ಬಸವ ಚೇತನ ಪ್ರಶಸ್ತಿಗೆ ಪಿ.ಸಿ.ಹಡಗಿನಾಳ ಆಯ್ಕೆ
ಮುದ್ದೇಬಿಹಾಳ 03: ವಿಜಯಪುರದ ಅಮ್ಮ ಫೌಂಡೇಶನ್ ವತಿಯಿಂದ ಪ್ರತೀ ವರ್ಷ ಕೊಡಮಾಡುವ ರಾಜ್ಯ ಮಟ್ಟದ ಬಸವ ಚೇತನ ಪ್ರಶಸ್ತಿಗೆ ತಾಲೂಕಿನ ಕೇಸಾಪುರದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ಪಿ.ಸಿ.ಹಡಗಿನಾಳ ಆಯ್ಕೆಯಾಗಿದ್ದಾರೆ.
ಜು.6 ರಂದು ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಬಸವ ಸಂಸ್ಕೃತಿ ಉತ್ಸವದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವದು ಎಂದು ಪೌಂಡೇಶನ ಸಂಚಾಲಕ ಕಬೂಲ ಕೂಕಟನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.