಳ ಅವಧಿಯಲ್ಲಿ ಮೊದಲು ಬ್ಯಾಂಕಿನ 3 ಸಾಮಾನ್ಯ ಸಭೆಗಳಿಗೆ ಹಾಜರಿದ್ದು, ಸದರಿ ಬ್ಯಾಂಕಿನಲ್ಲಿಯೇ 3ವರ್ಷಗಳ ವ್ಯವಹಾರ ಮಾಡಿರಬೇಕು, ಅಂತಹವರಿಗೆ ವೋಟ್ ಮಾಡಲು ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿತ್ತು. ಕಳೆದ ವರ್ಷ ಮಾರ್ಪಾಡಾದ ನಿಯಮದಂತೆ 2 ಸಭೆಗಳಿಗೆ ಹಾಜರಿ ಹಾಗೂ 2ವರ್ಷಗಳ ಬ್ಯಾಂಕ್ ಜೊತೆ ವ್ಯವಹಾರ ಮಾಡಿದ್ದರೆ ಮಾತ್ರ ಚುನಾವಣೆಯಲ್ಲಿ ವೋಟ್ ಹಾಕಲು ಮತ್ತು ಸ್ಪರ್ಧಿಸಲು ಅವಕಾಶವಿದೆ.
ಒಂದು ವೇಳೆ ತಮ್ಮದೇನಾದರೂ ಸಮಸ್ಯೆ ಇದ್ದರೆ ಬ್ಯಾಂಕ್ ಗೆ ಲಿಖಿತ ಅರ್ಜಿ ಅಥವಾ ಮೌಖಿಕವಾಗಿ ಚರ್ಚೆ ಮಾಡಬಹುದಾಗಿದೆ. ತಮಗೆ ನಮ್ಮ ಸಂಸ್ಥೆಯಿಂದ ನೋಟಿಸ್ ತಲುಪಿದ ದಿನಾಂಕದಿಂದ 15 ದಿವಸಗಳ ಕಾಲಾವಕಾಶವಿದೆ.ಒಂದು ವೇಳೆ ಇದು ಸಾಧ್ಯವಾಗದೆ ಹೋದರೂ 30ದಿವಸಗಳ ಕಾಲಾವಕಾಶದಲ್ಲಿ ಬೆಳಗಾವಿಯಲ್ಲಿರುವ ನಮ್ಮ ಜ್ವಾಯಿಂಟ್ ರಿಜಿಸ್ಟ್ರಾರ್ ಅಥವಾ ಬೆಳಗಾವಿ ಪ್ರಾಂತ್ಯದ ಚುನಾವಣಾ ಅಧಿಕಾರಿಗಳಿಗೆ ಲಿಖಿತ ಅರ್ಜಿ ನೀಡಿ ಅವರಲ್ಲಿ ಹೆಚ್ಚಿನ ಮಾಹಿತಿ ಪಡೆದುಕ್ಕೊಳ್ಳಬಹುದಾಗಿದೆ ಎಂದರು.
ಮುಂಬರುವ ಚುನಾವಣೆಗೆ ಅನುಗುಣವಾಗಿ ಎಲ್ಲ ಷೇರುದಾರರಿಗೆ ಮಾಹಿತಿ ನೀಡುವುದು ನಮ್ಮ ಆದ್ಯ ಕರ್ತವ್ಯವೂ ಆಗಿದೆ. ಇಂತಹದರಲ್ಲಿ ಬ್ಯಾಂಕಿನ ಷೇರುದಾರರು ಮೂಲ ವಿಳಾಸಗಳಲ್ಲಿ ಇರದೆ ಮಾಹಿತಿ ನೀಡದೆ ಬೇರೆಡೆಗಳಲ್ಲಿ ವಾಸ ಇರುವುದರಿಂದ ನೋಟಿಸ್ ಗೂ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ.ಆದ್ದರಿಂದ ನಾವು ಪತ್ರಿಕಾ ಪ್ರಕಟಣೆ ಮೂಲಕ ತಮಗೆ ಈ ವಿಷಯವನ್ನು ಮುಟ್ಟಿಸುತ್ತಿದ್ದೇವೆ ಎಂದರು.
ಆಡಳಿತ ಮಂಡಳಿಯ ಬ್ಯಾಂಕಿನ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ, ಉಪಾಧ್ಯಕ್ಷ ಬಸವರಾಜ ಭಟಕುರ್ಕಿ, ನಿರ್ದೇಶಕರಾದ ಮಹದೇವಪ್ಪ ಶಿರೋಳ, ವಿರಪಾಕ್ಷಯ್ಯ ಪಂಚಕಟ್ಟಿಮಠ, ಗುರುಪಾದಪ್ಪ ಅಂಬಿ, ಶ್ರೀಶೈಲ್ ಸೋರಗಾವಿ, ಶಫೂಲಾ ಮೆಹಬೂಬಸಾಬ್. ಜೀರಗಾಳ, ವೀರಪ್ಪ ಹಲಗತ್ತಿ, ಹೊಳೆಪ್ಪ ಬಾಡಗಿ, ಚನ್ನಗಿರಿ ದಡ್ಡೆವ್ವಗೋಳ, ನಾಗಪ್ಪ ಬುರುಡ, ಪ್ರಭು ಬೆಳಗಲಿ, ನರಸಿಂಹ ಕಲಕೇರಿ, ವ್ಯವಸ್ಥಾಪಕ ಎಸ್ಎಂ ಗುಣದಾಳ ಸಿಬ್ಬಂದಿಗಳಾದ ಎಸ್ ಆರ್. ಹಿಕಡಿ, ಎಂ ಎಂ. ಗುಜ್ಜರ್, ಆಯ್ ಎಸ್. ಮಠದ, ಎಸ್ ಜಿ. ಹುಬ್ಬಳ್ಳಿ, ಎಸ್ ಎಸ್. ವಾಲಿಕಾರ್ ಇದ್ದರು