ಪಾಲಿಕೆ ಆಯುಕ್ತರಿಂದ ಎರಡನೇ ದಿನವು ಬೆಳಗಾವಿ ಸಿಟಿ ರೌಂಡ್ : ನಗರ ಸ್ವಚ್ವತೆ ವೀಕ್ಷಿಸಿದ ದುಡುಗುಂಟಿ

ಪಾಲಿಕೆ ಆಯುಕ್ತರಿಂದ ಎರಡನೇ ದಿನವು ಬೆಳಗಾವಿ ಸಿಟಿ ರೌಂಡ್ : ನಗರ ಸ್ವಚ್ವತೆ ವೀಕ್ಷಿಸಿದ ದುಡುಗುಂಟಿ

ಬೆಳಗಾವಿ : ಪಾಲಿಕೆ ಆಯುಕ್ತ ಅಶೋಕ ದುಡುಗುಂಟಿ ಅವರು ಎರಡನೇ ದಿನವಾದ ಮಂಗಳವಾರ ಕೂಡಾ ಬೆಳಗಾವಿ ನಗರದಲ್ಲಿ ಸಂಚರಿಸುವ ಮೂಲಕ ಕಾರ್ಮೀಕರ ಕಾರ್ಯ ಹಾಗೂ ಸ್ವಚ್ವತೆಯ ವಿಕ್ಷಣೆ ಮಾಡಿದರು. 

     ಸೋಮವಾರ ಬೆಳಿಗ್ಗೆ 5.30 ಸುಮಾರಿಗೆ ಸೈಕಲ್ ಹತ್ತಿ ಸದಾಶಿವ ನಗರದ ಪಾಲಿಕೆಯ ವಾಹನ ಶಾಖೆಗೆ ಭೇಟಿ ನೀಡಿದ್ದರು. ಬಳಿಕ ಕಸ ವಿಲೇವಾರಿ ವಾಹನದಲ್ಲಿ ಸಂಚರಿಸಿ ಕಾರ್ಮೀಕರ ಕಾರ್ಯ ಹಾಗೂ ಸ್ವಚ್ವತೆ ಕುರಿತು ಪರಿಶೀಲಿಸಿದ್ದರು. 

    ಅದರಂತೆ ಇಂದು ಮಂಗಳವಾರ ‌ಕೂಡಾ ಪಾಲಿಕೆ ಆಯುಕ್ತ ದುಡುಗುಂಟಿ ಅವರು ನಗರ ಸಂಚಾರವನ್ನು ನಡೆಸುವ ಮೂಲಕ ಕಾರ್ಮಿಕರ ಕಾರ್ಯ ಹಾಗೂ ನಗರ ಸ್ವಚ್ವತೆಯ ಬಗ್ಗೆ ವೀಕ್ಷಣೆ ಮಾಡಿದರು. 

  ನಿನ್ನೆಯ ರೀತಿ ಬೆಳಗ್ಗೆ 5.30ಕ್ಕೆ ಪಾಲಿಕೆಯ ವಾಹನಗಳ ಗ್ಯಾರೇಜ್ ಗೆ ಭೇಟಿ ನೀಡಿ ಅಲ್ಲಿಯ ವಾಹನ ಚಾಲಕರ ಹಾಜರಾತಿ ನಂತರ ಮನೆ ಮನೆಗೆ ವಾಹನ ಮೂಲಕ ದಕ್ಷಿಣ ಮತಕ್ಷೇತ್ರದ ಕೆಲವು ವಾರ್ಡ್ , ಕಚೇರಿ ಗಲ್ಲಿಯ ಬೀಟ್ ಆಫೀಸ್ ನಲ್ಲಿ ವಾರ್ಡ್ ಕಾರ್ಪೊರೇಟ್ ರ ,ಆರೋಗ್ಯ ನಿರೀಕ್ಷಕರು ಹಾಗೂ ಎಇಇ (ಪರಿಸರ) ಜೊತೆ ನಾಲಾ ಪರಿಶೀಲನೆ ನಡೆಸಿದರು.

    ಖಾಸಗಿ ಓಪನ್ ಪ್ಲಾಟ್ ನಲ್ಲಿ ಗಿಡ ಗಂಟಿಗಳು ಬೆಳೆದು ಕಾಡು ಆಗಿದ್ದನ್ನು ನೋಡಿ ಮಾಲೀಕರಿಗೆ ಪಾಲಿಕೆ ನಿಯಮ ಪ್ರಕಾರ ಸ್ವಚ್ಚ ಮಾಡದೆ ಇದ್ದರೆ ಪಾಲಿಕೆಯಿಂದ ಸ್ವಚ್ಛ ಮಾಡಿಸಿ ಅದರ ಖರ್ಚು ವೆಚ್ಚ  ಆಯಾ ಮಾಲಿಕರಿಂದ ಬರಿಸಲು ತಿಳಿಸಿದರು.

   ನಂತರ ರೈಲ್ವೆ ನಿಲ್ದಾಣದಿಂದ ಬರುವ ಯುಜಿಡಿ ತ್ಯಾಜ್ಯ ನೀರಿನ ಬಗ್ಗೆ ಅಲ್ಲಿಯ ಅಧಿಕಾರಿಗಳ ಜೊತೆ ಚರ್ಚಿಸಿದರು. ಆಟೋ ಮೂಲಕ ಉತ್ತರ ಮತಕ್ಷೇತ್ರದ ಕೆಲವು ವಾರ್ಡ್ ನಲ್ಲಿ ಅಲ್ಲಿಯ ನಗರ ಸೇವಕರ ಜೊತೆ ಚರ್ಚಿಸಿದರು. ಬಳಿಕ ತರಕಾರಿ ಮಾರುಕಟ್ಟೆಯಲ್ಲಿ ರಾತ್ರಿ 10 ನಂತರ ಕಸವನ್ನು ಎತ್ತಲು ತಿಳಿಸಿದರು.

ಸುದ್ದಿ ಓದಿ