ಕ್ರೀಡಾಕೂಟ ಜಿಲ್ಲಾ ಮಟ್ಟಕ್ಕೆ ಆಯ್ಕೆ
ರನ್ನ ಬೆಳಗಲಿ 18: ಮುಧೋಳ ತಾಲೂಕಿನ ಪದವಿಪೂರ್ವ ಕಾಲೇಜುಗಳ ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ರನ್ನ ಬೆಳಗಲಿಯ ಗುರು ಮಹಾಲಿಂಗೇಶ್ವರ ಕಲಾ ಹಾಗೂ ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದಿದ್ದಾರೆ. ಗುರು ಮಹಾಲಿಂಗೇಶ್ವರ ಕಾಲೇಜಿನ ವಿದ್ಯಾರ್ಥಿಗಳು ಬಾಲಕರ ಕಬಡ್ಡಿ ಪ್ರಥಮ. ಬಾಲಕಿಯರ ಕಬಡ್ಡಿ ದ್ವಿತೀಯ. ಬಾಲಕರ ಥ್ರೋ ಬಾಲ್ ದ್ವಿತೀಯ. ಬಾಲಕರ ಗುಂಡು ಎಸೆತ ಪ್ರಥಮ ಮತ್ತು ದ್ವಿತೀಯ. ಬಾಲಕರ ಹ್ಯಾಮರ್ ತ್ರೋ ಪ್ರಥಮ ಮತ್ತು ದ್ವಿತೀಯ. ಬಾಲಕರ ರಿಲೇ 4*400 ದ್ವಿತೀಯ. ಬಾಲಕರ ರಿಲೇ 4*100 ದ್ವಿತೀಯ. ಬಾಲಕಿಯರ ರಿಲೇ 4*100 ದ್ವಿತೀಯ. ಬಾಲಕರ ಅಡೆತಡೆ ಓಟ ದ್ವಿತೀಯ. ಬಾಲಕಿರ 800 ಮೀಟರ್ ಓಟ ಪ್ರಥಮ. ಬಾಲಕಿರ 3000 ಮೀಟರ್ ಓಟ ದ್ವಿತೀಯ. ಬಾಲಕರ 3000 ಮೀಟರ್ ಓಟ ದ್ವಿತೀಯ. ಬಾಲಕಿಯರ ನಡಿಗೆ ದ್ವಿತೀಯ. ಬಾಲಕಿಯರ ಎತ್ತರ ಜಿಗಿತ ಪ್ರಥಮ. ಬಾಲಕಿಯರ ಫೋಲ್ ವಾಲ್ಟ್ ಪ್ರಥಮ ಬಾಲಕರ ಫೋಲ್ ವಾಲ್ಟ್ ಪ್ರಥಮ ಮತ್ತು ದ್ವಿತೀಯ. ಜಿಲ್ಲಾಮಟ್ಟಕ್ಕೆ ಗುಂಪು ಆಟಗಳಲ್ಲಿ 18ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಮತ್ತು ವೈಯಕ್ತಿಕ ಆಟಗಳಲ್ಲಿ 10 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಲ್ಲ ವಿದ್ಯಾರ್ಥಿಗಳಿಗೆ ಪ್ರಾಚಾರ್ಯರಾದ ಪಿ ಹೆಚ್ ನಾಯಿಕ್, ಮತ್ತು ಕಾರ್ಯದರ್ಶ ಗಳಾದ ಪಿ ಬಿ ಪೂಜಾರ್ ದೈಹಿಕ ನಿರ್ದೇಶಕರು, ಉಪನ್ಯಾಸಕರ ವತಿಯಿಂದ ಹಾಗೂ ಆಡಳಿತ ಮಂಡಳಿಯ ವತಿಯಿಂದ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು