ಶರಣಯ್ಯ ಬೂದಿಹಾಳಮಠ ನಿಧನ
ಮುದ್ದೇಬಿಹಾಳ 28: ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ, ಕರ್ನಾಟಕ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ಬಿಜೆಪಿ ಮುಖಂಡ, ಪುರಸಭೆ ಮಾಜಿ ಸ್ಥಾಯಿ ಸಮೀತಿ ಅಧ್ಯಕ್ಷ ಹಾಗೂ ಮುದ್ದೇಬಿಹಾಳ ಅಮೀತ್ ಶಾ ಎಂದೇ ಖ್ಯಾತರಾಗಿದ್ದ ಶರಣಯ್ಯ ಬಸಯ್ಯ ಬೂದಿಹಾಳಮಠ(45) ಅನಾರೋಗ್ಯದಿಂದ ಬುಧವಾರ ನಸುಕಿನ ಜಾವದಲ್ಲಿ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಓರ್ವ ಗಂಡು ಮತ್ತು ಓರ್ವ ಹೆಣ್ಣು ಮಕ್ಕಳು, ಇಬ್ಬರು ಸಹೋದರರಿದ್ದಾರೆ.
ಸಂತಾಪ ಸೂಚನೆ:
ಮೃತರ ಕುಟುಂಬಕ್ಕೆ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಕುಟುಂಬ, ಮಾಜಿ ಸಚಿವ ಸಿ.ಎಸ್.ನಾಡಗೌಡ, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ, ಮಂಡಲ ಅಧ್ಯಕ್ಷ ಪರಶುರಾಮ ಪವಾರ, ಆರ್.ಎಂ.ಕೆ. ಟ್ರಸ್ಟ್ ಉಪಾಧ್ಯಕ್ಷ ರಮೇಶ ಕೆಂದೂಳಿ, ಮುದ್ದೇಬಿಹಾಳ ಹಿರಿಯ ಅಶೋಕ ನಾಡಗೌಡ, ಯುವ ಮುಖಂಡ ಕಾಮರಾಜ ಬಿರಾದಾರ, ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರದೇವರು, ಬಾಗೇವಾಡಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಶ್ರೀಗಳು, ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್, ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಉಪಾಧ್ಯಕ್ಷೆ ಶಹಜಾದಬಿ ಹುಣಚಗಿ, ಪುರಸಭೆ ಸದಸ್ಯರಾದ ಸಹನಾ ಬಡಿಗೇರ, ಮೈಬೂಬ ಗೊಳಸಂಗಿ, ನಾಮ ನಿರ್ದೇಶಿತ ಸದಸ್ಯ ಹುಲಗಪ್ಪ ನಾಯಕಮಕ್ಕಳ ಸೇರಿದಂತೆ ಇನ್ನೂ ಅನೇಕರು ಸಂತಾಪ ಸೂಚಿಸಿದ್ದಾರೆ.