ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳಿಗೆ ಆರ್ಥಿಕ ಸಂಕಷ್ಟ: ಎಂ.ಬಿ. ಬಸವರಾಜ ಆರೋಪ
ಹೂವಿನಹಡಗಲಿ, ಅ. 8: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಶಕ್ತಿ ಯೋಜನೆಯಿಂದ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟ ಹಾಗೂ ನಷ್ಟಕ್ಕೆ ಸಿಲುಕಿವೆ ಎಂದು ವಿಜಯನಗರ ಜಿಲ್ಲಾ ಮಾಜಿ ಕೆಡಿಪಿ ಸದಸ್ಯ ಎಂ.ಬಿ. ಬಸವರಾಜ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಜುಲೈ 2026ರ ಅಂಕಿ-ಅಂಶಗಳ ಪ್ರಕಾರ ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣದ ಟಿಕೆಟ್ ಮೌಲ್ಯ ಸುಮಾರು ?20,955.99 ಕೋಟಿಯಷ್ಟಾಗಿದೆ. ಈ ಪೈಕಿ ಸರ್ಕಾರದಿಂದ ಸಾರಿಗೆ ನಿಗಮಗಳಿಗೆ ಇನ್ನೂ ?5,651.24 ಕೋಟಿ ಟಿಕೆಟ್ ಬಾಕಿ ಪಾವತಿಯಾಗಬೇಕಿದೆ ಎಂದು ತಿಳಿಸಿದ್ದಾರೆ.
ಸಬ್ಸಿಡಿ ವಿಳಂಬದಿಂದ ಕಾರ್ಯಾಚರಣೆಗೆ ತೊಂದರೆ
ಸರ್ಕಾರದ ಸಬ್ಸಿಡಿ ಮೊತ್ತದ ಪಾವತಿ ವಿಳಂಬವಾಗುತ್ತಿರುವುದರಿಂದ ಸಾರಿಗೆ ನಿಗಮಗಳು ಸಿಬ್ಬಂದಿ ವೇತನ ಪಾವತಿ, ಡೀಸೆಲ್ ಖರೀದಿ ಹಾಗೂ ದಿನನಿತ್ಯದ ಬಸ್ ನಿರ್ವಹಣಾ ವೆಚ್ಚಗಳನ್ನು ಭರಿಸಲು ಸಂಕಷ್ಟ ಎದುರಿಸುತ್ತಿವೆ ಎಂದು ಬಸವರಾಜ ಹೇಳಿದ್ದಾರೆ.