ತಂಬ್ರಹಳ್ಳಿ ಕಸಾಪ ಹೋಬಳಿ ಘಟಕದ ಸೇವಾ ಸ್ವೀಕಾರ ಸಮಾರಂಭ
ಹಗರಿಬೊಮ್ಮನಹಳ್ಳಿ. 28: ತಾಲೂಕಿನ ತಂಬ್ರಹಳ್ಳಿ ಗ್ರಾಮದ ಕಿ.ಪೊ.ಗು. ಫ್ರೌಢ ಶಾಲೆಯ ಸಭಾಭವನದಲ್ಲಿ ಬುಧವಾರ ಕನ್ನಡ ಸಾಹಿತ್ಯ ಪರಿಷತ್ತು ತಂಬ್ರಹಳ್ಳಿ ಹೋಬಳಿ ಘಟಕದ ಅಧ್ಯಕ್ಷರ ಹಾಗೂ ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ ಸಮಾರಂಭ ಕಾರ್ಯಕ್ರಮ ಜರುಗಿತು.
ಈ ವೇಳೆ ಅಕ್ಕಿ ಕೊಟ್ರ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯೆ, ಕಲೆ, ಸಾಹಿತ್ಯ ಪಾಂಡಿತ್ಯವು ಪರಿಶ್ರಮದ ಪಠಣದಿಂದ ಮಾತ್ರ ಪಡೆಯಲು ಸಾಧ್ಯ, ಗ್ರಾಮೀಣ ಭಾಗದಲ್ಲಿ ಕಸಾಪ ವತಿಯಿಂದ ಸಾಹಿತ್ಯಿಕ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜನೆ ಮಾಡುತ್ತಾ ಕನ್ನಡದ ಕಂಪನ್ನು ಕನ್ನಡಿಗರ ಮನಸ್ಸಿನಾಳಕ್ಕೆ ಇಳಿಯುವಂತೆ ಮಾಡುವಲ್ಲಿ ಪ್ರತಿಯೊಬ್ಬರು ಶ್ರಮವಹಿಸಬೇಕಿದೆ ಎಂದರು.
ಅಖಂಡ ಬಳ್ಳಾರಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ನಿಷ್ಠಿ ರುದ್ರ್ಪ ಮಾತನಾಡಿ ಕಸಾಪ ಸದಸ್ಯತ್ವ ಪಡೆದುಕೊಂಡ ಪ್ರತಿಯೊಬ್ಬ ಸದಸ್ಯ ಕನ್ನಡದ ಏಳ್ಗೆ ಬಗ್ಗೆ ಯೋಚಿಸುತ್ತಾ ದತ್ತಿ ಉಪನ್ಯಾಸಗಳನ್ನು ಮಾಡುತ್ತಾ ,ಪರಿಷತ್ಗೆ ಸದಸ್ಯತ್ವ ಮಾಡಿಸಬೇಕು ಇದರ ಜೊತೆ ಕನ್ನಡದ ಸುಗಂಧವನ್ನು ಸಾರುವ ಕನ್ನಡ ಶಾಲೆಗಳಲ್ಲಿ ಹೆಚ್ಚೆಚ್ಚು ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆ ಕಸ್ತೂರಿ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸುವ ಕಾರ್ಯ ನಿರಂತರವಾಗಬೇಕಿದೆ ಎಂದು ಕರೆ ನೀಡುತ್ತಾ ನೂತನ ಪದಾಧಿಕಾರಿಗಳ ಹಾಗೂ ಸದಸ್ಯರಿಗೆ ಸೇವಾ ದೀಕ್ಷೆ ನೀಡಿದರು.
ಹಿರಿಯ ಸಾಹಿತಿ ಡಿ.ರಾಮನಮಲಿ, ಮೇಟಿ ಕೊಟ್ರ್ಪ, ಹೂಬಳಿ ಘಟಕದ ಅಧ್ಯಕ್ಷ ಎಸ್.ವಿ.ಪಾಟೀಲ್, ನಿವೃತ್ತ ಇಒ ವೆಂಕೊಬಪ್ಪ ಮಾತನಾಡಿದರು, ತಾಲೂಕಾಧ್ಯಕ್ಷ ಗೂಳಪ್ಪ ಹುಲಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂಧರ್ಭದಲ್ಲಿ ಬಣಕಾರ ತೋಟಪ್ಪ, ಕಿ.ಪೊ.ಗು. ಫ್ರೌಢ ಶಾಲೆಯ ಆಡಳಿತ ಮಂಡಳಿಯ ಸದಸ್ಯ ಪಿ.ಕೊಟ್ರೇಶ್, ಗೌರಜ್ಜನವರ ಬಸವರಾಜ, ಗ್ರಾ.ಪಂ.ಉಪಾಧ್ಯಕ್ಷ ಆನೇಕಲ್ ದೊಡ್ಡಬಸವರಾಜ, ಸದಸ್ಯ ಮೆಹಬೂಬ ಬಾಷಾ, ಕಿ.ಪೊ.ಗು. ಫ್ರೌಢ ಶಾಲೆಯ ಮುಖ್ಯ ಗುರುಗಳಾದ ಕೆ.ವವಿ.ಲೋಕೇಶ್, ಎಬಿಟಿಎಂ ಕಾಲೇಜ್ನ ಉಪನ್ಯಾಸಕ ಬಸವರಾಜಯ್ಯ, ಕಸಾಪ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಮಾರುತೇಶ್,ಸದಸ್ಯ ಶ್ರೀನಿವಾಸ, ಹೋಬಳಿ ಘಟಕದ ಕಾರ್ಯದರ್ಶಿ ಪರಶುರಾಮ ಸುಣಗಾರ, ಕೋಶಾಧಿಕಾರಿ ಗೌರಜ್ಜನವರ ಗೀರೀಶ್, ಸದಸ್ಯರಾದ ಪಾಂಡುರಂಗಪ್ಪ, ಯು.ಗೋಣಿಬಸಪ್ಪ, ಆರ್.ನಾಗರತ್ನ, ಎಸ್.ಬಿ.ಹರೀಶ್, ಶ್ರೀಕಾಂತ್ ಕಡ್ಡಿ, ಡಿ.ಮಂಜುನಾಥ್, ನಿವೃತ್ತ ಶಿಕ್ಷಕ ರುದ್ರ್ಪ, ಶಿಕ್ಷಕಿ ಪರಿಮಳ, ಶಾಲಾ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.
ಕಿ.ಪೊ.ಗು. ಫ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು,ಆನೇಕಲ್ ಕೊಟ್ರೇಶ್ ಸ್ವಾಗತಿಸಿದರೆಸಿ.ಹುಸೇನ ಬಾಷಾ ನಿರೂಪಿಸಿ ಯು.ಗೋಣೆಪ್ಪ ವಂದಿಸಿದರು.