ಮಹಲಿಂಗಪುರ

ಮಹಾಲಿಂಗಪುರ ತಾಲೂಕು ಘೋಷಣೆಗೆ 465 ದಿವಸಗಳ ನಿರಂತರ ಹೋರಾಟ

ಮಹಾಲಿಂಗಪುರ ತಾಲೂಕು ಘೋಷಣೆಗೆ 465 ದಿವಸಗಳ ನಿರಂತರ ಹೋರಾಟ

ಬೇಡಿಕೆ ಈಡೇರಿಸಲು ಸಿಎಂ ಸಿದ್ದರಾಮಯ್ಯಗೆ ಸ್ಥಳೀಯ ಹೋರಾಟಗಾರರಿಂದ ಮನವಿ 

ಮಹಾಲಿಂಗಪುರ : 2023ರಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಬಂದರೆ ಮಹಾಲಿಂಗಪುರ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡುತ್ತೇನೆ ಎಂದು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ವಾಗ್ದಾನ ಮಾಡಿದ್ದ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭರವಸೆದಾಯಕ ಹೇಳಿಕೆ ಆಧರಿಸಿ ತಾಲೂಕು ಹೋರಾಟ ಸಮಿತಿ ಗುರುವಾರ ಸಂಜೆ ಬೆಂಗಳೂರಿಗೆ ತೆರಳಿ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಮನವಿ ಸಲ್ಲಿಸಿದರು. 

ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ.ತಿಮ್ಮಾಪೂರ ಹಾಗೂ ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ 464ದಿವಸಗಳ ನಿರಂತರ ತಾಲೂಕಿಗಾಗಿ ಹೋರಾಟ ನಡೆಸಿರುವ ಸ್ಥಳೀಯರ ಅಶೋತ್ತರ ನೆರೆವೇರಿಸಲು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.  

ಇದಕ್ಕೆ ಉತ್ತರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲ ದಿನಗಳ ಕಾಲಾವಕಾಶ ಕೋರಿ ತಾಂತ್ರಿಕ ವಿಷಯಗಳನ್ನು ಗಮನಕ್ಕೆ ತೆಗೆದುಕೊಂಡು ತಿಳಿಸುತ್ತೇನೆ ಎಂದು ನಿಯೋಗಕ್ಕೆ ತಿಳಿಸಿದ್ದಾರೆ ಎಂದು ಸದಸ್ಯರೊಬ್ಬರು ಪತ್ರಿಕೆಗೆ ಮಾಹಿತಿ ನೀಡಿದರು. 

ನಿಯೋಗದಲ್ಲಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಪ್ರಧಾನ ಕಾರ್ಯದರ್ಶಿ ದರೆಪ್ಪ ಸಾಂಗ್ಲಿಕರ, ಪ್ರಮುಖರಾದ ಯಲ್ಲನ್ನಗೌಡ ಪಾಟೀಲ್, ಸಿದ್ದು ಕೊಣ್ಣೂರ, ರಂಗಣ್ಣಗೌಡ ಪಾಟೀಲ, ಮಹಾದೇವ ಮಾರಾಪೂರ, ನಿಂಗಪ್ಪ ಬಾಳಿಕಾಯಿ, ಶಿವಲಿಂಗ ಟಿರಕಿ, ಸಿದ್ದು ಶಿರೋಳ, ವಿರೇಶ ಆಸಂಗಿ, ಎಸ್ ಎಂ.ಪಾಟೀಲ್, ಬಸವರಾಜ ಕೊಕಟನೂರ, ಚೇತನ ಕಲಾಲ, ಆನಂದ ಚಮಕೇರಿ, ಡಾ.ಕುಳ್ಳೋಳ್ಳಿ ಮುಂತಾದವರಿದ್ದರು. 

**ಮಹಾಲಿಂಗಪುರ ತಾಲೂಕಿಗಾಗಿ ಹೋರಾಟ 464 ದಿವಸಗಳು ಸಂದಿವೆ. ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಲ್ಲಿಯವರೆಗಿನ ಹೋರಾಟ ಮತ್ತು ತಾಲೂಕು ರಚನೆಯ ಭೌಗೋಳಿಕ ಮಾಹಿತಿಯ ಹೊತ್ತಿಗೆಯನ್ನು ನೀಡಿ ಮನವಿ ಮಾಡಿದ್ದೇವೆ.ಕೂಲಂಕೂಷ ವಿಚಾರಣೆಗೆ ಅವರು ಕಾಲಾವಕಾಶ ಕೋರಿದ್ದಾರೆ. ಇದಕ್ಕೂ ಮುಂಚೆ ಕಂದಾಯ ಮಂತ್ರಿ ಕೃಷ್ಣ ಬೈರೇಗೌಡ ಅವರಿಗೂ ಸಂಪೂರ್ಣ ಮಾಹಿತಿಯೊಂದಿಗೆ ಮನವಿ ಮಾಡಲಾಗಿದೆ.  

* ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಸಂಗಪ್ಪ ಹಲ್ಲಿ, ಪ್ರಧಾನ ಕಾರ್ಯದರ್ಶಿ ಧರೆಪ್ಪ ಸಾಂಗ್ಲಿಕರ, 


ಸುದ್ದಿ ಓದಿ