ಶಹರಗ್ರಾಮ ಪಂಚಾಯಿತಿ ಪದಾಧಿಕಾರಿಗಳ ಸಭೆ
ಶಿಗ್ಗಾವಿ 07: ತಾಲೂಕಾ ಕಾಂಗ್ರೆಸ್ ಪಕ್ಷದ ಬ್ಲಾಕ್ ಶಹರಗ್ರಾಮ ಪಂಚಾಯಿತಿ ಪದಾಧಿಕಾರಿಗಳ ಸಭೆ ಪಕ್ಷದ ಸಮಿತಿಗಳ ರಚನೆಯ ಬಗ್ಗೆ ಹಾಗೂ ಕಾರ್ಯದ ಬಗ್ಗೆ ಮಾಹಿತಿ ನೀಡಿ ಅಲ್ಲದೇ ಕಾರ್ಯಕರ್ತರು, ಮುಖಂಡರು ಕ್ಷೇತ್ರದಲ್ಲಿ ಒಗ್ಗಟ್ಟಿನೊಂದಿಗೆ ಕೆಲಸ ಮಾಡಿ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಜಿಲ್ಲೆಯ ಉಸ್ತುವಾರಿ ಮಯೂರ ಜಯವರ್ಮ ಪಕ್ಷದ ಎಲ್ಲ ಮುಖಂಡರಿಗೆ ಸೂಚನೆ ನೀಡಿದರು.
ತಾಲೂಕಿನ ಬಿಸನಳ್ಳಿ ಗ್ರಾಮದಲ್ಲಿ ನಡೆದಪಕ್ಷದ ಸಂಘಟನಾ ಸಮನ್ವಯ ಸಭಾ ಕಾರ್ಯಕ್ರಮವನ್ನು ಸಂವಿಧಾನ ಶಿಲ್ಪಿ ಡಾ. ಬಿ ಆರ್ಅಂಬೇಡ್ಕರ್ ಮಹಾಸ್ಮರಣೆ ದಿನವನ್ನು ಸ್ಮರಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿ ಪುಷ್ಪಗೌರವ ಸಲ್ಲಿಸಿದರು ಕಾಂಗ್ರೆಸ್ ಪಕ್ಷ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುತ್ತಿದ್ದು ಆದರೆ ಅಧಿಕಾರಕ್ಕಾಗಿ ಭ್ರಷ್ಟ ಬಿಜೆಪಿ ಮತದಾರರ ಯಾದಿಯಲ್ಲಿಯ ಮತದಾರರನ್ನು ತೆಗೆದುಹಾಕುವ ಸಂಸ್ಕೃತಿಗೆ ನಾಂದಿ ಹಾಡಿದ್ದು ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಮತದಾರ ಯಾದಿಯನ್ನು ಪರೀಶೀಲಿಸಿ ಮತದಾರರನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು ಜೊತೆಗೆ ಪಕ್ಷದ ಸಂಘಟನೆಯನ್ನು ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಬ್ಲಾಕ್ ಸಮಿತಿ ಶಹರ ಸಮಿತಿ ಪಂಚಾಯತ್ ಸಮಿತಿಗಳನ್ನು ಜೊತೆಗೆ ಬಿ ಎಲ್ ಎ ಗಳನ್ನು ನೇಮಿಸುವಾಗ ನಿಷ್ಠಾವಂತರಿಗೆ ಹಾಗೂ ಕಾರ್ಯಚಟುವಟಿಕೆ ಮಾಡುವವರಿಗೆ ಸ್ಥಾನಮಾನ ಕೊಡಬೇಕು ಎಂದರು.
ಈ ಮತಕ್ಷೇತ್ರ ಮುಖ್ಯಮಂತ್ರಿ ಕ್ಷೇತ್ರವಾಗಿದ್ದು ಇಲ್ಲಿ ಯಾವ ರೀತಿ ಕಾಂಗ್ರೆಸ ಪಕ್ಷ ಸಂಘಟನೆ ಮಾಡಿದ್ದೀರಿ, ಮುಖ್ಯಮಂತ್ರಿ ಒಳಗೊಂಡು ಇಡೀ ಸಚಿವ ಸಂಪುಟ ಬಿಜೆಪಿ ಸರಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದೆ ಅಲ್ಲದೇ ಇನ್ನೇರಡು ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಕಾರಣ ಕಾರ್ಯಕರ್ತರು, ಮುಖಂಡರು ಪಕ್ಷವನ್ನು ಸರಿಯಾಗಿ ಸಂಘಟಿಸದೇ ಹೋದರೆ ಚುನಾವಣೆಯಲ್ಲಿ ನಿಮ್ಮ ಹೋರಾಟದ ಪ್ರತಿಫಲ ಕ್ಷೀಣವಾಗುತ್ತದೆ ಆದ್ದರಿಂದ ಬಿಜೆಪಿ ಸರಕಾರದ ಲೋಪದೋಷಗಳನ್ನು ಸಾರ್ವಜನಿಕರಿಗೆ ಮನದಟ್ಟು ಮಾಡಬೇಕು ಮತ್ತು ಕ್ಷೇತ್ರದಲ್ಲಿ ಬಡವರ ರೈತರ ನೆರೆ ಮತ್ತು ಬರ ಪರಿಹಾರಗಳನ್ನು ಕೊಡದೆ ಸತಾಯಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಾಗರಾಜ್,ಆರ್ ವಿ ವೆಂಕಟೇಶ್,ಜಿಲ್ಲಾಅಧ್ಯಕ್ಷ ಎಂ ಎಂ ಹಿರೇಮಠ್, ಹಾನಗಲ್ ಶಾಸಕ ಶ್ರೀನಿವಾಸ ಮಾನೆ, ತಾಲೂಕ ಬ್ಲಾಕಅಧ್ಯಕ್ಷ ಶಂಭುಲಿಂಗಪ್ಪ ಆಜೂರ, ಸೋಮಣ್ಣ ಬೇವಿನಮರದ, ಯಾಸಿರ್ಖಾನ್ ಪಠಾಣ, ಸಂಜೀವ್ಕುಮಾರ್ ನೀರಲಗಿ,ಎಸ್ಎಸ್ ಶಿವಳ್ಳಿ,ಎಸ್ ವಿ ಪಾಟೀಲ್, ಶಶಿಧರ್ ಎಲಿಗಾರ, ನೂರಮ್ಮದ್ ಮಳಗಿ ಮಂಜುನಾಥ್ ಮಣ್ಣಣ್ಣವರ್,ಗದಿಗೆಪ್ಪ ಬಳ್ಳಾರಿ, ಚಂದ್ರುಕೊಡ್ಲಿವಾಡ, ಕರೀಂ ಮೊಗಲಲ್ಲಿ ಸೇರಿದಂತೆ ರಾಜ್ಯ, ಜಿಲ್ಲೆ ಹಾಗೂ ತಾಲೂಕ ಪದಾಧಿಕಾರಿಗಳು ಚುನಾಯಿತ ಪ್ರತಿನಿಧಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.