ಕನ್ನಡ ಉಳಿಸಿ ಬೆಳೆಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ: ಕಸಾಪ ಅಧ್ಯಕ್ಷ ಬಿರಾದಾರ
ತಾಳಿಕೋಟಿಯಲ್ಲಿ ನಡೆಯಲಿರುವ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಕರೆ
ಮುದ್ದೇಬಿಹಾಳ: ಅ.1 ರಂದು ತಾಳಿಕೋಟಿ ಪಟ್ಟಣದಲ್ಲಿ ನಡೆಯಲಿರುವ ತಾಳಿಕೋಟಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುದ್ದೇಬಿಹಾಳ ತಾಲೂಕಿನ ಎಲ್ಲ ಸಾಹಿತ್ಯ ಪ್ರೇಮಿಗಳು, ವಿದ್ಯಾರ್ಥಿಗಳು, ಮಹಿಳೆಯರು, ಶಿಕ್ಷಕ ವೃಂದದವರು, ರಾಜಕೀಯ ಗಣ್ಯರು ಸೇರಿದಂತೆ ಎಲ್ಲ ಜನರು ಭಾಗವಹಿಸುವ ಮೂಲಕ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಅಧ್ಯಕ್ಷ ಕಾಮರಾಜ ಬಿರಾದಾರ ಕರೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸಂಜೆ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಸಾಹಿತಿಗಳ, ಗಣ್ಯರ ಸಭೆ ನಡೆಸಿ ಅವರು ಮಾತನಾಡಿದರು.
ಎಲ್ಲೇ ಆಗಲಿ ಕನ್ನಡದ ತಾಯಿಯ ಸೇವೆ ಮಾಡುವ ಮೂಲಕ ಕನ್ನಡ ಉಳಿಸಿ ಬೆಳೆಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಮುದ್ದೇಬಿಹಾಳ ಪಟ್ಟಣದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ನಿಂದ ದತ್ತಿ, ಚುಟುಕು, ಸೇರಿದಂತೆ ಅನೇಕ ಕನ್ನಡ ಸಾತ್ಯಾತ್ಮಾಕ ಕಾರ್ಯಕ್ರಮಗಳ ಹಮ್ಮಿಕೊಳ್ಳುವ ಮೂಲಕ ಯುವ ಪ್ರತಿಭೆಗಳಿಗೆ ಯುವ ಸಾಹಿತಿಗಳಿಗೆ ಪ್ರೋತ್ಸಾಹಿಸುವುದರಿಂದ ತಾಲೂಕಿನಲ್ಲಿ ಕನ್ನಡದ ಕಂಪನ್ನು ಪಸರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ, ಅದಕ್ಕೆ ನಮ್ಮ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಹಿರಿಯ ಹಾಗೂ ಕಿರಿಯ ಸಾಹಿಗಳ ಮುಖಂಡರ ಸಹಕಾರ ಅತ್ಯಮುಲ್ಯವಾಗಿದೆ. ಇತ್ತಿಚಿಗೆ ನಮನ್ನು ಹೆತ್ತ ತಂದೆ ತಾಯಿಯರನ್ನು ಗೌರವಿಸೋ ಹಾಗೂ ಪ್ರಿತಿಸೋ ಮನಸ್ಸುಗಳು ಕಡಿಮೆಯಾಗುತ್ತಿವೆ, ಶ್ರೀಮಂತರು ತಮ್ಮ ತಂದೆ ತಾಯಿಯವರ ಹೆಸರಲ್ಲಿ ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ದತ್ತಿ ಕಾರ್ಯಕ್ರಮ ನಡೆಸಲು ಮುಂದಾಗಬೇಕು ಇದರಿಂದ ಹರಿಯನ್ನು ನೆನೆಯುವುದು ಮಾತ್ರವಲ್ಲದೇ ಅವರ ತತ್ಪಾದರ್ಶಗುಣಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಕನ್ನಡ ಸಂಸ್ಕೃತಿ, ಆಚಾರ, ವಿಚಾರ, ಪರಂಪರೆ ಉಳಿಸಲು ಸಾಧ್ಯ ಎಂದರು.
