ಬಳ್ಳಾರಿ

ಸೀವೆಂಗ್ ಮಷೀನ್ ತರಬೇತಿ ಮುಕ್ತಾಯ

ಸೀವೆಂಗ್ ಮಷೀನ್ ತರಬೇತಿ ಮುಕ್ತಾಯ


ಬಳ್ಳಾರಿ 18: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಶಿರಿಡಿ ಸಾಯಿ ಸೇವಾ ಸತ್ಸಂಗ್, ಆರ್‌.ಎಸ್‌.ಬಿ.ಚಾರಿಟೇಬಲ್ ಟ್ರಸ್ಟ್‌, ರಾಜೀವ್ ಗಾಂಧಿ ಮೆಮೋರಿಯಲ್ ಟ್ರಸ್ಟ್‌ ಸಹಯೋಗದೊಂದಿಗೆ ಕೋವಿಡ್‌-19 ಸಂದರ್ಭದಲ್ಲಿ ಮೃತಪಟ್ಟವರ ಪತ್ನಿಯರಿಗೆ ಸೀವೆಂಗ್ ಮಷೀನ್ ತರಬೇತಿ ನೀಡುವ ಕಾರ್ಯಕ್ರಮ ಸಮಾರೋಪ ಮಂಗಳವಾರ ನಡೆಯಿತು. 

ಮಾ.28ರಿಂದ 40 ದಿನಗಳ ಕಾಲ ಈ ತರಬೇತಿ ನೀಡಲಾಗಿದ್ದು, ಈ ತರಬೇತಿಯಲ್ಲಿ ಮಹಿಳೆಯರು ವೈವಿಧ್ಯಮಯ ಟೈಲರಿಂಗ್ ತರಬೇತಿ ಪಡೆದಿದ್ದಾರೆ. 

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಹಾಯಕ ಆಯುಕ್ತ ಡಾ.ಆಕಾಶ ಶಂಕರ್ ಅವರು ತರಬೇತಿಯ ಸದುಪಯೋಗ ಪಡೆದುಕೊಂಡು ಜೀವನ ರೂಪಿಸಿಕೊಳ್ಳಲು ಸಲಹೆ ನೀಡಿದರು. 

ರೆಡ್ ಕ್ರಾಸ್ ಸಂಸ್ಥೆ ಉಪಸಭಾಪತಿ ಡಾ.ಎಸ್‌.ಜೆ.ವಿ.ಮಹಿಪಾಲ್, ಕಾರ್ಯದರ್ಶಿ ವಿಜಯಕುಮಾರ್,ಆರ್‌.ಎಸ್‌.ಡಿ ಚಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷ ಗೋಪಾಲ ಕೃಷ್ಣ, ರೆಡ್ ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಎಂ.ಎ.ಷಕೀಬ್, ಕಿಶೋರ್, ಶಮೀಮ್ ಜಕಾಲಿ,ಪಿ.ವಾಸು, ದಿವಾಕರ್, ಮಹಮ್ಮದ್ ರಫಿ, ದಿನೇಶ್, ಶಿವ ಸಾಗರ್, ಮಹಾಂತೇಶ್, ಎಂ.ವಲಿ ಭಾಷಾ, ರಾಮಂಜಿನಿ ಮತ್ತಿತರರು ಇದ್ದರು. 


ಸುದ್ದಿ ಓದಿ