ನಿವೃತ್ತ ಯೋಧಗೆ ಸೇವಾರತ್ನ ಪ್ರಶಸ್ತಿ
ಇಂಡಿ 19: ತಾಲೂಕಿನ ಇಂಗಳಗಿ ಗ್ರಾಮದ ನಿವೃತ್ತ ಯೋಧ ತುಕಾರಾಮ ಹೊಸಮನಿ ಅವರಿಗೆ ಇಂಡಿ ಓಂಕಾರಾಶ್ರಮದ ಸಿದ್ದಾರೂಢ ಮಠದ ವತಿಯಿಂದ ಗುರುವಾರ ಸಿಧ್ಧಚೇತನ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅವರು ಸೇನೆಯಲ್ಲಿ ಸೇವೆ ಸಲ್ಲಿಸಿದ್ದರಿಂದ ರಕ್ಷಣಾ ಕ್ಷೇತ್ರದಲ್ಲಿ ಸಾಧನೈದ ಪ್ರಯುಕ್ತ ಈ ಓಂಕಾರಾಶ್ರಮದ ಪೀಠಾಧಿಪತಿ ಡಾ. ಸ್ವರೂಪಾನಂದ ಶ್ರೀಗಳು ಪ್ರಶಸ್ತಿ ವಿತರಣೆ ಮಾಡಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಆಳೂರ ಸಿದ್ದಾರೂಢ ಮಠದ ಶಂಕರಾನಂದ ಸ್ವಾಮೀಜಿ, ಆರ್.ವಿ. ಪಾಟೀಲ ಮತ್ತಿತರರು ಇದ್ದರು.