ಬಳ್ಳಾರಿ

ಜನಮನ ತಣಿಸಿದ ಶರಣ ಸಂಗಮ ನಾಟಕ: ಸಮೂಹ ನೃತ್ಯ

ಜನಮನ ತಣಿಸಿದ ಶರಣ ಸಂಗಮ ನಾಟಕ: ಸಮೂಹ ನೃತ್ಯ

ಬಳ್ಳಾರಿ 08: ನಗರದ ಹೊಂಗಿರಣ ಸಭಾಂಗಣದಲ್ಲಿ ಶಿವ ಸಾಯಿ ಕಲ್ಚರಲ್ ಟ್ರಸ್ಟ್‌ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಶರಣ ಸಂಗಮ ನಾಟಕ ಮತ್ತು ಸಮೂಹ ನೃತ್ಯ ಕಾರ್ಯಕ್ರಮ ಜನಮನ ತಣಿಸಿತು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಶಿವಸಾಯಿ ಕಲ್ಚ್‌ರಲ್ ಟ್ರಸ್ಟ್‌ನ ಅಧ್ಯಕ್ಷೆ ಎ. ವರಲಕ್ಷ್ಮೀ ಅವರು ಮಾತನಾಡಿ  ಶರಣರು ನಡೆದ ದಾರಿಯಲ್ಲಿ ನಾವು ನಡೆದರೆ ನಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳಬಹುದೆಂದು ತಿಳಿಸಿದರು. ಶರಣ ಸಂಗಮ ನಾಟಕ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಡುತ್ತದೆ ಮತ್ತು ಜನರ ಮನಸ್ಸನ್ನು ಪರಿವರ್ತನೆ ಮಾಡುವುದರಿಂದ ಇಂತಹ ನಾಟಕಗಳನ್ನು ಕಾರಾಗೃಹಗಳಲ್ಲಿ ಆಡಿಸಬೇಕೆಂದು ಮನವಿ ಮಾಡಿದರು.  ಇತಿಹಾಸ ಅಕಾಡೆಮಿ ಜಿಲ್ಲಾಧ್ಯಕ್ಷ ಟಿ ಹೆಚ್ ಎಂ ಬಸವರಾಜ್ ಕಾರ್ಯಕ್ರಮ ಉದ್ಘಾಟಿಸಿದರು.  

ಗುಡದೂರು ರಾಘವೇಂದ್ರ ಬಸವಣ್ಣನವರ ವಚನವನ್ನು ಹಾಡಿದರು. ಎಸ್ ಕೆ ಆರ್ ಜಿಲಾನಿ ಭಾಷಾ, ಡಾಕ್ಟರ್ ಅಣ್ಣಾಜಿ ಕೃಷ್ಣಾರೆಡ್ಡಿ, ಅಭಿಷೇಕ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಏ ವರಲಕ್ಷ್ಮಿ ಅವರು ಶರಣರ ಬಗ್ಗೆ ಇನ್ನು ಮುಂದೆ ನಮ್ಮ ಟ್ರಸ್ಟ್‌ ನಿಂದ ನಾಟಕಗಳನ್ನು ಹಮ್ಮಿಕೊಳ್ಳುತ್ತೀವಿ ಎಂದು ತಿಳಿಸಿದರು. ಬಸವಣ್ಣನವರ ಪ್ರಾರ್ಥನೆ ಹಾಡಿಗೆ ಖ್ಯಾತ ಚಿತ್ರ ಕಲಾವಿದ ಶರಣಬಸವ ರವರು ಆರಂಭದಲ್ಲಿ ಬಸವಣ್ಣನವರ ಚಿತ್ರವನ್ನು ಬರೆದು ಎಲ್ಲರನ್ನೂ ಸಂತೋಷಪಡಿಸಿದರು.  

ಎಸ್ ಕೆ ಆರ್ ಜಿಲಾನಿ ಭಾಷಾ ರವರ ತಂಡದಿಂದ ಸಮೂಹ ನೃತ್ಯಗಳು ನಡೆದವು. ಕೆ. ಅವಿನಾಶ್ ತಂಡದಿಂದ ಶರಣ ಸಂಗಮ ನಾಟಕ ನಡೆಯಿತು. ಗೂಳ್ಯದ ಗಾದಿಲಿಂಗಪ್ಪ ಪಾತ್ರದಲ್ಲಿ ದಕ್ಷಿಣ ಮೂರ್ತಿ, ಸಕ್ಕರೆ ಕರಡೆಪ್ಪನವರ ಪಾತ್ರದಲ್ಲಿ ವಸಂತ್ ಕುಮಾರ್, ಶಾಂತಮ್ಮನ ಪಾತ್ರದಲ್ಲಿ ಅದ್ವಾನಿ ವೀಣಾ, ಜಡೆ ತಾತನ ಪಾತ್ರದಲ್ಲಿ ಆದರ್ಶ, ಮರಿಸ್ವಾಮಿಗಳ ಪಾತ್ರದಲ್ಲಿ ರುದ್ರ​‍್ಪ ದೊಡ್ಡವಾಡ, ಶೇಕ್ಷಾವಲಿ ಪಾತ್ರದಲ್ಲಿ ಕೆ. ಅವಿನಾಶ್ , ಕವಾಲಿ ಹಾಡುಗಳು ಓಂಕಾರ್, ರಾಮಾಚಾರಿ ಪಾತ್ರದಲ್ಲಿ ಮಲ್ಲಿ, ಭೀಮಾಚಾರಿ ಪಾತ್ರದಲ್ಲಿ ಓಂಕಾರ್, ಕುಂಟನ ಪಾತ್ರದಲ್ಲಿ ಮುರುಳಿ ಗ್ರಾಮಸ್ಥರು ಸಂದೇಶ್ ಯೋಗೀಶ್ ಸಂತೋಷ್ ಅಜ್ಜಿಯ ಪಾತ್ರದಲ್ಲಿ ಸಂದೇಶ್ ಅಭಿನಯಿಸಿದರು.  

ದಕ್ಷಿಣ ಮೂರ್ತಿ ನಿರೂಪಿಸಿದರು. ಬೆಳಕು ಸೋಮು ರಚನೆಯ ನಾಟಕವನ್ನು ಕೆ. ಜಗದೀಶ್ ನಿರ್ದೇಶನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ  ಸುಬ್ಬಣ್ಣ, ಹುಸೇನ್ ಸಾಬ್, ಮಹೇಶ್ವರ ಸ್ವಾಮಿ, ವಾಜೀದ್, ಗಾದಿಲಿಂಗಪ್ಪ, ತಿ​‍​‍್ೇರುದ್ರ​‍್ಪ, ಉಪಸ್ಥಿತರಿದ್ದರು. 


ಸುದ್ದಿ ಓದಿ