ಸಂಕೇಶ್ವರದಲ್ಲಿ ಸರಣಿ ಮನೆಗಳ ಕಳ್ಳತನ : ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ದೋಚಿದ ಕಳ್ಳರು : ಬೆಚ್ಚಿಬಿದ್ದ ನಾಗರಿಕರು

ಸಂಕೇಶ್ವರದಲ್ಲಿ ಸರಣಿ ಮನೆಗಳ ಕಳ್ಳತನ : ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ದೋಚಿದ ಕಳ್ಳರು : ಬೆಚ್ಚಿಬಿದ್ದ ನಾಗರಿಕರು

ಬೆಳಗಾವಿ : ಮನೆಯಲ್ಲಿ ಯಾರಿಲ್ಲ ಎಂಬ ಸಮಯ ಸಾಧಿಸಿಕೊಂಡ ಖದೀಮ ಕಳ್ಳರು ಮೂರು ಕಡೆಯ ಸರಣಿ ಮನೆಗಳ್ಳ ಮಾಡಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣ ದೋಚಿ ಫರಾರಿಯಾಗಿರುವ ಘಟನೆ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿ ಬುಧವಾರ ತಡರಾತ್ರಿ ನಡೆದಿರುವದು ವರದಿಯಾಗಿದೆ. 

     ನಗರದ ಹನುಮಾನ ನಗರದ ಬಳಿ ಇರುವ ಮನೆಯೊಂದರಲ್ಲಿ ಯಾರಿಲ್ಲ‌ ಎನ್ನುವ ಸಮಯವನ್ನು ಸಾಧಿಕೊಂಡ ಖದೀಮರು ಮನೆಯಲ್ಲಿದ್ದ ಸುಮಾರು 20 ತೋಲಿ (200 ಗ್ರಾಂ) ಚಿನ್ನಾಭರಣವನ್ನು ದೋಚಿಕೊಂಡು ಫರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. 

   ಅದೇ ರೀತಿ ಸುಮಾರು 2 ಲಕ್ಷ ನಗದು ಹಣವನ್ನು ಕೂಡಾ ಕಳ್ಳರು ಇದೆ ಮನೆಯಿಂದ ದೋಚಿದ್ದಾರೆ ಎಂದು ಹೇಳಲಾಗುತ್ತಿದೆ. 

 ಆದೇ ರೀತಿಯಾಗಿ ಸಂಕೇಶ್ವರದ ಹೌಸಿಂಗ್ ‌ಕ್ವಾಲನೀಯ‌ ಮನೆ ಹಾಗೂ ನಿಡಸೋಸಿ ರಸ್ತೆಯ ಮನೆಯೊಂದರಲ್ಲೂ ಲಕ್ಷಾಂತರ ಮೌಲ್ಯದ ಕಳ್ಳತನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. 

   ಈ ಮೂರು ಮನೆಗಳನ್ನು ಕಳ್ಳರು ಬುಧವಾರ ಒಂದೇ ರಾತ್ರಿ ದೋಚಿರುವದರಿಂದ ಸಂಕೇಶ್ವರ ನಗರದಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿದೆ. ಅಲ್ಲದೆ ಪೊಲೀಸರು ರಾತ್ರಿಯಲ್ಲಿ ಸಂಕೇಶ್ವರದಲ್ಲಿ ಗಸ್ತು ತಿರುದೆ ಇರುವ ಹಿನ್ನೆಲೆಯಲ್ಲಿ ನಾಗರಿಕರು ಪೊಲೀಸ ವ್ಯವಸ್ಥೆ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ.

ಸುದ್ದಿ ಓದಿ