ಮಹಲಿಂಗಪುರ

ಪರಿಶಿಷ್ಟ ಜಾತಿ, ಪಂಗಡಗಳ ಕುಂದು ಕೊರತೆಗಳ ಸಭೆ

ಪರಿಶಿಷ್ಟ ಜಾತಿ, ಪಂಗಡಗಳ ಕುಂದು ಕೊರತೆಗಳ ಸಭೆ

ಮಹಾಲಿಂಗಪುರ 20: ಅಕ್ಟೋಬರ್ 15ರಂದು ಭಾನುವಾರ ರಂದು ಸಂಜೆ 6 ಗಂಟೆಗೆ ಸ್ಥಳೀಯ ಮಾದಾರ ಚೆನ್ನಯ್ಯ ಸಮುದಾಯ ಭವನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದು ಕೊರತೆಗಳ ಸಭೆ ಜರುಗಿತು. 

ಈ ಸಭೆಯಲ್ಲಿ ರಬಕವಿ /ಬನಹಟ್ಟಿ ತಾಲೂಕಿನ ವ್ರತ್ತ ನೀರೀಕ್ಷಕರಾದ ಸಂಜೀವ ಬಳಿಗಾರ ಮತ್ತು ಸ್ಥಳೀಯ ಠಾಣೆಯ ಪಿಎಐ ಪ್ರವೀಣ ಬಿಳಿಗಿ ಈ ಸಭೆಯಲ್ಲಿ ಉಪಸ್ಥಿತರಿದ್ದು ಸಮುದಾಯದ ಪರವಾಗಿ ಮುಖಂಡರು ಬುಧ್ಧ ಮತ್ತು ಬಸವಣ್ಣನವರ ಭಾವಚಿತ್ರಗಳನ್ನು ನೀಡಿ ಸನ್ಮಾನಿಸಿದರು. 

ಸನ್ಮಾನ ಸ್ವೀಕರಿಸಿ ಜನತೆಯ ಸಮಸ್ಯೆಗಳನ್ನು ಆಲಿಸಿದ ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿ, ಪ್ರಜೆಗಳ ಯೋಗ ಕ್ಷೇಮಕ್ಕಿರುವ ಇಆರ್ ಎಸ್ ಎಸ್ 112 ನ್ನು ಸದ್ಬಳಕೆ ಮಾಡಿಕೊಳ್ಳಲು ಕರೆ ನೀಡಿದರು. 

ಈ ಸಂದರ್ಭದಲ್ಲಿ ಎಸ್ ಸಿ /ಎಸ್ ಟಿ ಮುಖಂಡರಾದ ಲಕ್ಷ್ಮಣ ಮಾಂಗ, ಪರಶುರಾಮ ಮೇತ್ರಿ ಮಲ್ಲಪ್ಪ ಜಾನಪ್ಪಗೋಳ ಮಾತನಾಡಿ, ನಮ್ಮ ಕುಂದು ಕೊರತೆ ಸಭೆಗಳಿಗೆ ಕೇವಲ ಪೋಲಿಸ್ ಇಲಾಖೆ ಮಾತ್ರವಲ್ಲದೆ ವಿವಿಧ ಇಲಾಖೆಗಳಾದ ಟಿಎಂಸಿ, ಕೆಇಬಿ, ಸಮಾಜ ಕಲ್ಯಾಣ ಇಲಾಖೆಗಳು ಸಹ ಭಾಗವಹಿಸಿ ಸಮುದಾಯದ ನ್ಯೂನ್ಯತೆಗಳನ್ನು ಆಲಿಸಿ ಅವುಗಳಿಗೆ ಸ್ಥಳೀಯವಾಗಿ ಪರಿಹರಿಸುವ ಕೆಲಸವಾಗಬೇಕು. ನಮ್ಮ ಜನರಲ್ಲಿ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ. ಈ ಕಾರಣದಿಂದ ಕಾನೂನಿನ ಅರಿವಿಲ್ಲದೆ ಕೆಲವು ಪ್ರಕರಣಗಳು ನಡೆಯುತ್ತಿದ್ದು ಅವುಗಳನ್ನು ಹೋಗಲಾಡಿಸಲು ಶಿಕ್ಷಣ ಮತ್ತು ಕಾನೂನಿನ ಬಗ್ಗೆಯೂ ಅವರಲ್ಲಿ ತಿಳುವಳಿಕೆ ಮೂಡಿಸುವುದು ಅಗತ್ಯವಾಗಿದೆ ಎಂದರು. 

ಅರ್ಜುನ ದೊಡ್ಮನಿ, ಲಕ್ಷ್ಮಣ ಮಾಂಗ, ಪರಶುರಾಮ ಮೇತ್ರಿ, ಭೀಮಸಿ ಗೌಂಡಿ, ಶಿವಬಸು ಗೌಂಡಿ, ರಮೇಶ್ ಜಿಗಜಿನಗಿ, ಶ್ರೀಶೈಲ ದೊಡ್ಮನಿ, ಮಾರುತಿ ಚೆನ್ನದಾಸರ, ಬಸು ಮಾವಿನಹಿಂಡಿ, ನಂದನ ಮಾಂಗ, ಬಸವರಾಜ ಮಡ್ಡೆಣ್ಣವರ, ಅಜ್ಜಪ್ಪ ಸಣ್ಣಕ್ಕಿ, ಗಿರಿಯಪ್ಪ ಕಬಾಡಿ , ತಿಪ್ಪಣ್ಣ ಬಂಡಿವಡ್ಡರ, ಮಹಾನಿಂಗ ಶಿವನಗಿ, ಭೀಮಸಿ ಮಾವಿನಹಂಡಿ, ಶಶಿಧರ ಮುಖ್ಯನವರ, ಪೋಲಿಸ್ ಸಿಬ್ಬಂದಿ ಆರ್ ಆರ್‌. ಕಾಂಬಳೆ, ಎಂ ಎಸ್ ಸಣ್ಣಕ್ಕಿ, ಜೆ ಜಿ. ಪಾಟೀಲ್, ಎಲ್ ವಿ. ಹುಕುಮನವರ ಉಪಸ್ಥಿತರಿದ್ದರು. ಆರ್ ಆರ್ ಕಾಂಬಳೆ ಸ್ವಾಗತಿಸಿ, ಬಸವರಾಜ ಮಾವಿನಹಿಂಡಿ ನಿರೂಪಿಸಿ, ವಂದಿಸಿದರು. 


ಸುದ್ದಿ ಓದಿ