ಕೆಂಗೇರಿಮಡ್ಡಿ ಶಾಲಾ ಎಸ್ಡಿಎಂಸಿ ಪದಾಧಿಕಾರಿಗಳ ಆಯ್ಕೆ
ಮಹಾಲಿಂಗಪುರ 25¼: ಇತ್ತೀಚೆಗೆ ಸ್ಥಳೀಯ ಕೆಂಗೇರಿಮಡ್ಡಿಯ ಸ.ಹಿ.ಪ್ರಾ.ಶಾಲೆಯ ಎಸ್ಡಿಎಂಸಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಶ್ರೀಶೈಲ ಹೊಸಮನಿ, ಉಪಾಧ್ಯಕ್ಷರಾಗಿ ಸುನೀತಾ ಹುಣಶ್ಯಾಳ ಸೇರಿದಂತೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಶಿಕ್ಷಣ ಸಂಯೋಜಕ ಎಸ್.ಎಸ್.ಹಾದಿಮನಿ, ಬಿ ಆರ್ ಪಿ ಸಂತೋಷ ಇಮ್ಮಡಿ, ಬಿಇಆರ್ ಟಿ ಕಮತಗಿ, ಸಿಆರ್ ಪಿ ಎಸ್.ಎನ್.ಬ್ಯಾಳಿ ಇಲಾಖಾ ಪ್ರತಿನಿಧಿಗಳಾಗಿ ಹಾಜರಿದ್ದರು.
ಪಿಕೆಪಿಎಸ್ ನಿರ್ದೇಶಕ ಈರಪ್ಪ ದಿನ್ನಿಮನಿ, ಪುರಸಭಾ ಸದಸ್ಯ ಶೇಖರ ಅಂಗಡಿ, ಬಸವರಾಜ ಯರಗಟ್ಟಿ, ಚನ್ನಪ್ಪ ರಾಮೋಜಿ, ಹನುಮಂತ ಜಮಾದಾರ, ಪರಶುರಾಮ ಮೇತ್ರಿ, ಮಧು ಮಾವಿನಹಿಂಡಿ, ತಿಪ್ಪಣ್ಣ ಬಂಡಿವಡ್ಡರ, ಕೃಷ್ಣ ಕಳ್ಳಿಮನಿ, ಯಲ್ಲಪ್ಪ ಬನ್ನೆನ್ನವರ ಮತ್ತು ಪಾಲಕರು ಇದ್ದರು.