ಕಾರವಾರ

ಮುಂಡಗೋಡಿನ ಶಮಿತಾ ನಾಯ್ಕಗೆ ಪ್ರತಿಷ್ಠಿತ "ಅಭಿನವ ನಾಟ್ಯ ರಾಣಿ ಶಾಂತಲೆ ರಾಜ್ಯ ಪ್ರಶಸ್ತಿ" ಗೌರವ

ಮುಂಡಗೋಡಿನ ಶಮಿತಾ ನಾಯ್ಕಗೆ ಪ್ರತಿಷ್ಠಿತ "ಅಭಿನವ ನಾಟ್ಯ ರಾಣಿ ಶಾಂತಲೆ ರಾಜ್ಯ ಪ್ರಶಸ್ತಿ" ಗೌರವ

 ಲೋಕದರ್ಶನ ವರದಿ  

ಮುಂಡಗೋಡ 13 : ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಕರ್ನಾಟಕ ರಾಜ್ಯ ಕಲಾವಿದರ ರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ "ರಾಷ್ಟ್ರೀಯ ನೃತ್ಯ ಕಲಾ ವೈಭವ-2026 ಹಾಗೂ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಂಡಗೋಡಿನ ಪ್ರತಿಭೆ ಶಮಿತಾ ನಾಯ್ಕ ಅವರಿಗೆ ಪ್ರತಿಷ್ಠಿತ "ರಾಷ್ಟ್ರೀಯ ಅಭಿನವ ನಾಟ್ಯ ರಾಣಿ ಶಾಂತಲೆ ರಾಜ್ಯ ಪ್ರಶಸ್ತಿ"ನೀಡಿ ಗೌರವಿಸಲಾಯಿತು.   

ಭಾನುವಾರ ನಡೆದ ಈ ಅದ್ಧೂರಿ ಸಮಾರಂಭವನ್ನು ಕರ್ನಾಟಕ ರಾಜ್ಯ ಸಾಂಸ್ಕೃತಿಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಡಾ. ಜಯಸಿಂಹ ಎಸ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ಪತ್ರಕರ್ತರ ವೇದಿಕೆಯ ಅಧ್ಯಕ್ಷರಾದ ಮಹೇಶ್ ಬಾಬು ಸರ್ವೆ, ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರಾದ ವೀಣಾ ಕಿಡದಾಳ ಹಾಗೂ ಕರ್ನಾಟಕ ರಾಜ್ಯ ಕಲಾವಿದರ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಸುರೇಶ ವಾಗ್ಮೋಡೆ ಸೇರಿದಂತೆ ಹಲವು ಪ್ರಮುಖ ಗಣ್ಯರು ಉಪಸ್ಥಿತರಿದ್ದು, ಪ್ರಶಸ್ತಿ ವಿಜೇತರಿಗೆ ಶುಭ ಕೋರಿದರು. 


ಸುದ್ದಿ ಓದಿ