ಸ್ಕೌಟ್ಸ್,ಗೈಡ್ಸ್‌ಗಳು ಶಿಸ್ತು ಸೇವಾ ಮನೋಭಾವನೆಗಳಂತಹ ಶಿಕ್ಷಣವನ್ನು ನೀಡುತ್ತದೆ: ಖೇಡಗಿ
ಸಿಂದಗಿ: ಸ್ಕೌಟ್ಸ್ ಮತ್ತು ಗೈಡ್ಸ್‌ಗಳು ಸನ್ನಡತೆ, ಸದ್ಭಾವನೆ, ಶಿಸ್ತು, ಮತ್ತು ಸೇವಾ ಮನೋಭಾವನೆಗಳಂತಹ ಶಿಕ್ಷಣವನ್ನು ನೀಡಿ ಭಾರತದ ಸಂಪನ್ಮೂಲ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತವೆ ಎಂದು ವಿಜಯಪುರದ ಬಿ.ಜಿ.ಎಸ್.ನ ಜಿಲ್ಲಾ ಸಂಘಟಿಕ ರಾಜಶೇಖರ ಖೇಡಗಿ ಹೇಳಿದರು.
ಪಟ್ಟಣದ ಎಚ್.ಜಿ. ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಸ್ಕೌಟ್ಸ್ ಮತ್ತು ಗೈಡ್ಸ್‌ನ ದಿ.ಎಮ್.ಸಿ. ಮನಗೂಳಿ ರೋವಸ್ಸ್ ಘಟಕ ಹಾಗೂ ತಾಯಿ ಈರವ್ವ ನಮದಿ ರೇಂಜರ್ ಘಟಕದ ಉದ್ಘಾಟನಾ ಸಮಾರಂಭ ಹಾಗೂ ದೀಕ್ಷಾ ಸಮಾರಂಭದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೇವಲ ಅಂಕಗಳಿಕೆಗೆ ಮಾತ್ರ ಶಿಕ್ಷಣ ನೀಡಿದರೆ ಮಕ್ಕಳ ಬದುಕು ಪರಿಪೂರ್ಣವಾಗುವದಿಲ್ಲ ಜೊತೆಗೆ ಸಾಮಾಜಿಕ ಬದುಕಿನ ಎಲ್ಲ ಮಾರ್ಗಗಳನ್ನು ಮಕ್ಕಳಲ್ಲಿ ಬೆಳೆಸುವುದು ಇಂದು ಅನಿವಾರ್ಯವಾಗಿದೆ ಎಂದರು.
ಜಿಲ್ಲಾ ಕಾರ್ಯದರ್ಶಿ ಪಿ.ಎಸ್. ಕುಂಬಾರ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್‌ಗಳ ಸೇವೆ ಒಂದು ದೇಶ ಸೇವೆ. ಇದರಿಂದ ನಮ್ಮ ದೇಹ ಸದೃಢ ಮತ್ತು ಮಾನಸಿಕವಾಗಿ ಪ್ರಭಲರಾಗುತ್ತೇವೆ. ವಿದ್ಯಾರ್ಥಿಗಳಲ್ಲಿ ಸುಸ್ಕೃಂತ ನಾಗರಿಕತ್ವ ಬೆಳೆದು ಬರುತ್ತದೆ. ಹಿಂತಹ ಶಿಸ್ತಿನ ಶಿಕ್ಷಣ ನೀಡುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ಗಳು ಮುಖ್ಯವಾಗಿವೆ ಎಂದು ಹೇಳಿದರು.
ಸ್ಕೌಟ್ಸ್ ಮತ್ತು ಗೈಡ್ಸ್‌ನ ವಿದ್ಯಾರ್ಥಿಗಳು ಶಿಸ್ತಿನ ತರಬೇತಿ ಪಡೆದು ಭಾರತದ ಆಸ್ತಿಯಾಗಬೇಕು. ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ಗಳ ಕೇಂದ್ರಗಳನ್ನು ಸ್ಥಾಪಿಸಬೇಕು. ಇದರಿಂದ ಶಿಕ್ಷಣದ ಜೊತೆಗೆ ಸಾಮಾಜಿಕ ಸೇವೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಪೂರ್ವದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ನ ವಿದ್ಯಾರ್ಥಿಗಳಿಗೆ ದಿಕ್ಷೇಯನ್ನು ನೀಡಿ ಸ್ಕೌಟ್ಸ್ ಮತ್ತು ಗೈಡ್ಸ್‌ನ ಧ್ವಜಾರೋಹನ ನೆರವೇರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದ ಪ್ರಾಚಾರ್ಯ ಎ.ಆರ್. ಹೆಗ್ಗಣದೊಡ್ಡಿ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್‌ಗಳು ಸನ್ನಡತೆ, ಸದ್ಭಾವನೆ, ಶಿಸ್ತು ಮತ್ತು ಸೇವಾ ಮನೋಭಾವದಂಥ ಶಿಕ್ಷ ಣ ಪಡೆದು ಭಾರತೀಯ ಸಂಪನ್ಮೂಲ ವ್ಯಕ್ತಿಗಳಾಗಿ ಹೊರಹೊಮ್ಮುತ್ತಿರುವುದು ಹೆಮ್ಮೆಯ ವಿಚಾರ. ಶಿಕ್ಷಣದ ಜೊತೆಗೆ ಸನ್ನಡತೆ, ಸದ್ಭಾವನೆ, ಶಿಸ್ತು, ಪ್ರೀತಿ ಮತ್ತು ಸೇವಾ ಮನೋಭಾವನೆ ನೀಡಿದ್ದಲ್ಲಿ ವಿದ್ಯಾರ್ಥಿಗಳು ಸುಸಂಸ್ಕೃತ ನಾಗರಿಕರಾಗುತ್ತಾರೆ. ಇಂಥ ಶಿಸ್ತಿನ ಶಿಕ್ಷ ಣ ನೀಡುತ್ತಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ ಎಂದರು.
