ಮಹಲಿಂಗಪುರ

ಪರೀಕ್ಷಾ ಫಲಿತಾಂಶಕ್ಕೆ ಸೆಲ್ಫಿ ಬಾಕ್ಸ್‌ ಆಕರ್ಷಣೆ

ಪರೀಕ್ಷಾ ಫಲಿತಾಂಶಕ್ಕೆ ಸೆಲ್ಫಿ ಬಾಕ್ಸ್‌ ಆಕರ್ಷಣೆ
ಮಹಾಲಿಂಗಪುರದ ಎಸ್‌ಸಿಪಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೆಲ್ಫಿ ಬಾಕ್ಸ್‌ ಅಳವಡಿಸಲಾಗಿತ್ತು.

ಮಹಾಲಿಂಗಪುರ 11: ಸ್ಥಳೀಯ ಕೆ.ಎಲ್‌.ಇ ಸಂಸ್ಥೆಯ ಎಸ್‌.ಸಿ.ಪಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಏ.10 ರಂದು ಪರೀಕ್ಷಾ ಫಲಿತಾಂಶ ವೀಕ್ಷಿಸಲು ಬರುವ ಮಕ್ಕಳು ಮತ್ತು ಪಾಲಕರಿಗೆ ವಿಶೇಷ ಅಲಂಕೃತ ಸೆಲ್ಫಿ ಬಾಕ್ಸ್‌ ಗಮನ ಸೆಳೆಯಿತು. ಶಾಲೆಯ ಎಲ್‌ಕೆಜಿಯಿಂದ 7ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲಾಗಿತ್ತು. ವೀಕ್ಷಣೆಗೆ ಪಾಲಕರೊಂದಿಗೆ ಬಂದ ಮಕ್ಕಳು ಅಂಕಪಟ್ಟಿಯೊಂದಿಗೆ ಸೆಲ್ಫಿ ಬಾಕ್ಸ್‌ನಲ್ಲಿ ನಿಂತು ಕ್ಯಾಮೆರಾಗೆ ಪೋಜ್ ಕೊಟ್ಟು ಸಂಭ್ರಮಿಸಿದರು. ಪಾಲಕರು ಮತ್ತು ಶಿಕ್ಷಕರು ಕೂಡ ಪಾಸಾಸ ಮಕ್ಕಳೊಂದಿಗೆ ಸೆಲ್ಫಿಗೆ ಮುಖ ಕೊಟ್ಟು ಸಡಗರ ಹಂಚಿಕೊಂಡರು.  


ಸುದ್ದಿ ಓದಿ