ಇಂಡಿ

ಸೇವಾ ಮನೋಭಾವ ಬೆಳೆಸಲು ಸ್ಕೌಟ್ಸ್, ಗೈಡ್ಸ್ ಸಹಕಾರಿ: ರಾಠೋಡ

ಸೇವಾ ಮನೋಭಾವ ಬೆಳೆಸಲು ಸ್ಕೌಟ್ಸ್, ಗೈಡ್ಸ್ ಸಹಕಾರಿ: ರಾಠೋಡ

ಇಂಡಿ 22: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಬೆಳೆದ ಸಂಸ್ಥೆಯಾಗಿದ್ದು, ಅದರ ಸದಸ್ಯರಾಗಿರುವದೇ ಪುಣ್ಯದ ಕೆಲಸ. ವಿದ್ಯಾರ್ಥಿ ಜೀವನದಲ್ಲಿ ಪ್ರಮುಖವಾಗಿರುವ ಶಿಸ್ತು, ಸಂಯಮ, ಸೇವಾ ಮನೋಭಾವ, ಶ್ರದ್ಧೆ, ಜೀವನ ಕೌಶಲ್ಯಗಳನ್ನು ಕಲಿಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿಯಾಗಿದೆ ಎಂದು ಇಂಡಿ ಬಿಇಓ ವಸಂತ ರಾಠೋಡ ಹೇಳಿದರು. ಅವರು ಇಂಡಿ ಪಟ್ಟಣದ ಗುರುಭವನದಲ್ಲಿ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ಇಂಡಿ ತಾಲೂಕ ಘಟಕ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಲಯ ಇಂಡಿ ಮತ್ತು ಬಿ ಎಲ್ ಡಿ ಇ ವೈದ್ಯಕೀಯ ಮಹಾವಿದ್ಯಾಲಯ ವಿಜಯಪುರ-ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕರ ದಿನ,ವಿಶ್ವ ಚಿಂತನಾ ದಿನ ಹಾಗೂ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕ ಸ್ಕೌಟ್ಸ್, ಗೈಡ್ಸ್ ಅಧ್ಯಕ್ಷ ಡಾ. ಮಂಜುನಾಥ ಕೋಟೆನ್ನವರ ಅಧ್ಯಕ್ಷತೆ ವಹಿಸಿ ಮಾತನಾಡಿ, 1907ರಲ್ಲಿ ನಿವೃತ್ತ ಸೈನ್ಯಾಧಿಕಾರಿಗಳಾದ ಲಾರ್ಡ್ ಬೆಡೆನ್ ಪೆÇವೆಲ್ ಅವರಿಂದ ಇಂಗ್ಲೆಂಡಿನ ಬ್ರೌನ್ಸಿ ದ್ವೀಪದಲ್ಲಿ ಜನಿಸಿದ ಈ ಸಂಸ್ಥೆಯು ಪ್ರಾರಂಭದಲ್ಲಿ 20 ಮಕ್ಕಳಿಂದ ಚಾಲನೆಗೊಂಡು ಪ್ರಸ್ತುತ 216 ಕ್ಕೂ ಅಧಿಕ ದೇಶಗಳಲ್ಲಿ ತನ್ನ ವ್ಯಾಪ್ತಿ ಪಡೆದು ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಶ್ರಮಿಸುತ್ತಿದೆ ಎಂದರು.      

ಮಕ್ಕಳು ನಾಲ್ಕು ಗೋಡೆಗಳ ನಡುವೆ ಓದು-ಬರಹಗಳನ್ನು ಕಲಿಯುವದರ ಜೊತೆಗೆ ನಿಸರ್ಗದ ಮಡಿಲಲ್ಲಿ ಒಂದಾಗಿ ಬೆರೆತು,ಸಮನ್ವಯದಿಂದ ಬಾಳಲು ಕಲಿಯುವಂತೆ ಪ್ರೇರೇಪಿಸಲಿರುವ ಕಾರ್ಯಕ್ರಮವೇ ಸ್ಕೌಟ್ಸ್,ಗೈಡ್ಸ್ ನ ಮೂಲ ಉದ್ದೇಶವಾಗಿದೆ ಎಂದು ತಾಲೂಕಾ ಸಂಸ್ಥೆಯ ಉಪಾಧ್ಯಕ್ಷ ಅನಂತ ಜೈನ ಹೇಳಿದರು.ಭಾಗ್ಯಜ್ಯೋತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ತಾಲೂಕಿನ 75ಕ್ಕೂ ಹೆಚ್ಚು ಶಿಕ್ಷಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತರಾದ ಹಿರೇರೂಗಿ ಗ್ರಾಮದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಇಂಗ್ಲೀಷ ಶಿಕ್ಷಕ ಸಂತೋಷ ಬಂಡೆ, ಸರಕಾರಿ ಪ್ರೌಢ ಶಾಲೆ ಬರಗುಡಿಯ ಪುಂಡಲೀಕ ಸಣ್ಣಾರ,ಅಥರ್ಗಾ ಪ್ರೌಢಶಾಲೆಯ ದೈಹಿಕ ಶಿಕ್ಷಕ ವಿ ಪಿ ಚವ್ಹಾಣ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಪುರಸ್ಕರಿಸಲಾಯಿತು.ಜಗದೀಶ ಬೋಳಸುರ, ಹನಮಂತ ಬೂದಿಹಾಳ, ಎಸ್ ಎಸ್ ಹಚಡದ,ಅರವಿಂದ ಪೂಜಾರಿ ಹಾಗೂ ಸ್ಕೌಟ್ ಮಾಸ್ಟರ್‍ಗಳಾದ ಆರ್ ಎಸ್ ಸಾಲಿಗಾಂವ,ಜಿ ಬಿ ಪಾಟೀಲ,ಎ ಎಸ್ ಬಡಚಿ, ದತ್ತಾತ್ರೇಯ ಕೊಳುರೆ, ವೈ ಎಂ ಬಾಗೇವಾಡಿ,ವೈ ಜಿ ಬಿರಾದಾರ,ಸಿ ಎಂ ಮೇತ್ರಿ ಮುಂತಾದವರು ಉಪಸ್ಥಿತರಿದ್ದರು.ಬಸವರಾಜ ಗೋರನಾಳ ಕಾರ್ಯಕ್ರಮ ನಿರ್ವಹಿಸಿದರು. ವೈ ಜಿ ಬಿರಾದಾರ ಸ್ವಾಗತಿಸಿದರು.ಕಾರ್ಯದರ್ಶಿ ಶಹಾಜಿ ಪಾಟೀಲ ವಂದಿಸಿದರು.

ಸುದ್ದಿ ಓದಿ