ಕೇಂದ್ರ ತಂಡಕ್ಕೆ ’ಬರ’ದ ಮನವರಿಕೆ,ಮೆಕ್ಕೆಜೋಳ ಬೆಳೆ ಹಾನಿ
ಹೂವಿನಹಡಗಲಿ : “ಜಿಲ್ಲೆಯ ಬರಪೀಡಿತ ತಾಲೂಕುಗಳೆಂದು ಸರಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯ ಅಧ್ಯಯನಕ್ಕಾಗಿ ಕೇಂದ್ರ ಬರ ಅಧ್ಯಯನ ತಂಡ ಸೋಮವಾರ ಜಿಲ್ಲೆಯ ನಾನಾ ಕಡೆಗಳಲ್ಲಿ ಸಂಚರಿಸಿ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಖುದ್ದು ವೀಕ್ಷಣೆ ಮಾಡಿದರು. ಇಟ್ಟಿಗಿ ಗ್ರಾಮದ ಬಳೆಗಾರ ರುದ್ರ್ಪ ಅವರ 3.82 ಎಕರೆ ಮೆಕ್ಕೆಜೋಳ ಬೆಳೆಯನ್ನು ಕೇಂದ್ರ ಅದ್ಯಯನ ತಂಡದ ಜಂಟಿ ಕಾರ್ಯದರ್ಶಿ ಅಜೀತ್ ಕುಮಾರ್ ಸಾಹು ಅವರ ನೇತೃತ್ವದ ತಂಡದಲ್ಲಿ ಉಪ ನಿರ್ದೇಶಕ ಚೇತ್ ರಾಮ್ ಮೀನಾ (ತಂಡದ ಸಂಯೋಜಕರು), ವಿಶೇಷ ಅಧಿಕಾರಿ (ಐ ಎಸ್ ಡಿ ) ಕರ್ನಲ್ ಅಮರೀಂದರ್ ಸಿಂಗ್ ಮತ್ತು ನಿರ್ದೇಶಕ ಡಾ. ಜೆ. ಹರ್ಷ ಅವರು ಭೇಟಿ ನೀಡಿ ಬೆಳೆ ಹಾನಿ, ಖರ್ಚು ವೆಚ್ಚ ಮತ್ತು ಜಾನುವಾರುಗಳಿಗೆ ಮೇವಿನ ಕೊರತೆ, ಕುಡಿಯುವ ನೀರಿನ ಸಮಸ್ಯೆ, ಮೆಕ್ಕೆಜೋಳ, ಈರುಳ್ಳಿ ಮುಂಗಾರು ಮಳೆ ಕೊರತೆ, ತೇವಾಂಶ ಕಡಿಮೆ ಮತ್ತು ಬಿತ್ತನೆ ಕುಂಠಿತ ಮತ್ತಿತ್ತರ ಕಾರಣಗಳಿಂದ ಬೆಳೆ ನಷ್ಟ ಉಂಟಾಗಿರುವ ಬಗ್ಗೆ ಅವಲೋಕನ ಮಾಡಿದರು. ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಬರ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿದರು.ಇದೇ ವೇಳೆ ಜಿ.ಪಂ.ಸಿಇಒ ಗರೀಮ್ ಪನವರ್,ತಹಶಿಲ್ದಾರರ ಕೆ.ಎಂ.ಗುರುಬಸವರಾಜ, ತಾ.ಪಂ.ಇಒ ಪರಮೇಶ್ವರ, ಕೃಷಿ ಉಪ ನಿರ್ದೇಶಕ ಡಿ.ಟಿ.ಮಂಜುನಾಥ, ಹಡಗಲಿ ಸಹಾಯಕ ನಿರ್ದೇಶಕ ಕೆ.ಟಿ.ಮಂಜುನಾಥ,ಸಿಪಿಐ ಮಲ್ಲಪ್ಪ ಹೂಗಾರ, ಇಟ್ಟಿಗಿ ಕೃಷಿ ಅಧಿಕಾರಿ ಪ್ರದೀಪ್,ರೈತ ಸಂಘದ ಮುಖಂಡರು ಇದ್ದರು.