ಬಳ್ಳಾರಿ

ಅಭಯ ಫೌಂಡೇಶನ್ ಸಂಸ್ಥೆಗೆ ನೂತನ ಪದಾಧಿಕಾರಿಗಳ ಆಯ್ಕೆ

ಅಭಯ ಫೌಂಡೇಶನ್ ಸಂಸ್ಥೆಗೆ ನೂತನ ಪದಾಧಿಕಾರಿಗಳ ಆಯ್ಕೆ

ಬಳ್ಳಾರಿ 11: ನಗರದ ಶ್ರೀ ಮೇಧಾ ಕಾಲೇಜಿನಲ್ಲಿ ಅಭಯ ಫೌಂಡೇóನ್ ಸಂಸ್ಥೆಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಈ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಾಮಕೃಷ್ಣ ರೆಣಿಗುತ್ತಲು ಅವರು ಮಾತನಾಡಿ, ಅಭಯ ಫೌಂಡೇಷನ್ ಸಂಸ್ಥೆ ಹುಟ್ಟಿ ನೂರು ದಿನಗಳ ಸಂಭ್ರಮ ಮತ್ತು ಪದಾಧಿಕಾರಿಗಳ ಆಯ್ಕೆ ನಡೆದಿರುವುದು ಸಂತಸದ ಸಂಗತಿ. ಈ ನೂರು ದಿನಗಳಲ್ಲಿ ಕೊರೋನಾ ಪೀಡಿತ ಸಾರ್ವಜನಿಕರಿಗೆ, ವೈದ್ಯರಿಗೆ, ಸಿಬ್ಬಂದಿಗಳಿಗೆ ಮತ್ತು ಆಸ್ಪತ್ರೆಗಳಿಗೆ ನಮ್ಮ ಸಂಸ್ಥೆಯಿಂದ 30,000 ಟೀ, ಕಾಫಿ, ಐದು ಸಾವಿರ ಬಿಸ್ಕತ್ತುಗಳು ಇತರೆ ತಿಂಡಿ ತಿನಿಸುಗಳು, ಪ್ರೊಟೀನ್ ಪೌಡರ್, ಟೊಮಾಟೋ ಸೂಪು, ಪೆನ್ ಸ್ಯಾನಿಟೈಜರ್, ಬಿಸಿ ನೀರು ಕಾಯಿಸುವ ಕೆಟಲ್, ಹತ್ತು ಸಾವಿರ ಫ್ರೂಟ್ ಸಾಲಡ್, ಐಸಿಯು ವಾರ್ಡ್‍ಗಳಿಗೆ ಗೋಡೆ ಗಡಿಯಾರ, ಐದು ಸಾವಿರ ಎನ್-95 ಮಾಸ್ಕ್‍ಗಳ ವಿತರಣೆ ಮಾಡುವುದರ ಮೂಲಕ ಆಭಯ ಫೌಂಡೇಷನ್ ತನ್ನ ನೂತನ ಪದಾಧಿಕಾರಿಗಳ ಆಯ್ಕೆ ಸಮಿತಯ ಪಟ್ಟಿ ಬಿಡುಗಡೆ ಮಾಡಿದೆ.

ಅಧ್ಯಕ್ಷರಾಗಿ ರಾಮಕೃಷ್ಣ ರೇಣಿಗುತ್ತಲ, ಉಪಾಧ್ಯಕ್ಷರಾಗಿ ನಾಮಾ ಕಾರ್ತೀಕ್, ಕಾರ್ಯದರ್ಶಿಯಾಗಿ ಬಾಲ ನಾಗರಾಜ್, ಸಹ ಕಾರ್ಯದರ್ಶಿಗಳಾಗಿ ಜೆ.ಎಸ್.ಅಜಯ್, ಖಜಾಂಚಿಯಾಗಿ ಪಿ.ವೇಣುಗೋಪಾಲಕೃಷ್ಣ, ಸಹ ಖಜಾಂಚಿಯಾಗಿ ಎಸ್.ಜಿತೇಂದ್ರ ಪ್ರಸಾದ್, ಯುವ ಅಧ್ಯಕ್ಷರಾಗಿ ಬಿ.ವಿ.ನಾಗಾರ್ಜುನ್ ಆಯ್ಕೆಯಾಗಿದ್ದಾರೆ.

ಸುದ್ದಿ ಓದಿ