ವಿಶೇಷ ಅಗತ್ಯತೆ ಉಳ್ಳ ಮಕ್ಕಳ ಸೇವೆ ಮಾಡುವುದುದೇವರ ಸೇವೆ ಮಾಡಿದಂತೆ: ಗೀತಾಂಜಲಿ ತೆಪ್ಪದ
ಶಿಗ್ಗಾವಿ 06: ಸಮಾಜ ವಿಶೇಷ ಅಗತ್ಯತೆ ಉಳ್ಳ ಮಕ್ಕಳನ್ನು ಕಾಳಜಿ ಪೂರ್ಣಕವಾಗಿ ಗುರುತಿಸಿ ಉತ್ತಮರೀತಿಯಲ್ಲಿ ನಡೆದುಕೊಳ್ಳಬೇಕು. ಅಂತಹ ವ್ಯಕ್ತಿಗಳ ಸೇವೆ ಮಾಡುವುದುದೇವರ ಸೇವೆ ಮಾಡಿದಂತೆ, ಅವರನ್ನು ಸಮಾಜದ ಮುಖ್ಯ ಭೂಮಿಕೆಗೆತಂದು, ಅವರಕೊಡುಗೆಯನ್ನು ಸಮಾಜ ಪಡೆದುಕೊಳ್ಳುವಂತಾಗಬೇಕು ಎಂದುಕ್ಷೇತ್ರ ಸಮನ್ವಯಅಧಿಕಾರೀಗೀತಾಂಜಲಿ ತೆಪ್ಪದ ಹೇಳಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾಇಲಾಖೆ ಹಾವೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಶಿಗ್ಗಾವಿ ವತಿಯಿಂದ ಪಟ್ಟಣದಗುರುಭವನದಲ್ಲಿ ಆಯೋಜಿಸಿದ್ದ ಸಮಗ್ರ ಶಿಕ್ಷಣ ಕರ್ನಾಟಕಯೋಜನೆಯಡಿ 6 ರಿಂದ 16 ವರ್ಷದೊಳಗಿನ 1ರಿಂದ 10ನೇ ತರಗತಿಓದುತ್ತಿರುವ ವಿಶೇಷ ಅಗತ್ಯತೆವುಳ್ಳ ಮಕ್ಕಳಿಗೆ ವೈಧ್ಯಕೀಯ ಮೌಲ್ಯಾಂಕನ ಶಿಭರವನ್ನು ಉದ್ಘಾಟಿಸಿ ಮಾತನಾಡಿದಅವರು, ಶಿಕ್ಷಣ ಇಲಾಖೆ ಒದಗಿಸುವಸಾಧನ ಸಲಕರಣೆಗಳನ್ನು ಸದುಪಯೋಗ ಪಡೆಸಿಕೊಂಡು ಶೈಕ್ಷಣಿಕ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳುವಂತೆ ಪಾಲಕರು ಸಹಕರಿಸಬೇಕುಎಂದು ಹೇಳಿದರು.
ಡಾ. ಬ್ರಾಜೇಶ ಶುಕ್ಲಾ ಅಲೀಂಕೊ ಬೆಂಗಳೂರು, ಡಾ.ಜೆ.ಕೆ.ಹಿರೇಮಠ ಮನೋವಿಕಾಸ ಹುಬ್ಬಳ್ಳಿ, ಡಾ.ಶಂಕರ ಸ್ವಾಮಿ, ಡಾ.ಈಶ್ವರ, ಡಾ.ಸತೀಶ, ಡಾ.ಶಶಿಕಾಂತರವರು ಮುನ್ನೂರಕಿಂತ ಹೆಚ್ಚಿನ ವಿಶೇಷ ಅಗತ್ಯತೆಉಳ್ಳ ಮಕ್ಕಳನ್ನು ಪರೀಕ್ಷಿಸಿ, ಪಾಲಕರಿಗೆ ಸಲಹೆ ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಬಸವರಾಜ ಬಸರೀಕಟ್ಟಿ ಬಿ.ಆರ್.ಪಿ, ಎಸ್.ಎಮ್.ಮೀಶಿ ಸಿ.ಆರ್.ಪಿ, ಶಿಕ್ಷಕರಾದ ವಾಯ್.ಎಸ್.ಮಿರಜಕರ, ಸಿ.ಎನ್.ಕಲಕೋಟಿ, ಎಚ್.ಎಚ್.ರಟ್ಟಿಹಳ್ಳಿ, ಟಿ.ಕೆ.ಪಾಟೀಲ,ರಂಜನಾ ಬೆಣ್ಣಿ, ನಾಗಪ್ಪಾ ಬೆಂತೂರ, ಮುದುಕಪ್ಪಾ ಸೋಲಾರಗೊಪ್ಪ ಅಂ.ಸಂಘದಅಧ್ಯಕ್ಷ ಸೇರಿದಂತೆ ಬಹುತೇಕ ಪಲಾನುಭವಿಗಳು ಮತ್ತು ಪಾಲಕರು ಹಾಜರಿದ್ದರು.