ದುಶ್ಚಟಗಳಿಗೆ ಬಲಿಯಾಗದೇ ನಿಮ್ಮ ಭವಿಷ್ಯ ರೂಪಿಸಿಕೊಳ್ಳಿರಿ: ಶಶಿಧರ ಯಲಿಗಾರ
ಶಿಗ್ಗಾವಿ 10: ವಿಧ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೇ ನಿಮ್ಮ ಸುಂದರವಾದ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಸಿ.ಬಿ.ಯಲಿಗಾರ ಸೇವಾ ಸಂಸ್ಥೆ ಅಧ್ಯಕ್ಷ ಶಶಿಧರ ಯಲಿಗಾರ ಹೇಳಿದರು.
ಪಟ್ಟಣದ ಸರಕಾರಿ ಗೌರಮ್ಮ ಅಂಕಲಕೋಟಿ ಪ್ರಥಮ ದರ್ಜೆ ಕಾಲೇಜಿನಲ್ಲಿ 22-23 ನೇ ಸಾಲಿನ ಪಠ್ಯೇತರ ಚಟುವಟಿಕೆ ಹಾಗೂ ಸ್ವಾಗತ ಸಮಾರಂಭ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು ನಾನು ನನ್ನ ಸುಂದರವಾದ ಜೀವನ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳಲು ಮಹಾನ 4 ವ್ಯಕ್ತಿಗಳಾದ ರತನ ಟಾಟಾ, ಎ.ಪಿ.ಜೆ. ಅಬ್ದುಲ್ ಕಲಾಂ, ಸುಧಾಮೂರ್ತಿ, ವಿಜಯ ಸಂಕೇಶ್ವರ ಅವರ ಜೀವನವನ್ನು ನಿರ್ವಹಿಸಲು ನಡೆದು ಬಂದ ದಾರಿಯನ್ನು ಹಾಗೂ ಅವರು ಕಷ್ಟ ಪಟ್ಟು ಉನ್ನತ ಸ್ಥಾನವನ್ನು ಅಲಂಕರಿಸಿದ ಅವರ ವ್ಯಕ್ತಿತ್ವವನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ ಎಂದರು.
ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಶ್ರೀಶೈಲ್ ಹುದ್ದಾರ ಮಾತನಾಡಿ ಸಮಾಜದಲ್ಲಿ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ವಿಶ್ವವಿದ್ಯಾಲಯದಿಂದ ನಮಗೆ ಪದವಿ ಪ್ರಮಾಣಪತ್ರ ಬೇಕಾಗಿಲ್ಲ ನಮಗೆ ಜೀವನ ನಿರ್ವಹಣೆ ಮಾಡಲು ಒಳ್ಳೆಯ ಮಾತಿನ ಕೌಶಲ್ಯವಿರಬೇಕು ಹಾಗೂ ನಾವು ಕಲಿತ ಕನ್ನಡದ ಬಗ್ಗೆ ಗೌರವವಿರಬೇಕು ಮತ್ತು ಕನ್ನಡದಲ್ಲಿ ಐ.ಎ.ಎಸ್ ಮತ್ತು ಕೆ.ಎ.ಎಸ್ ತೇರ್ಗಡೆಯಾಗಿ ಉನ್ನತ ಹುದ್ದೆಯನ್ನು ಅಲಂಕರಿಸಬೇಕು ಎಂದು ವಿಧ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಡಾ.ಸಿ.ಎಸ್.ಕುಮ್ಮೂರ ಹಾಗೂ ಡಾ.ಎಂ.ಸಿ ರಾಠೋಡ ಮಾತನಾಡಿದರು. ಸಾಧಕರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಭೂದಾನಿ ಈರಣ್ಣಾ ಅಂಕಲಕೋಟಿ, ಡಾ.ಕೆ.ಎಸ್.ಪಾಟೀಲ, ಪ್ರೋ ಅಂಬೇರಿ ಪಿಳ್ಳೆ, ರೈತದ್ವನಿ ಸಂಪಾದಕ ಬಸವರಾಜ ಕುರಗೋಡಿ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾರ್ಥನೆ ದೀಪಾ, ಭವಾನಿ, ನಾಡಗೀತೆ ಕಾವ್ಯ ಸಂಗಡಿಗರಿಂದ, ಸ್ವಾಗತ ಪ್ರೋ ಡಿ.ಬಿ.ಸೊಗಲದ, ಕಾರ್ಯಕ್ರಮ ನಿರ್ವಹಿಸಿದರು.