ಮಹಲಿಂಗಪುರ

ತಾಲೂಕು ಮಟ್ಟಕ್ಕೆ ಆಯ್ಕೆ

ತಾಲೂಕು ಮಟ್ಟಕ್ಕೆ ಆಯ್ಕೆ

ಮಹಾಲಿಂಗಪುರ 12: ಸ್ಥಳೀಯ ಕೆಎಲ್‌ಇ ಪ್ರೌಢಶಾಲೆಯ ಕ್ರೀಡಾಪಟುಗಳು ವಲಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ನಾನಾ ವಿಭಾಗಗಳಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  

200 ಮೀ ಓಟದಲ್ಲಿ ಮಹಾಲಿಂಗ ಮಾಂಗ್ ಪ್ರಥಮ, ರಫೀಕ್ ಮುರಗೋಡ ದ್ವಿತೀಯ, 1500 ಮೀ ಓಟದಲ್ಲಿ ಸಚಿನ ಗೌಂಡಿ ಪ್ರಥಮ, 3000 ಮೀ ಓಟದಲ್ಲಿ ಬಸಂತಿ ಆನೆಪ್ಪಗೋಳ ದ್ವಿತೀಯ, 1500 ಮೀ ಓಟದಲ್ಲಿ ಅನುಶ್ರೀ ಹಂಚಿನಾಳ ದ್ವಿತೀಯ, 4*400 ಮೀ ರಿಲೇ ಯಲ್ಲಿ ಮಹಾಲಿಂಗ ಮಾಂಗ್, ಆಕಾಶ ಗೌಂಡಿ, ಬಸವರಾಜ ಹಾಡಕರ, ರಫೀಕ್ ಮುರಗೋಡ ಪ್ರಥಮ, ಬಾಲಕರ ಕಬಡ್ಡಿ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 200 ಮೀ ಓಟದಲ್ಲಿ ಅಮೂಲ್ಯ ಗಸ್ತಿ, ರಿಲೇಯಲ್ಲಿ ಆಯಿಷಾ ನದಾಫ, ಅಮೂಲ್ಯ ಗಸ್ತಿ, ರೂಪಾ ದಾನಗೊಂಡ, ಅನುಶ್ರೀ ಹಂಚಿನಾಳ ತೃತೀಯ ಸ್ಥಾನ ಪಡೆದಿದ್ದಾರೆ. ದೈಹಿಕ ಶಿಕ್ಷಕ ಪಿ.ಎಸ್‌.ಹಿಪ್ಪರಗಿ ಮಾರ್ಗದರ್ಶನ ಮಾಡಿದ್ದರು ಎಂದು ಉಪಪ್ರಾಂಶುಪಾಲ ಬಿ.ಎನ್‌.ಅರಕೇರಿ ತಿಳಿಸಿದ್ದಾರೆ. 


ಸುದ್ದಿ ಓದಿ