ಸುಂದರ ಬದುಕು ಹಾಗೂ ಆರೋಗ್ಯಕರ ಸಮಾಜ ಕಟ್ಟುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ನ ಶಿಸ್ತು ಮತ್ತು ಕೌಶಲ್ಯದ ಪಾತ್ರ ಮಹತ್ವದ್ದಾಗಿದೆ. ಮಕ್ಕಳು ನಾಲ್ಕು ಗೋಡೆಗಳ ನಡುವೆ ಓದು-ಬರಹ ಕಲಿಯುವುದರ ಜತೆಗೆ ನಿಸರ್ಗದ ಮಡಿಲಲ್ಲಿ ಒಂದಾಗಿ ಬೆರೆತು, ಸಮನ್ವಯದಿಂದ ಬಾಳಲು ಕಲಿಯುವಂತೆ ಪ್ರೇರೆಪಿಸುವ ಕಾರ್ಯಕ್ರಮ ಹೆಚ್ಚಾಗಿ ನಡೆಯಬೇಕಿದೆ ಎಂದು ಸಲಹೆ ನೀಡಿದರು.
ಸಿಂದಗಿಯ ಸ್ಕೌಟ್ಸ್ ಮತ್ತು ಗೈಡ್ಸ್‌ನ ಬಸವರಾಜ ಸೋಂಪೂರ ಮಾತನಾಡಿ, ನಾಲ್ಕು ಗೋಡೆಗಳ ಜೊತೆ ಬಂಧಿಯಾಗಿ ಕೇವಲ ಶಾಲಾ ಪಠ್ಯ ಪುಸ್ತಕ ಓದುವುದರಿಂದ ಮಕ್ಕಳು ಪ್ರಗತಿಯಾಗುವುದಿಲ್ಲ. ಪ್ರಕೃತಿ ಮಡಿಲಲ್ಲಿ ಅಲೆಯಬೇಕು. ಬೆಟ್ಟ ಹತ್ತಬೇಕು. ನದಿಯಲ್ಲಿ ಈಜಬೇಕು. ಎಲ್ಲಾ ಭಾಷೆ ಸಂಸ್ಕೃತಿ ಮಕ್ಕಳೊಂದಿಗೆ ಬೇರೆಯಬೇಕು. ಇದರ ಜೊತೆಯಲ್ಲಿ ಸನ್ನಡತೆ, ಸದ್ಭಾವನೆ, ಶಿಸ್ತು ಮತ್ತು ಸೇವಾ ಮನೋಭಾವದಂಥ ಶಿಕ್ಷಣ ಪಡೆಯುವುದೇ ಸ್ಕೌಟ್ಸ್ ಮತ್ತು ಗೈಡ್ ಸಂಸ್ಥೆಯ ಮುಖ್ಯ ಉದ್ದೇಶ ಎಂದು ಹೇಳಿದರು.
ವೇದಿಕೆ ಮೇಲೆ ರೋವರ್ ಸ್ಕೌಟ್ಟ್ ಲೀಡರ್ ಎಸ್.ಪಿ. ಬಿರಾದಾರ, ರೇಂಜರ್ ಲೀಡರ್ ಎ.ಆರ್. ಸಿಂದಗಿಕರ ಉಪಸ್ಥಿತರಿದ್ದರು.
ಉಪನ್ಯಾಸಕರಾದ ಬಿ.ಎಸ್. ಬಿರಾದಾರ, ಆರ್.ಬಿ. ಹೊಸಮನಿ, ಆರ್.ಸಿ. ಕಕ್ಕಳಮೇಲಿ, ಎಮ್.ಎಸ್. ಕಿರಣಗಿ, ಸತೀಶ ಪಾಟೀಲ, ಎಮ್.ಎನ್. ಅಜ್ಜಪ್ಪ, ಸಿದ್ದಲಿಂಗ ಕಿಣಗಿ, ಎಫ್.ಎ. ಹಾಲಪ್ಪನವರ, ಮುಕ್ತಾಯಕ್ಕ ಕತ್ತಿ, ಸತೀಶ ಬಸರಕೊಡ, ಡಾ.ಶಾಂತುಲಾಲ ಚವ್ಹಾಣ, ಎ.ಬಿ. ಪಾಟೀಲ, ಆರ್.ವೈ. ಪರೀಟ, ಸುರೇಶ ಮಂಗೋಂಡಿ, ಎನ್.ಆರ್. ಕುಲಕರ್ಣಿ, ರವಿ ಉಪ್ಪಾರ, ವಿಶಾಲ ಮಠ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.