ಮಹಲಿಂಗಪುರ

ಸಾವಿತ್ರಿ ಬಾಯಿ ಫುಲೆ ಜಯಂತಿ: 5 ಜನ ಶಿಕ್ಷಕಿಯರಿಗೆ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ ಪ್ರದಾನ

ಸಾವಿತ್ರಿ ಬಾಯಿ ಫುಲೆ ಜಯಂತಿ: 5 ಜನ ಶಿಕ್ಷಕಿಯರಿಗೆ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ ಪ್ರದಾನ

ಮಹಾಲಿಂಗಪುರ: ಸ್ಥಳೀಯ ಮಹಾತ್ಮ ಜ್ಯೋತಿಬಾ ಫುಲೆ ಸಮಾಜ ಸೇವಾ ಸಮಿತಿ ವತಿಯಿಂದ ಸಾವಿತ್ರಿಬಾಯಿ ಫುಲೆಯವರ 192 ನೇ ಜಯಂತ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಬೆಳಿಗ್ಗೆ 8 ರಿಂದ ವಿವಿಧ ವಾದ್ಯಗೋಷ್ಠಿಯೊಂದಿಗೆ ನೂರಾರು ಮಹಿಳೆಯರ ಕುಂಭ ಮೇಳ, ಸಾವಿತ್ರಿಬಾಯಿ ಬಾಯಿ ಫುಲೆ ಭವ್ಯ ಭಾವಚಿತ್ರ ಮೆರವಣಿಗೆ ನಗರದಾದ್ಯಂತ ನಡೆಯಿತು. ಲಿಂಗೈಕ್ಯ ಶ್ರೀ ಸಿದ್ದೇಶ್ವರ ಶ್ರೀಗಳವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. 

ಮಕ್ಕಳ ಸವಾರ್ಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಪನಾ ಅನಿಗೋಳ, ಅಕ್ಕಾತಾಯಿ ಕಿಚಿಡಿ, ರಾಜೇಶ್ವರಿ ಹಗಳಗಾರ, ಶರೀಫಾ ಸಿಕ್ಕಲಗಾರ, ಗೀತಾ ನೇಸೂರ ಈ ಐದು ಜನ ಶಿಕ್ಷಕಿಯರನ್ನು ಗುರುತಿಸಿ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಿಪನಾಳದ ಶ್ರೀರಾಮ ಸೇವಾಶ್ರಮದ  ಪ್ರಭು ಮಹಾರಾಜರು ಸಾನಿಧ್ಯ ವಹಿಸಿ, ಮಹಾಲಿಂಗಪ್ಪ ಬಾಳಿಕಾಯಿ ಅಧ್ಯಕ್ಷತೆ ವಹಿಸಿದ್ದರು. 

ಮಾಜಿ ಸಚಿವ ಆರ್.ಬಿ.ತಿಮ್ಮಾಪುರ, ಉಮಾಶ್ರೀ, ವಿದ್ಯಾಧರ ಸವದಿ,ಧರೆಪ್ಪ ಸಾಂಗ್ಲಿಕರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಾವಿತ್ರಿ ಬಾಯಿ ಫುಲೆ ಜೀವನ ಸಾಧನೆ ಸ್ಮರಿಸಿದ. 

ಪುರಸಭಾ ಅಧ್ಯಕ್ಷ ಬಸವರಾಜ ಹಿಟ್ಟಿನಮಠ, ಸ್ಥಾಯಿ ಸಮಿತಿ ಚೇರ್ಮನ್ ಬಲವಂತಗೌಡ ಪಾಟೀಲ, ಬಸನಗೌಡ ಪಾಟೀಲ, ಯಲ್ಲನಗೌಡ ಪಾಟೀಲ, ಡಾ.ಎ.ಆರ್.ಬೆಳಗಲಿ, ಮಹಾಂತೇಶ ಹಿಟ್ಟಿನಮಠ ಅಂಬಾದಾಸ ಕಾಮೂತರ್ಿ, ಜಾವೇದ್ ಭಗವಾನ, ಶೇಖರ ಅಂಗಡಿ, ಮುಸ್ತಾಕ್ ಚಿಕ್ಕೋಡಿ, ರವಿ ಜವಳಗಿ, ಶೀಲಾ ಬಾವಿಕಟ್ಟಿ, ಸುನಿಲಗೌಡ ಪಾಟೀಲ, ಡಾ. ಸವಿತಾ ಕೋಳಿಗುಡ್ಡ, ಸಂಗಪ್ಪ ಹಲ್ಲಿ, ಬಸವರಾಜ ಬಾಳಿಕಾಯಿ, ಸುರೇಶ ಮಾಳಿ, ಕೃಷ್ಣಗೌಡ ಪಾಟೀಲ, ಮಲ್ಲಪ್ಪ ಸಿಂಗಾಡಿ, ಸಿದ್ದುಗೌಡ ಪಾಟೀಲ, ರವಿಗೌಡ ಪಾಟೀಲ, ಮಹೇಶ ಆರಿ, ಸದಾಶಿವ ಹೊಸಮನಿ, ಶಿವಪ್ಪ ಮಂಟೂರ, ಅಶೋಕ ಲಿಂಬಿಗಿಡದ, ಸದಾಶಿವ ಮಾಳಿ, ನೀಲಪ್ಪ ಕವಟಿ, ಮಹಾಲಿಂಗಪ್ಪ ತಟ್ಟಿಮನಿ, ಮುರಿಗೆಪ್ಪ ಮಾಳಿ ಇತರರಿದ್ದರು. 

ಕಾವ್ಯ ಮಾಳಿ ಪ್ರಾರ್ಥಿಸಿ, ಪತ್ರಕರ್ತ ನಾರನಗೌಡ ಉತ್ತಂಗಿ ನಿರೂಪಿಸಿ, ಪತ್ರಕರ್ತ ಜಯರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು 

ಸುದ್ದಿ ಓದಿ