ಮಹಲಿಂಗಪುರ

ಸ್ವಾವಲಂಬನೆಯೇ ನಿಜವಾದ ಗುರುದಕ್ಷಿಣೆ : ಎಸ್‌.ಎಮ್‌.ಮುಲ್ಲಾ.

ಸ್ವಾವಲಂಬನೆಯೇ ನಿಜವಾದ ಗುರುದಕ್ಷಿಣೆ : ಎಸ್‌.ಎಮ್‌.ಮುಲ್ಲಾ.

ಮಹಾಲಿಂಗಪುರ 06: ಮುಂದೆ ಗುರಿ ಇದ್ದು, ಹಿಂದೆ ಗುರುವಿದ್ದಾಗ ಮಾತ್ರ ಜೀವನ ಸಾರ್ಥಕವಾಗಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಎಮ್‌.ಮುಲ್ಲಾ ಹೇಳಿದರು. 

ಸಮೀಪದ ರನ್ನಬೆಳಗಲಿಯ ಬಿವಿವಿಎಸ್ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ, ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಂದೆ ತಾಯಿ ಮೊದಲ ಗುರುವಾದರೆ, ಅಕ್ಷರ ಕಲಿಸಿ ವಿದ್ಯೆ ನೀಡಿ ಮಾರ್ಗ ತೋರುವ ಗುರು ಸ್ವಾವಲಂಬಿಯಾಗಲು ಕಲಿಸುತ್ತಾರೆ. ಸ್ವಾವಲಂಬಿಯಾಗಿ ಸನ್ಮಾರ್ಗದಲ್ಲಿ ನಡೆದರೆ ಅದೇ ಗುರು ದಕ್ಷಿಣೆ ಎಂದರು. 

ಕುಳಲಿ ಸಿದ್ಧಾರೂಢ ಮಠದ ಎಂದು ಬಸವ ಸಮರ್ಥ ಶ್ರೀ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ದೇವರು ಬರೆದ ಹಣೆಬರಹವನ್ನು ಓದಲು ಕಲಿಸುವ ಗುರು ದೇವರಿಗಿಂತ ಶ್ರೇಷ್ಠ. ರೈತ,ಗುರು, ಸೈನಿಕ ಇವರು ಸಮಾಜದ ಶ್ರೇಷ್ಠ ಗುರುಗಳು, ಸರ್ವರೂ ಅವರ ಋಣ ತೀರಿಸಲು ಶ್ರಮಿಸಬೇಕೆಂದರು. 

ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ 12 ವಿದ್ಯಾರ್ಥಿಗಳು ಹಾಗೂ ನೀಟ್ ಹಾಗೂ ಐಐಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭಿಷೇಕ ಚಿಮ್ಮಡ, ವಿಶ್ವನಾಥ ದರೂರ ಇವರನ್ನು ಗೌರವಿಸಲಾಯಿತು, 

ಸಂಸ್ಥೆಯ ಕಾರ್ಯದರ್ಶಿ ಪಂಡಿತ ಪೂಜಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಮುಖ್ಯೋಪಾಧ್ಯಾಯ ಎಂ,ಎಸ್‌.ಗಾಣಿಗೇರ,ಸಿಆರ್‌ಪಿ ಮಲ್ಲಿಕಾರ್ಜುನ ಅರಬಿ, ಎಸ್‌.ಬಿ.ರಡ್ಡೇರಟ್ಟಿ, ಎಸ್‌.ಬಿ.ಸಾಬೋಜಿ, ಎ.ಎಂ.ಕಂಬಾರ,ವಿ,ಕೆ.ಬಕರೆ,ಎ.ಜಿ.ಮೂಡಲಗಿ,ಎಸ್‌.ಐ.ಭದ್ರಶೆಟ್ಟಿ, ಎಂ.ಸಿ.ಘಂಟಿಮಠ ಇದ್ದರು. 


ಸುದ್ದಿ ಓದಿ