ಬೀಜ ಮತ್ತು ಪರಿಕರ ವಿತರಣಾ ಕೇಂದ್ರ ಉದ್ಘಾಟನೆ
ಸಬ್ಸಿಡಿ ದರದ ಬೀಜಗಳ ಸದುಪಯೋಗ ಪಡೆದುಕೊಳ್ಳಿ: ಪಾಟೀಲ
ಮಹಾಲಿಂಗಪುರ : ಕೃಷಿ ಇಲಾಖೆ ವತಿಯಿಂದ ಸಬ್ಸಿಡಿ ದರದಲ್ಲಿ ಮುಂಗಾರು ಬಿತ್ತನೆ ಬೀಜ ಮತ್ತು ಪರಿಕರ ವಿತರಿಸುತ್ತಿದ್ದು ಮಹಾಲಿಂಗಪುರ ಮತ್ತು ಸುತ್ತಲಿನ ಹಳ್ಳಿಗಳ ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದು ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ್ ಹೇಳಿದರು.ಸ್ಥಳೀಯ ಪಿಕೆಪಿಎಸ್ ಆವರಣದಲ್ಲಿ ಬಾಗಲಕೋಟ ಜಿಲ್ಲಾ ಪಂಚಾಯಿತಿ ಹಾಗೂ ರಬಕವಿ ಬನಹಟ್ಟಿ ತಾಲೂಕಿನ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಬೀಜ ಮತ್ತು ಪರಿಕರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ಸಕಾಲದಲ್ಲಿ ಉತ್ತಮ ತಳಿಯ ಬೀಜಗಳು ಮತ್ತು ಪೂರಕ ಪರಿಕರಗಳನ್ನು ಬುಧವಾರದಿಂದ ವಿತರಿಸುತ್ತಿದ್ದು ನಿತ್ಯ ಬೆಳಗ್ಗೆ 6 ರಿಂದ 10 ಗಂಟೆಯವರೆಗ ಆಧಾರ್ ಕಾಡರ್್, ಬ್ಯಾಂಕ್ ಪಾಸ್ ಬುಕ್, ಪಹಣಿ ಜೆರಾಕ್ಸ್ ಪ್ರತಿಯೊಂದಿಗೆ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದೊಂದಿಗೆ ಆಗಮಿಸಿ ಬೀಜ ಮತ್ತು ಪರಿಕರಗಳನ್ನು ಪಡೆಯಬಹುದಾಗಿದೆ ಎಂದರು.
ಕೃಷಿ ಅಧಿಕಾರಿ ಟಿ.ಎಂ.ಡಾಂಗೆ ಮಾತನಾಡುತ್ತಾ ಕೃಷಿ ಕೇಂದ್ರಕ್ಕೆ ಪಿಕೆಪಿಎಸ್ ನವರು ಕಳೆದ ದಶಕದಿಂದ ಉಚಿತವಾಗಿ ಜಾಗವನ್ನು ಉಚಿತವಾಗಿ ನೀಡಿದ್ದಾರೆ ಅವರಿಗೆ ಧನ್ಯವಾದಗಳು. ಹಾಗೂ ನಗರದ ಬೀಜ ವಿತರಣಾ ಕೇಂದ್ರದಲ್ಲಿ ಸೋಯಾಬಿನ್ 3000 ಕೆಜಿ, ಉದ್ದು 3000 ಕೆಜಿ, ಗೋವಿನಜೋಳ 1600 ಕೆಜಿ, ಮತ್ತು ಪರಿಕರಗಳಾದ ಜಿಂಕ್ ಸಲ್ಫೇಟ್ 1010 ಕೆಜಿ, ಫೆರೆಸ್ ಸಲ್ಫೇಟ್ 1340 ಕೆಜಿ, ಮೈಕ್ರೋನ್ಯೂಟ್ರಿಯನ್ ಲಿಕ್ವಿಡ್ 336 ಲೀ, ಅಟ್ರಾಜಿನ್ 20 ಕೆಜಿ, ಮೈಕ್ರೋನ್ಯೂಟ್ರಿಜನ್ ಮಿಕ್ಸರ್ ಗ್ರೇಡ್2 ಪೌಡರ್ 3000 ಕೆಜಿ ದಾಸ್ತಾನಿದ್ದು ರೈತರು ಸದುಪಯೋಗ ಪಡೆದುಕೊಳ್ಳಬೇಕೆಂದರು.
ಮಹಾಲಿಂಗಪುರ ಮತ್ತು ಸುತ್ತಲಿನ ಬುದ್ಧಿ ಪಿಡಿ, ಕೆಸರಗೊಪ್ಪ, ಬಿಸನಾಳ, ಸೈದಾಪುರ,ಮದಬಾವಿ, ಮಾರಾಪುರ, ಸಂಗಾನಟ್ಟಿ, ಢವಳೇಶ್ವರ, ನಂದಗಾವ ಈ 10 ಗ್ರಾಮಗಳ ರೈತರು ಬೀಜ ಮತ್ತು ಪರಿಕರಗಳನ್ನು ಕಡ್ಡಾಯವಾಗಿ ರೈತಬಾಂಧವರು ಮಾಸ್ಕ್ ಧರಿಸಿ ಸಾಮಾಜಿಕ ಅಂತರದೊಂದಿಗೆ ಪಡೆಯಬಹುದಾಗಿದೆ.ಪಿಕೆಪಿಎಸ್ ನಿದರ್ೇಶಕ ಅಶೋಕಗೌಡ ಪಾಟೀಲ, ಈರಪ್ಪ ದಿನ್ನಿಮನಿ, ಪ್ರಕಾಶ ಅರಳಿಕಟ್ಟಿ, ಹನುಮಂತ ಬುರುಡೆ, ಸಂಗಪ್ಪ ಗೋಣಿ, ಶಿವಲಿಂಗ ಘಂಟಿ, ವಿಷ್ಣುಗೌಡ ಪಾಟೀಲ, ಹಾಗೂ ಭಾಜಪ ಮುಖಂಡರಾದ ಶಂಕರಗೌಡ ಪಾಟೀಲ, ವಿರೂಪಾಕ್ಷ ಉಳ್ಳಾಗಡ್ಡಿ, ಚನ್ನಪ್ಪ ಪಟ್ಟಣಶೆಟ್ಟಿ, ಪಿಕೆಪಿಎಸ್ ಮುಖ್ಯ ಕಾರ್ಯ ನಿವರ್ಾಹಕ ಈರಪ್ಪ ಬೆಟಗೇರಿ, ಕೃಷಿ ಸಿಬ್ಬಂದಿ ಬೀರಪ್ಪ ಸಂಶಿ ಇತರರಿದ್ದರು. ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳ ರಿಯಾಯಿತಿ ದರ: ಸಾಮಾನ್ಯ ವರ್ಗಕ್ಕೆ ಸೋಯಾಬಿನ್ 30 ಕೆಜಿ ಪಾಕೇಟ್ ರೂ.2370, 5 ಕೆಜಿ ಪಾಕೆಟ್ ಉದ್ದು ರೂ.395, ಹೆಸರು 5ಕೆಜಿ ಪಾಕೆಟ್ 495, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಸೋಯಾಬಿನ್ 1995, ಉದ್ದು 332, ಹೆಸರು ಸಂಕರಣ 432.50, ನಿಜ ಚೀಟಿ 435,