ಮಹಲಿಂಗಪುರ

ವಿಜ್ಞಾನ, ತಂತ್ರಜ್ಞಾನ ವಸ್ತು ಪ್ರದರ್ಶನ: ನಿಸರ್ಗ ಚಿತ್ರಕಲಾ ಸ್ಪರ್ಧೆ

ವಿಜ್ಞಾನ, ತಂತ್ರಜ್ಞಾನ ವಸ್ತು ಪ್ರದರ್ಶನ: ನಿಸರ್ಗ ಚಿತ್ರಕಲಾ ಸ್ಪರ್ಧೆ

10 ಪ್ರೌಢಶಾಲೆಗಳಿಂದ ನೂರಾರು ಮಕ್ಕಳು ಭಾಗಿ, 50 ಮಾದರಿ, 40 ಚಿತ್ರಕಲೆ ಪ್ರದರ್ಶನ  

ಮಹಾಲಿಂಗಪುರ 30: ಸ್ಥಳೀಯ ಕೆಎಲ್‌ಇ ಡಿಪ್ಲೋಮಾ ಕಾಲೇಜಿನಲ್ಲಿ ಐ.ಎಸ್‌.ಟಿ.ಇ ವಿದ್ಯಾರ್ಥಿ ಕ್ಲಬ್ ವತಿಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತು ಪ್ರದರ್ಶನ ಹಾಗೂ ನಿಸರ್ಗ ಚಿತ್ರಕಲಾ ಸ್ಪರ್ಧೆ ಏರಿ​‍್ಡಸಲಾಯಿತು. 

ಬೆಳಗ್ಗೆ ಉದ್ಘಾಟನಾ ಸಮಾರಂಭದಲ್ಲಿ ಶಿಕ್ಷಣ ಇಲಾಖೆಯ ಎ.ಆರ್‌.ಛಬ್ಬಿ ಮಾತನಾಡಿ, ವಿಜ್ಞಾನ ಪರಿಸರಕ್ಕೆ ಪೂರಕವಾಗಿರಲಿ, ವ್ಯಕಿತ್ವ ವಿಕಸನದ ಆಯಾಮಗಳನ್ನು ಅರಿಯಲಿ ಎಂದರು. ನೋಡಲ್ ಅಧಿಕಾರಿ ಎ.ಡಿ.ನೀಲಗುಂದ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು, ದೇಶ ಅಭಿವೃದ್ದಿ ಹೊಂದಲು ತಾಂತ್ರಿಕ ಕ್ಷೇತ್ರ ಅಗತ್ಯ ಎಂದರು. ರಬಕವಿಯ ಪ್ರಕಾಶ ಪ್ರತಾಪ ಮಾತನಾಡಿ, ವಿಜ್ಞಾನ ತಾಯಿ, ತಂತ್ರಜ್ಞಾನ ಮಗು ಇದ್ದಂತೆ ಎಂದರು. ಕೃಷ್ಣ ತಳವಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ಎಸ್‌.ಜಿ.ಜುಟನಟ್ಟಿ ಪ್ಲಾಸ್ಟಿಕ್ ತ್ಯಜಿಸಿ, ಬಟ್ಟೆ ಚೀಲ ಬಳಸಿ ಅಭಿಯಾನದಡಿ ವೇದಿಕೆ ಮೇಲಿನ ಗಣ್ಯರಿಗೆ ಉಚಿತ ಕಾಟನ್ ಚೀಲ ವಿತರಿಸಿದರು.  

ಬಾಗಲಕೋಟ- ಬೆಳಗಾವಿ ಜಿಲ್ಲೆಯ 4 ತಾಲೂಕಿನ 10 ಪ್ರೌಢಶಾಲೆಗಳಿಂದ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ 50 ವಿಜ್ಞಾನ ವಸ್ತು ಮಾದರಿಗಳು ಹಾಗೂ 40 ನಿಸರ್ಗ ಚಿತ್ರಕಲೆ ಪ್ರದರ್ಶನ ಮಾಡಿದರು. ಜೊತೆಗೆ ಕೆಎಲ್‌ಇ ಡಿಪ್ಲೋಮಾ ಕಾಲೇಜಿನ ಎಲ್ಲ ವಿಭಾಗಗಳ ವಿದ್ಯಾರ್ಥಿಗಳು ವಿಶೇಷ ಮಾದರಿಗಳನ್ನು ಪ್ರದರ್ಶಿಸಿ, ಆವರಣದಲ್ಲಿ ವಿಷಯಾಧರಿತ ರಂಗೋಲಿ ಹುಯ್ದು ಪ್ರದರ್ಶನಕ್ಕೆ ಕಳೆ ಕಳೆ ತಂದರು.  

ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ, ನಗದು ಬಹುಮಾನ ವಿತರಿಸಲಾಯಿತು. ಕ್ಯಾಂಪಸ್‌ನಲ್ಲಿ ಕಣ್ಣಿಗೆ ಕಂಡ ನಿಸರ್ಗದ ಚಿತ್ರ ಬಿಡಿಸುವ ನಿಸರ್ಗ ಚಿತ್ರಕಲಾ ಸ್ಪರ್ಧೆಯಲ್ಲಿ ರಬಕವಿಯ ಗರ್ಲ್ಸ್‌ ಹೈಸ್ಕೂಲ್ ನ ಪಲ್ಲವಿ ಅಳ್ಳಿಮಟ್ಟಿ ಪ್ರಥಮ, ಮುಧೋಳದ ವಿಜಯ ಇಂಟರನ್ಯಾಷನಲ್ ಸ್ಕೂಲ್‌ನ ಶಶಾಂಖ ಹಾದಿಮನಿ ದ್ವಿತೀಯ, ಖಾನಟ್ಟಿ ಸರಕಾರಿ ಪ್ರೌಢಶಾಲೆಯ ರವಿ ಲಂಗೋಟಿ ತೃತೀಯ ಸ್ಥಾನ ಪಡೆದರು.  

ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತು ಪ್ರದರ್ಶನದಲ್ಲಿ ಸರಕಾರಿ ಪ್ರೌಢಶಾಲೆ ಖಾನಟ್ಟಿ ಪ್ರಥಮ, ರಬಕವಿಯ ಗರ್ಲ್ಸ್‌ ಹೈಸ್ಕೂಲ್ ದ್ವಿತೀಯ, ಅವರಾದಿ ಸರಕಾರಿ ಪ್ರೌಢಶಾಲೆ ತೃತೀಯ, ರಬಕವಿಯ ಬಿ.ಕೆ.ಕೊಟ್ರಶೆಟ್ಟಿ ಪ್ರೌಢಶಾಲೆ ಚತುರ್ಥ ಸ್ಥಾನ ಪಡೆದವು.  

ಪ್ರಾಚಾರ್ಯ ಎಸ್‌.ಐ.ಕುಂದಗೋಳ ಮಾರ್ಗದರ್ಶನದಲ್ಲಿ ಉಮೇಶ ಹಾದಿಮನಿ, ಸುಭಾಸ್ ಮೂಶಿ, ವಂದನಾ ಪಸಾರ, ಸವಿತಾ ಗೊಂದಿ, ಮಂಜುನಾಥ ಅರಕೇರಿ, ಅಮೀತ ಜಾಧವ, ನಿರ್ಮಲಾ ಫಕೀರಪುರ, ಅನಿಕೇತ ತಾರದಾಳೆ, ಮಹಾದೇವಿ ಅಂಬಿ, ಮಿನಾಜ ಅತ್ತಾರ, ಪ್ರಿಯಾ ಸೋನಾರ, ಅಂಜನಾ ಮಲಾಜ್, ಗುರುರಾಜ ಅಥಣಿ, ಸುಧೀರ ಲಾವಟೆ, ಚೈತ್ರಾ ಹುದ್ದಾರ, ಈಶ್ವರ ಹೂಲಿ, ಶಂಕರ ಮಾಳಿ, ಲಕ್ಷ್ಮೀ ನಾಯಕ, ಸುಮನ್ ಖೋತ, ಲಕ್ಷ್ಮೀ ಅಂಗಡಿ, ಬೋರವ್ವ ಸೊಂಡಿ, ಬಿ.ಎನ್‌.ಅರಕೇರಿ, ಅರ್ಜುನ ಚವಾಣ, ಗೀತಾ ಉಪಾಸೆ, ಲಕ್ಷ್ಮೀ ಅಂಗಡಿ, ಶಿಲ್ಪಾ ಬೀರನಗಡ್ಡಿ ಸಂಘಟಿಸಿದ್ದರು. 


ಸುದ್ದಿ ಓದಿ