ತಾಳಿಕೋಟಿ

ವ್ಯಸನ ಬಿಟ್ಟು ಶರಣರ ವಾಣಿ ಆಲಿಸಿ: ಸಿದ್ಧಲಿಂಗ ದೇವರು

ವ್ಯಸನ ಬಿಟ್ಟು ಶರಣರ ವಾಣಿ ಆಲಿಸಿ: ಸಿದ್ಧಲಿಂಗ ದೇವರು
ತಾಳಿಕೋಟೆ ಪಟ್ಟಣದ ಸಾಂಭಪ್ರಭು ಶರಣಮುತ್ಯಾರವರ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಸಂಜೆ ಪ್ರಾರಂಭಗೊಂಡ 14 ದಿನಗಳ ಅಧ್

ತಾಳಿಕೋಟೆ 20: ಜೀವನದುದ್ದಕ್ಕೂ ನಾವು ನಮ್ಮನ್ನು ಸಾವಿಗಾಗಿ ಸಿದ್ಧಮಾಡಿಕೊಳ್ಳುತ್ತಿದ್ದೇವೆ. ಹುಟ್ಟು ಸಾವು ಖಚಿತವಾಗಿದ್ದು ಮಧ್ಯದ ಅವಧಿಯು ಜೀವನ ಸಾರ್ಥಕವಾಗುವಂತೆ ಇರಬೇಕು. ಹೆಚ್ಚಿನವರು ಈಚೆಗೆ ದುಶ್ಚಟಗಳ ದಾಸರಾಗುತ್ತಿದ್ದಾರೆ. ಅಂಥಹವರೆಲ್ಲ ವ್ಯಸನ ಬಿಟ್ಟು ಶರಣರ ವಾಣಿಯನ್ನು ಕಿವಿಗೆ ಹಾಕಿಕೊಂಡು ಬದುಕುವುದನ್ನು ಕಲಿಯಬೇಕು ಎಂದು ಖಾಸ್ಗತೇಶ್ವರ ಮಠದ ಪೀಠಾಧಿಪತಿ ಸಿದ್ಧಲಿಂಗ ದೇವರು ಹೇಳಿದರು.

ಅವರು ಪಟ್ಟಣದ ಸಾಂಭಪ್ರಭು ಶರಣಮುತ್ಯಾರವರ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಸಂಜೆ ಪ್ರಾರಂಭಗೊಂಡ 14 ದಿನಗಳ ಅಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಣ್ಣಿಂದಲೇ ಕಾಯ ಬಂದಿದ್ದು ಕೊನೆಗೆ ಮಣ್ಣಲ್ಲೇ ಮಣ್ಣಾಗುತ್ತೇವೆ. ನಾವು ಬದುಕಿದ್ದಾಗ ಏನನ್ನಾದರೂ ಸತ್ಪಾತ್ರಕ್ಕೆ ಸಲ್ಲುವ ಕೆಲಸ ಕಲಿಯಬೇಕು. ಪುರಾಣ ಪ್ರವಚನ ಆಲಿಸುವದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.

ಅಧ್ಯಾತ್ಮಿಕ ಪ್ರವಚನಕಾರ ಶರಣಸೋಮನಾಳದ ಮಹಾದೇವಯ್ಯ ಶಾಸ್ತ್ರೀಗಳು ಮಾತನಾಡಿ, ಮಾಡುವ ನೀಡುವ ಭಕ್ತರನ್ನು ಕಂಡರೆ ದೇವರಿಗೆ ಪ್ರೀತಿ ಮೂಡುತ್ತದೆ. ಜೀವನವನ್ನು ಧರ್ಮಕ್ಕಾಗಿ ಸಮರ್ಪಣ ಮಾಡುವವರು ದೇವರ ಕರುಣೆಗೆ ಪಾತ್ರರಾಗುತ್ತಾರೆ. ಜೀವನದಲ್ಲಿ ಎಲ್ಲವೂ ಅಸ್ಥಿರವಾಗಿದ್ದು ಧರ್ಮ ಮಾತ್ರ ಶಾಶÀ್ವತವಾಗಿದೆ ಎಂದರು.

ನೇತೃತ್ವವನ್ನು ಮಠದ ಪೀಠಾಧಿಪತಿ ಶರಣಪ್ಪ ಶರಣರ, ಬಸಪ್ಪ ಶರಣರ ವಹಿಸಿದ್ದರು. ಎಪಿಎಂಸಿ ಅಧ್ಯಕ್ಷ ಮಲ್ಲನಗೌಡ ಯಾತಗಿರಿ, ಪುರಸಭೆಯ ಸದಸ್ಯ ಮುತ್ತಪ್ಪ ಚಮಲಾಪುರ, ಗುರುಸಾಹುಕಾರ ಸಜ್ಜನ ವೇದಿಕೆಯಲ್ಲಿದ್ದರು. 

ಸಂಗೀತ ಸೇವೆಯನ್ನು ಯರಗಲ್ಲ ಗ್ರಾಮದ ಸಂಗೀತ ಶಿಕ್ಷಕ ಸಂಗಮೇಶ ಶಿವಣಗಿ ಹಾಗೂ ತಬಲಾ ಸಾಥ ಚೋಕಾವಿಯ ಬಸನಗೌಡ ಬಿರಾದಾರ ನೀಡುತ್ತಿದ್ದಾರೆ. ಶರಣಗೌಡ ಪೆÇಲೀಸ್‍ಪಾಟೀಲ ಸ್ವಾಗತಿಸಿದರು. ವಿಜಯಪುರ ಮಹಿಳಾ ವಿವಿಯ ವಿಜಯಕುಮಾರ ಹಿರೇಮಠ ನಿರ್ವಹಿಸಿದರು. ಸಂಗಮೇಶ ಶರಣರ ವಂದಿಸಿದರು.

ಮುರುಘೇಶ ವಿರಕ್ತಮಠ, ಜಿ.ಜಿ.ಯರನಾಳ, ತಿಪ್ಪಣ್ಣ ಸಜ್ಜನ, ಸಂಗನಗೌಡ ಅಸ್ಕಿ, ಸಾಂಭಪ್ರಭು ಮಠದ ಕುಟುಂಬಸ್ಥರು ಇದ್ದರು. ಕೋವಿಡ್ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು ಎಲ್ಲ ಭಕ್ತಾದಿಗಳಿಗೂ ಮಾಸ್ಕ ವಿತರಣೆ ಮಾಡಿ ಸಾನಿಟೈಸರ್ ಹಾಕಿ ವೈಯಕ್ತಿಕ ಅಂತರ ಕಾಯ್ದುಕೊಳ್ಳಲಾಯಿತು.  

ಮಾ.31.ರವರೆಗೆ 14 ದಿನಗಳ ಕಾಲ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಜರುಗಲಿದ್ದು ಪ್ರತಿದಿನ ಸಂಜೆ 7ರಿಂದ 8 ಗಂಟೆಯವರೆಗೆ ಜರುಗಲಿದೆ.

ಸುದ್ದಿ ಓದಿ