ಮಹಿಳೆಯರಲ್ಲಿ ಮೊದಲು ಅಕ್ಷರ ಬೀಜ ಬಿತ್ತಿದ ಧೀರ ಮಹಿಳೆ ಸಾವಿತ್ರಿ: ಸಿದ್ದು ಕೊಣ್ಣೂರ
ಮಹಾಲಿಂಗಪುರ 03: ಮಹಿಳೆಯೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ನುಡಿಗೆ ಸಾಕ್ಷಿಯಾಗಿ ಸ್ವಾತಂತ್ರ ಪೂರ್ವ ಭಾರತದಲ್ಲಿ ಕಿತ್ತು ತಿನ್ನುವ ಬಡತನ ಬ್ರಿಟಿಷರ ಕೆಟ್ಟ ಆಡಳಿತದಿಂದ ಕಂಗೆಟ್ಟಿದ್ದ ಭಾರತದಲ್ಲಿ ಮೇಲ್ವರ್ಗದವರಿಗೆ ಮಾತ್ರ ಶಿಕ್ಷಕಣ ಎಂಬ ಅಘೋಷಿತ ಪುರುಷ ಪ್ರಧಾನ ದೇಶದಲ್ಲಿ ಮಹಿಳೆಯರು ಮನೆ ಬಿಟ್ಟು ಹೊರಬರುವುದು ದುಸ್ಥಿರವಾದ ಕಾಲದಲ್ಲಿ ಅಕ್ಷರ ಕಲಿತು ಭಾರತೀಯ ಮಹಿಳೆಯರಿಗೆ ಮಾದರಿಯಾಗಿ ಮಹಿಳೆಯರಲ್ಲಿ ಅಕ್ಷರ ಬೀಜ ಬಿತ್ತಿದ ಧೀರ ಮಹಿಳೆ ಸಾವಿತ್ರಿಬಾಯಿ ಪುಲೆ ಎಂದು ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಸಿದ್ಫು ಕೊಣ್ಣೂರ ಹೇಳಿದರು.
ನಗರದ ಮಾಳಿ ಸಮಾಜದ ಆಶ್ರಯದಲ್ಲಿ ಕಾಳಿಕಾ ಮಂದಿರದ ಹತ್ತಿರ ಇರುವ ಸಾವಿತ್ರಿಬಾಯಿ ಪುಲೆ ಸರ್ಕಲನಲ್ಲಿ ಆಯೋಜಿಸಿದ ಸಾವಿತ್ರಿಬಾಯಿ ಪುಲೆ ಆವರ 194 ನೇ ಜಯಂತಿ ಕಾರ್ಯಕ್ರಮವನ್ನು ರಿಬ್ಬನ ಕಟ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ ಬದುಕಿನ ಬಂಡಿಯಲ್ಲಿ ಸಾಗುತ್ತಿರುವಾಗ ಎನೆಲ್ಲ ಕಷ್ಟಗಳು ಬರುತ್ತವೆ. ಅವೆಲ್ಲವನ್ನೂ ಧೈರ್ಯವಾಗಿ ಎದುರಿಸಿದಾಗ ಮಾತ್ರ ಯಶಸ್ಸನ್ನು ಪಡೆಯಲು ಸಾಧ್ಯ. ಈ ಸಮಾಜದಲ್ಲಿ ಒಂದು ಒಳ್ಳೆಯ ಕೆಲಸವನ್ನು ಪ್ರಾರಂಭಿಸಿದಾಗ ಟಿಕೆ ಟಿಪ್ಪನೆಗಳು ಆಪಾದನೆಗಳು ಬರುವುದು ಸಹಜ. ಆದರೆ ಆ ಎಲ್ಲ ಟೀಕೆ ಟಿಪ್ಪಣೆಗಳಿಗೆ ಸರಿಯಾದ ರೀತಿಯಲ್ಲಿ ಉತ್ತರ ಕೊಡುವ ಛಾತಿ ಯಾರಲ್ಲಿ ಇರುತ್ತದೆಯೋ ಅವರು ಬದುಕಿನ ಪಯಣದಲ್ಲಿ ಅಂದುಕೊಂಡ ಗುರಿಯನ್ನು ಈಡೇರಿಸುತ್ತಾರೆ. ಕೊನೆಗೆ ಯಾವ ಸಮಾಜದಿಂದ ನಿಂದನೆಗೆ ಒಳಗಾಗಿರುತ್ತಾರೋ ಅದೇ ಸಮಾಜದಿಂದ ಗೌರವವನ್ನು ಗಳಿಸುತ್ತಾರೆ. ನಮ್ಮ ಸಮಾಜಕ್ಕೆ ದುಡಿದ ಅನೇಕ ಮಹನೀಯರು ಇದೇ ರೀತಿ ಕಲ್ಲುಮುಳ್ಳುಗಳ ಹಾದಿಯಲ್ಲಿ ಸಾಗಿರುವ ಸಾವಿರಾರು ನಿದರ್ಶನಗಳಿವೆ. ಅದರಲ್ಲಿ ನಮ್ಮ ದೇಶದ ಮೊದಲ ಮಹಿಳಾ ಶಿಕ್ಷಕಿಯಾದ ಸಾವಿತ್ರಿಬಾಯಿ ಪುಲೆಯವರು ಒಬ್ಬರು ಎಂದರು.
