ಶಾಲಾ ಎಸ್.ಡಿ.ಎಮ್.ಸಿ.ಅಧಿಕಾರ ಸ್ವೀಕಾರ, ಬೀಳ್ಕೊಡುವ ಸಮಾರಂಭ
ಲೋಕದರ್ಶನ ವರದಿ
ರೋಣ 19: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ರೀತಿಯಲ್ಲಿ ಓದಿ ಒಳ್ಳೆಯ ಶಿಕ್ಷಣ ಪಡೆದು ಎಲ್ಲರೂ ಉನ್ನತ ಅಧೀಕಾರಿಗಳಾಗಬೇಕು. ಈಗಾಗಲೇ ಸರಕಾರದಿಂದ ಹುನಗುಂಡಿ ಗ್ರಾಮದ ಶಾಲೆಗೆ ಲೋಕೋಪಯೋಗಿ ಸಚಿವರಾದ ಸಿ ಸಿ ಪಾಟೀಲ ಅವರ ಅನುದಾನದಲ್ಲಿ 2 ಕೊಠಡಿಗಳ ನಿಮರ್ಾಣಕ್ಕೆ ಹಣ ಮಂಜೂರು ಮಾಡಿಸಿದ್ದಾರೆ. ಇನ್ನೂ ಒಂದು ಕೊಠಡಿ ನಿಮರ್ಾಣ ಹಂತದಲ್ಲಿದೆ ಎಂದು ಬಸವಂತಪ್ಪ ಎಚ್ ತಳವಾರ ಹೇಳಿದರು.
ಶಾಲೆಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಶಾಲಾ ಮಕ್ಕಳಿಗೆ ಆಟದ ಮೈದಾನದ ವ್ಯವಸ್ಥೆ ಮಾಡಬೇಕೆಂದು ಸಭೆಯಲ್ಲಿ ತಿಳಿಸಿದರು.ನಾನು ಈ ಹಿಂದೆ ಉಪಾಧ್ಯಕ್ಷ ಸ್ಥಾನದಲ್ಲಿದ್ದಾಗ 2 ಶಾಲಾ ಕೊಠಡಿ ಹಾಗೂ 1 ಅಡುಗೆ ಕೋಣೆ, ಶೌಚಾಲಯ,ಶಾಲೆಯ ಬಯಲಿನಲ್ಲಿ ತೆಂಗಿನ ಸಸಿಗಳನ್ನು ಬೆಳೆಸಿ ಉತ್ತಮ ವಾತಾವರಣ ನಿರ್ಮಿಸಲು ಶ್ರಮಿಸಿರುವುದಾಗಿ ಹೇಳಲು ನನಗೆ ಹಮ್ಮೆ ಎನಿಸುತ್ತದೆ ಎಂದು ಬಸವಂತಪ್ಪ ತಳವಾರ ಹೇಳಿದರು.
ಇದೇ ವೇಳೆ ಎಸ್.ಹೆಚ್. ಮಂಡಸೊಪ್ಪಿ ಅವರು ಮಾತನಾಡಿ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಸರಕಾರದಿಂದ ಸೌಲಭ್ಯಗಳನ್ನು ಒದಗಿಸಬೇಕೆಂದು ಮಾತನಾಡಿದರು. ಎಸ್.ವಾಯ್,ಮಂಡಸೊಪ್ಪಿ ಮಾತನಾಡಿ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಒತ್ತುಕೊಡಬೇಕು,ವಿದ್ಯಾರ್ಥಿ ಗಳು ಹೆಚ್ಚು ಕಲಿತು ವಿದ್ಯಾವಂತರಾಗಬೇಕೆಂದು ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಎಮ್ ವಾಯ್ ಚಕ್ರಸಾಣಿ ಸ್ವಾಗತ ಭಾಷಣ ಮಾಡಿದರು ಹಾಗೂ ಎಸ್.ಬಿ.ಯರಳಿ,ಎಲ್.ಡಿ. ರಂಗಸ್ವಾಮಿ,ಎನ್.ಪಿ.ಅಂಗಡಿ, ಎಲ್.ಎಸ್.ಪಾಟೀಲ, ಹೆಚ್.ಎಲ್. ರಂಗನಗೌಡ್ರ,ಮಂಜು ಹೂಗಾರ,ಎಮ್.ಎಸ್. ಮಡಿವಾಳರ, ಈ ಕಾರ್ಯಕ್ರಮದ ವಂದಮಾರ್ಪಣೆಯನ್ನು ಎಸ್.ಆಯ್. ಕುರುಡಗಿಮಠ ಹಾಗೂ ಬಿ.ಎ.ಮುಕಾಶಿಮಠ ಮಾಡಿದರು.
ಈ ಸಮಾರಂಭದ ಅಧ್ಯಕ್ಷತೆಯನ್ನು ಎ.ಎಸ್.ಗೌಡರ ಎಸ್.ಡಿ.ಎಮ್.ಸಿ. ನೂತನ ಅಧ್ಯಕ್ಷರು ವಹಿಸಿದರು.ಮುಖ್ಯಅತಿಥಿಗಳಾಗಿ ಗ್ರಾಮ ಪಂಚಾಯತ ಅಧ್ಯಕ್ಷೆ ನೇತ್ರಾ ಎಚ್ ಕಡಿಯವರ, ಉಪಾಧ್ಯಕ್ಷೆ ಲಲಿತಾ ದೇ.ಕೋರಣ್ಣವರ ಹಾಗೂ ಗ್ರಾಮ ಪಂಚಾಯತ ಸದಸ್ಯರಾದ ಜಿ.ಎಸ್. ಮಂಡಸೊಪ್ಪಿ,ಮಾಜಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಬಸವಂತಪ್ಪ ತಳವಾರ,ಪಿಡಿಓ ಎಮ್. ಆರ್. ತಿಮ್ಮನಗೌಡ್ರ,ವಕೀಲ ಎಸ್.ಹೆಚ್. ಮಂಡಸೊಪ್ಪಿ, ಕೆ.ಬಿ. ವಿರಸಣ್ಣವರ,ಎಸ್.ವಾಯ್.ಮಂಡಸೊಪ್ಪಿ, ಶಿವಾಜಿ.ಹೆಚ್.ಮಂಡಸೊಪ್ಪಿ, ಎಮ್.ಹೆಚ್. ಜಂತ್ಲಿ, ಈ ಕಾರ್ಯಕ್ರಮದಲ್ಲಿ ನಿಕಟಪೂರ್ವ ಎಸ್.ಡಿ.ಎಮ್.ಸಿ ಅಧ್ಯಕ್ಷರು ಶ್ರೀಧರ ವಸ್ತ್ರದ, ಹಾಗೂ ಉಪಾಧ್ಯಕ್ಷರು ಸರ್ವ ಸದಸ್ಯರನ್ನು ಸನ್ಮಾನ ಮಾಡಿ ಬಿಳ್ಕೊಟ್ಟರು.ನಂತರ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಎ.ಎಸ್.ಗೌಡರ ಅಧಿಕಾರ ವಹಿಸಿಕೊಂಡರು, ಉಪಾಧ್ಯಕ್ಷರಾಗಿ ಸುಮಂಗಲಾ ಉಮೇಶ ತಳವಾರ ಹಾಗೂ ಸರ್ವ ಸದಸ್ಯರು ಸೇರಿದಂತೆ ಶಿಕ್ಷಕರು-ವಿಧ್ಯಾರ್ಥಿ ಗಳು ಇದ್ದರು.