ಯಶಸ್ಸು ಪಡೆಯಲು ಸೇವೆ ಮುಖ್ಯ: ಮೋನಿಕಾ ಸಾವಂತ
ಮಹಾಲಿಂಗಪುರ 15: ಲಯನ್ಸ್ ಕ್ಲಬ್‌ನ ಗುರಿಯ ಮೂಲ ಸೇವೆ. ಯಾವುದೇ ರೀತಿ ಹಿಂದೆ, ಮುಂದೆ ನೋಡದೆ ಸದಾ ಸೇವೆ ಮಾಡಿ ಅವಾಗ ಯಶಸ್ಸು ತಾನಾಗಿಯೇ ಬರುವುದು. ಕ್ರಿಯಾಶೀಲ ವ್ಯಕ್ತಿತ್ವ ಕಲ್ಪಿಸುವುದರ ಜೊತೆಗೆ ಒಳ್ಳೆಯ ಮನೋಭಾವ ಬೆಳೆಸುವುದು ಲಯನ್ಸ್ ಸಂಸ್ಥೆಯ ಕಾರ್ಯವಾಗಿದೆ ಎಂದು ಪದಗ್ರಹಣ ಅಧಿಕಾರಿ ಲಯನ್ ಮೋನಿಕಾ ಸಾವಂತ ಹೇಳಿದರು.
ಸ್ಥಳೀಯ ವೈದ್ಯರ ಸಭಾಭವನದಲ್ಲಿ ನಡೆದ ಲಯನ್ಸ್ ಕ್ಲಬ್ ಆಫ್ ಮಹಾಲಿಂಗಪುರ ಗ್ರೀನ್ ಬೇಸಿನ್ 2025-26ನೇ ಸೇವಾವಧಿಗೆ ಪದಾಧಿಕಾರಿಗಳ ಪದವಿ ಪ್ರಧಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಂತರ ಮುಖ್ಯ ಅತಿಥಿ ಮಹಾಲಿಂಗಪುರದ ಕಡಪಟ್ಟಿ ಇಂಪ್ರಾ ಪ್ರೈವೇಟ್ ಲಿಮಿಟೆಡ್ ನ ಎಂ.ಡಿ ಸುನೀಲ ಕಡಪಟ್ಟಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಲಯನ್ಸ್ ಸಂಸ್ಥೆಗೆ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ಲಯನ್ ಸಿದ್ದು ನಕಾತಿ, ಕಾರ್ಯದರ್ಶಿಯಾಗಿ ಲಯನ್ ಡಾ. ವಿದ್ಯಾ ದಿನ್ನಿಮನಿ, ಖಜಾಂಚಿಯಾಗಿ ಲಯನ್ ಪ್ರಶಾಂತ ಅಂಗಡಿ ಆಯ್ಕೆಯಾದರು. ಅವರಿಗೆ ಅಧಿಕಾರ ಹಸ್ತಾಂತರಿಸಿ ಪ್ರತಿಜ್ಞಾವಿಧಿ ಬೋಧಿಸಿ, ನೂತನ ಸದಸ್ಯರಿಗೆ ಸಂಸ್ಥೆಗೆ ಬರಮಾಡಿಕೊಂಡರು.
ನಿಕಟಪೂರ್ವ ಅಧ್ಯಕ್ಷ ಲಯನ್ ರಾಜು ತಾಳಿಕೋಟಿ, ಕಾರ್ಯದರ್ಶಿ ಲಯನ್ ಡಾ.ಉಮಾ ಗುಂಡಾ, ಖಜಾಂಚಿ ಲಯನ್ ಸಂಜು ಶಿರೋಳ, ಅಶ್ವಿನಿ ಕೋಳಿಗುಡ್ಡ, ಶೇಖರ್ ಅಂಗಡಿ, ಚಂದ್ರು ಗೊಂದಿ, ಪ್ರಕಾಶ್ ತಾಳಿಕೋಟಿ,ಸಂದೀಪ್ ಚಿಕ್ಕೋರ್ಡಿ, ಹುಚ್ಚೇಶ್ ವಡ್ಡರ, ಡಾ.ಶಕುಂತಲಾ ಸಂಶಿ, ಶ್ರೀಶೈಲ್ ಕಾರಜೋಳ, ಡಾ. ಜಬ್ಬರ್ ಯಕ್ಷಂಬಿ, ಡಾ. ಅನುಪ ಹಂಚಿನಾಳ, ಡಾ. ರಮೇಶ್ ಪತ್ತಾರ, ಉಮೇಶ್ ಸಿದ್ನಾಳ,ಡಾ.ಸುರೇಖಾ ಚನ್ನಾಳ, ಅರ್ಚನಾ ಕಡಪಟ್ಟಿ, ಪೂಜಾ ಅಂಗಡಿ, ಸುಚಿತಾ ತಾಳಿಕೋಟಿ, ಡಾ.ವಿಶ್ವನಾಥ ಗುಂಡಾ, ಡಾ.ಅಶೋಕ್ ದಿನ್ನಿಮನಿ, ಸೋಮು ಸಂಶಿ, ಸಂಜಯ ಅಂಬಿ, ರಮೇಶ ಶೆಟ್ಟರ್, ರಾಜು ಡಾಂಗೆ, ಡಾ.ವೆಂಕಟೇಶ್ ಬುರುಡ ಸೇರಿದಂತೆ ಜಮಖಂಡಿ, ಮುಧೋಳ, ಅಥಣಿ, ಇಳಕಲ್ ನ ಲಯನ್ಸ್ ಸಂಸ್ಥೆಯ ಸದಸ್ಯರು ಇದ್ದರು.ಡಾ.ಎಂ ಎಸ್ ಚನ್ನಾಳ ನಿರೂಪಿಸಿದರು, ಡಾ.ಮಾರುತಿ ಮೇದಾರ ವಂದಿಸಿದರು.