ನಂತರ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಶೇಖರ ಅಂಗಡಿ ಅತ್ಯಂತ ಸಾಮಾನ್ಯ ಕುಟುಂಬದಲ್ಲಿ 1831 ಜನವರಿ 3 ರಂದು ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ನೈಗಾಂವ ಗ್ರಾಮದಲ್ಲಿ ಹುಟ್ಟಿದ ಸಾವಿತ್ರಿಬಾಯಿ 8 ನೇ ವರ್ಷದಲ್ಲೇ ಜ್ಯೋತಿಬಾ ಪುಲೆ ಅವರನ್ನು ವಿವಾಹವಾದರು ಮುಂದೆ ಈ ದಂಪತಿ ಶೋಷಿತರ ದಮನಿತರ ಪರ ಕೆಲಸ ಮಾಡಿದರು. ಪತಿಯಿಂದಲೇ ಶಿಕ್ಷಣದ ಮಹತ್ವ ಅರಿತು ಅಕ್ಷರಾಭ್ಯಾಸ ಮಾಡಿದ ಸಾವಿತ್ರಿಬಾಯಿ ದೇಶದ ಮೊದಲ ಶಿಕ್ಷಕಯಾಗಿ ಕಾರ್ಯ ನಿರ್ವಹಿಸಿದರು. ಅವರು ದೇಶದಲ್ಲಿ ಮೊಟ್ಟಮೊದಲ ಹೆಣ್ಣುಮಕ್ಕಳ ಪ್ರತೇಕ ಶಾಲೆ ಆರಂಭಿಸಿದರು. ಹೆಣ್ಣುಮಕ್ಕಳ ಶಾಲೆಗಳನ್ನು ತೆರೆಯಲು ಅವರಿಗೆ ಕೈ ಜೋಡಿಸಿದವರು ಪತಿ ಜ್ಯೋತಿಬಾ ಪುಲೆ. ಬಾಲ್ಯವಿವಾಹ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತೊಲಗಿಸಲು ಮೊದಲು ಮಹಿಳೆ ಶಿಕ್ಷಿತಳಾಗಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ವಿಚಾರಗಳನ್ನು ಸಾವಿತ್ರಿ ಆಗಲೇ ಪ್ರತಿಪಾದಿಸಿದರು. ಹೆಣ್ಣಿಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬವೆ ಸನ್ಮಾರ್ಗದತ್ತ ಹೋಗುತ್ತದೆ. ಎಂದು ತಮ್ಮ ಕಾರ್ಯಗಳ ಮೂಲಕವೇ ತೋರಿಸಿಕೊಟ್ಟು ಸಾವಿತ್ರಿಬಾಯಿ ಅಕ್ಷರತಾಯಿ ಎನಿಸಿಕೊಂಡರು.1848 ರಿಂದ 1852 ರ ಅವಧಿಯಲ್ಲಿ 18 ಶಾಲೆಗಳನ್ನು ಪುಲೆ ದಂಪತಿ ತೆರೆದಿದ್ದರು ಎಂದರು.
ಪುರಸಭೆ ಸದಸ್ಯರಾದ ಯಲ್ಲನಗೌಡ ಪಾಟೀಲ ಮಾತನಾಡಿ ವಿದ್ಯೆ ಎಲ್ಲರಿಗೂ ಸಿಗಬೇಕು ಎಂಬ ಆಲೋಚನೆ ಮಾಡಿದ್ದು ಮಹತ್ವದ ಸಂಗತಿ, ಎಲ್ಲರಿಗೂ ಅಕ್ಷರದೂಟ ಉನಬಡಿಸಿದ ಸಾವಿತ್ರಿ ಮಹಿಳೆಯರು ಕೂಡಾ ಪುರುಷರಂತೆ ಶಿಕ್ಷಣ ಪಡೆಯಬೇಕೆಂಬ ಮಹದಾಸೆಯಿಂದ,ತಮಗೋದಗಿದ ಕಷ್ಟ ಕಾರ್ಪಣಯಗಳನ್ನು ಲೆಕ್ಕಿಸದೆ ಮಹಿಳಾ ಸಂಕುಲಕ್ಕೆ ಶೈಕ್ಷಣಿಕ ದಾರಿ ತೋರಿಸಿದರು ಇವರ ಸಾಧನೆಯನ್ನು ಪರಿಗಣಿಸಿ ಬ್ರಿಟಿಷ್ ಸರ್ಕಾರ 'ಇಂಡಿಯಾಸ ಫಸ್ಟ್ ಲೇಡಿ ಟೀಚರ್ 'ಎಂದು ಬಿರುದು ಕೊಟ್ಟಿತು.1855 ರಲ್ಲಿ ಕೂಲಿ ಕಾರ್ಮಿಕರಿಗಾಗಿ ರಾತ್ರಿ ಶಾಲೆ ಸ್ಥಾಪನೆ ಮಾಡಿದ್ದರು,1897 ರಲ್ಲಿ ಪ್ಲೇಗ್ ಪೀಡಿತ ರೋಗಿಗಳ ಸೇವೆ ಮಾಡುವಾಗ ಅದೇ ರೋಗಕ್ಕೆ ಸಾವಿತ್ರಿಬಾಯಿ ಪುಲೆ ಬಲಿಯಾದರು ಎಂದು ಹೇಳಿದರು.
