ಬಳ್ಳಾರಿ

ಮಹಾತ್ಮರ ಪುಣ್ಯಸ್ಮರಣೆ: ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಮಹಾತ್ಮರ ಪುಣ್ಯಸ್ಮರಣೆ: ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಬಳ್ಳಾರಿ 28: ಬಂಡ್ರಾಳ್ ಗ್ರಾಮದ ಪೊಂಪಯ್ಯತಾತನವರ ಮಠದಲ್ಲಿ ದಿ. 25ರಂದು ಬೆಳಿಗ್ಗೆ 10-00ಗಂಟೆಗೆ ಉಜ್ಜಯಿನಿ ಸಿದ್ದಲಿಂಗ ಭಗವತ್ಪಾದರ 86ನೇ ಪುಣ್ಯಸ್ಮರಣೆ, ಪುಟ್ಟರಾಜ ಕವಿ ಗವಾಯಿಗಳಿ 12ನೇ ಪುಣ್ಯಸ್ಮರಣೆ ಹಾಗೂ ಬಂಡ್ರಾಳ್ ಮಠದ ಪೊಂಪಯ್ಯ ತಾತನವರ 30ನೇ ಪುಣ್ಯಸ್ಮರಣೆ ಅಂಗವಾಗಿ ಪುಟ್ಟರಾಜ ಕವಿಗವಾಯಿಗಳ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಟ್ರಸ್ಟ್‌ ಹಾಗೂ ಸ್ಪಂದನಾ ಬ್ಲಡ್‌ಬ್ಯಾಂಕ್ ಬಳ್ಳಾರಿ ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ಶಿಬಿರ ನಡೆಯಿತು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಡ್ರಾಳ್ ಮೃತ್ಯುಂಜಯ್ಯಸ್ವಾಮಿ ವಕೀಲರು ವಹಿಸಿದ್ದರು ಅವರು ಮಾತನಾಡಿ ಸ್ವಯಂ ಪ್ರೇರಿತವಾಗಿ ಎಲ್ಲರೂ ರಕ್ತದಾನ ಮಾಡಲು ಮುಂದಾಗಬೇಕು, ರಕ್ತದಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು, ಪ್ರತಿ ವರ್ಷವೂ ಕೂಡ ನಾವು ಉಚಿತ ಆರೋಗ್ಯ ತಪಾಸಣಾ ಶಿಬಿರ ಏರಿ​‍್ಡಸುತ್ತಿದುದ, ಗ್ರಾಮದ ಸಕಲರು ಇದರಲ್ಲಿ ಭಾಗವಹಿಸಿ ಇದರ ಉಪಯೋಗವನ್ನು ಪಡೆದುಕೊಳ್ಳಬೇಕು. ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಗ್ರಾಮೀಣ ಭಾಗದ ಜನರಿಗೆ ಆಶಾಕಿರಣವಾಗಿದೆ ಎಂದು ತಿಳಿಸಿದರು 

ಕಾರ್ಯಕ್ರಮದಲ್ಲಿ ಸ್ಪಂದನಾ ಬ್ಲಡ್‌ಬ್ಯಾಂಕ್‌ನ ಮುಖ್ಯಸ್ಥ ಡಾ.ಎಂ.ಎಂ.ಕುಡಪಾಲಿ ಮಾತನಾಡಿ ರಕ್ತದಾನ ಮಹಾದಾನ, ತೊಂದರೆ ಇದ್ದವರಿಗೆ ರಕ್ತದಾನ ಮಾಡುವುದರ ಮೂಲಕ ಅವರ ಜೀವವನ್ನೇ ಉಳಿಸಬಹುದಾಗಿದೆ.  ಕೊರೋನಾ ನಂತರ ಎಲ್ಲಾ ಕಡೆ ರಕ್ತದ ಅವಶ್ಯಕತೆ ಇದ್ದು, ಇದರ ಮಹತ್ವವನ್ನು ಅರಿತು ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ರಕ್ತದಾವನ್ನು ಮಾಡಬೇಕು.  ಅದರಲ್ಲಿ ಯುವಕರು ಇಂತಹ ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ಇತರರಿಗೆ ಆದರ್ಶವಾಗಬೇಕೆಂದು ಕರೆ ಕೊಟ್ಟರು. 

ಶಿಬಿರದಲ್ಲಿ ಡಾ. ಪ್ರಕಾಶ್‌ಪಾಟೀಲ್, ಮಂಜುನಾಥಸ್ವಾಮಿ ಮತ್ತು ಸ್ಪಂದನಾ ಬ್ಲಡ್‌ಬ್ಯಾಂಕ್ ಬಳ್ಳಾರಿ ಸಿಬ್ಬಂದಿ ಭಾಗವಹಿಸಿದ್ದರು. ಸ್ವ್‌ಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ 50ಕ್ಕೂ ಹೆಚ್ಚು ಜನ ರಕ್ತದಾನವನ್ನು ಮಾಡಿದರು. ಉಚಿತ ಆರೋಗ್ಯ ಶಿಬಿರದಲ್ಲಿ ಸುಮಾರು 300ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.  ಶಿಬಿರದಲ್ಲಿ ಭಾಗವಹಿಸಿದವರಿಗೆ ರೋಗಕ್ಕೆ ಸಂಬಂಧಿಸಿದ ಓಷಧಿಗಳನ್ನು ಉಚಿತವಾಗಿ ನೀಡಲಾಯಿತು. ರಕ್ತದಾನದಲ್ಲಿ ಭಾಗವಹಿಸಿದವರಿಗೆ, ರಕ್ತದಾನಮಾಡಿದವರಿಗೆ ಪ್ರಮಾಣ ಪತ್ರ, ಹಣ್ಣು ಮತ್ತು ಪಾನಿಯಗಳನ್ನು ನೀಡಲಾಯಿತು. 


ಸುದ್ದಿ ಓದಿ