ಬಳ್ಳಾರಿ

ಶಾಲಿನಿ ವಿ.ಗೆ ಪಿಎಚ್.ಡಿ ಪದವಿ

ಶಾಲಿನಿ ವಿ.ಗೆ ಪಿಎಚ್.ಡಿ ಪದವಿ

ಬಳ್ಳಾರಿ 16: ಸ್ಥಳೀಯ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ  ಕಾಲೇಜಿನ ಭೌತಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಶಾಲಿನಿ ವಿ, ಇವರಿಗೆ ಆಂಧ್ರಪ್ರದೇಶದ ಅನಂತಪುರಮುನಲ್ಲಿರುವ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಪಿಎಚ್.ಡಿ. ಪದವಿಯನ್ನು ಘೋಷಿಸಿದೆ. 

ಶಾಲಿನಿ ವಿ, ಇವರು ಕೃಷ್ಣದೇವರಾಯ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಕೆ.ರಾಮಗೋಪಾಲ್ ಅವರ ಮಾರ್ಗದರ್ಶನದಲ್ಲಿ “ಪಿಜಿಕಲ್, ಕೆಮಿಕಲ್ ಕ್ಯಾರಕ್ಟರೈಜೇಷನ್ ಅಂಡ್ ಸೋರ್ಸ್ ಐಡೆಂಟಿಫಿಕೇಷನ್ ಆಫ್ ಏರೋಸೊಲ್ಸ್ ಓವರ್ ಎ ಟ್ರೋಪಿಕಲ್ ಇಂಡಿಯನ್ ರೀಜನ್” ಎಂಬ ಶೀರ್ಷಿಕೆಯಡಿಯಲ್ಲಿ ಸಂಶೋಧನೆ ನಡೆಸಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದು,  ನಂತರ ನಡೆದ ಮೌಖಿಕ ಪರೀಕ್ಷೆಯಲ್ಲಿ ಉತ್ತೀರ್ಣ ಹಿನ್ನೆಲೆಯಲ್ಲಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಯನ್ನು ಘೋಷಿಸಿ ಅಧಿಸೂಚನೆಯನ್ನು ಹೊರಡಿಸಿದೆ.

ಸುದ್ದಿ ಓದಿ