ನಂತರ ಮಾತನಾಡಿದ ನಿಂಗಪ್ಪ ಬಾಳಿಕಾಯಿ ಸತಿಸಹಗಮನ, ಬಾಲ್ಯವಿವಾಹ, ಕೇಶಮಂಡನ, ಅಸ್ಪೃಶ್ಯತೆ ವಿರುದ್ಧ ಹೋರಾಡಿದರು, ಅಂದಿನ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೆ ವಿವಾಹ ಮಾಡುತ್ತಿದ್ದರು, ತಮ್ಮದಲ್ಲದ ತಪ್ಪಿಗೆ ನರಕಯಾತನೇ ಅನುಭವಿಸಿ, ವಿಧವೆಯಾದವರಿಗೆ ಸಾವಿತ್ರಿಬಾಯಿ ತಮ್ಮಮನೆಯನ್ನೇ ಆಶ್ರಯ ತಾನವನ್ನಾಗಿ ಮಾಡಿದರು.1890 ರಲ್ಲಿ ಜ್ಯೋತಿಭಾ ನಿಧನರಾದಾಗ ಅಂತ್ಯ ಸಂಸ್ಕಾರದ ವಿಧಿಗಳನ್ನು ತಾವೇ ಮಾಡುವ ಮೂಲಕ ಸ್ಥಾಪಿತ ಸಂಪ್ರದಾಯಗಳಿಗೆ ಸಾವಿತ್ರಿ ತಿಲಾಂಜಲಿ ಇಟ್ಟರು. ಸಾವಿತ್ರಿ ಬದುಕಿರುವವರೆಗೆ ಸತ್ಯಶೋಧಕ ಚಳುವಳಿ ನಡೆಸಿದರು. ಕೋಟ್ಯಾಂತರ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದರು ಎಂದರು.
ಈ ಸಂಧರ್ಭದಲ್ಲಿ ಪುರಸಭೆ ಸದಸ್ಯರಾದ ರಾಜು ಚಮಕೇರಿ, ಬಲವಂತಗೌಡ ಪಾಟೀಲ, ಮುಖಂಡರಾದ ಕೃಷ್ಣಗೌಡ ಪಾಟೀಲ, ಅಶೋಕ ಅಂಗಡಿ,ಮಹಾಲಿಂಗ ಮಾಳಿ, ಮಲ್ಲಪ್ಪಾ ಭಾವಿಕಟ್ಟಿ, ಜಿ ಎಸ್ ಗೊಂಬಿ, ರಾಜೇಶ ಬಾವಿಕಟ್ಟಿ, ಮಾನಿಂಗಪ್ಪಾ ಬಾಳಿಕಾಯಿ, ವಿಜುಗೌಡ ಪಾಟೀಲ, ಈರಾಪ್ಪ ಮಾಳಿ, ಶ್ರೀಶೈಲ ಮಾಳಿ, ಶಿವಪ್ಪ ಮಾಳಿ, ಕಾಳಪ್ಪ ಮಾಳಿ,ರುದ್ರ್ಪ ರಾಮದುರ್ಗ, ಚಿದಾನಂದ ಬಾಳಿಕಾಯಿ, ರವೀಂದ್ರ ಬಡಕಂಬಿ, ಅರ್ಜುನ ದೊಡಮನಿ, ಬಸು ನಿಪ್ಪನಾಳ, ಪ್ರಭು ಮಲಾಬದಿ, ಚನ್ನಪ್ಪ ಬಾಳಿಕಾಯಿ, ಶ್ರೀಕಾಂತ ಮಾಳಿ, ಸೇರಿ ಹಲವರು ಇದ್ದರು.