ಅದರಂತೆ ಮುದ್ದೇಬಿಹಾಳ ಪಟ್ಟಣ ಸೇರಿದಂತೆ ತಾಲೂಕಿನಿಂದ ತಾಳಿಕೋಟಿ ಸಾಹಿತ್ಯ ಸಮ್ಮೇಳನಕ್ಕೆ ಹೋಗಿಬರಲು ಸಾಹಿತ್ಯಾಸಕ್ತರು, ಸಾರ್ವಜನಿಕರು, ಮಹಿಳೆಯರಿಗೆ ಅಂದು ಒಂದು ದಿನದ ಮಟ್ಟಿಗೆ ಇಲ್ಲಿನ ಕೆ ಎಸ್ ಆರ್ ಟಿ ಸಿ ಬಸ್ ಗಳ ಸೇವೆ ಹೆಚ್ಚಿಸಲು ಅವಕಶ ಕಲ್ಪಿಸಬೇಕು ಎಂದು ಡಿಪೋ ಅಧಿಕಾರಿಗಳಿಗೆ ಹಾಗೂ ಶಾಲೆ ರಜೆ ಘೋಷಿಸುವಂತೆ ತಾಲೂಕಾ ಕ್ಷೇತ್ರ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಶಾಸಕ ಸಿ ಎಸ್ ನಾಡಗೌಡ(ಅಪ್ಪಾಜಿ)ಅವರಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಇದರಿಂದ ಸಮ್ಮೇಳನ್ನಕ್ಕೆ ಹೋಗಿಬರುವವರಿಗೆ ಅನುಕೂಲವಾಗಲಿದೆ ಎಂದರು.
ಈ ವೇಳೆ ಹಿರಿಯ ಸಾಹಿತಿ ಅಶೋಕ ಮಣಿ ಅವರು ಮಾತನಾಡಿ ತಾಳಿಕೋಟಿಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಕ್ಕೆ ಮುದ್ದೇಬಿಹಾಳ ತಾಲೂಕಿನ ಸಾಹಿತಿಗಳಿಗೆ ಹಾಗೂ ಸಾರ್ವಜನಿಕರಿಗೆ ಇಲ್ಲಿನ ಪ್ರತಿಷ್ಠಿತ ಗಣ್ಯರಿಗೆ ಆಮಂತ್ರಿಸಬೇಕಿತ್ತು, ಮಾಹಿತಿ ಕೊರತೆಯಿಂದಲೋ ಅಥವಾ ಒತ್ತಡದಿಂದಲೋ ಯಾವ ಕಾರಣಕ್ಕೆ ಅವರು ತಾಳಿಕೋಟಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಹೀಗೆ ಕಡೆಗಣಿಸಿದರು ಎಂಬುದು ಗೊತ್ತಾಗುತ್ತಿಲ್ಲ. ಈ ಹಿಂದೆ ಮುದ್ದೇಬಿಹಾಳ ತಾಳಿಕೋಟಿ ಅಖಂಡ ತಾಲೂಕು ಇದ್ದಾಗ ಅಡಿವೇಪ್ಪ ಕಡಿಯವರು ಕನ್ನಡ ಸಾಹಿತ್ಯ ಪರಿಷತ್ ನ ತಾಲೂಕಾ ಅಧ್ಯಕ್ಷರಾಗಿದ್ದರು ಶಾಂತಾಬಾಯಿ ನೂಲಿಕರ ಅವರು ತಾಳಿಕೋಟಿ ಹೋಬಳಿ ಮಟ್ಟದ ಅಧ್ಯಕ್ಷರಾಗಿದ್ದರು ತಾಳಿಕೋಟಿಯಲ್ಲಿ ನಡೆದ ಹೋಬಳಿ ಮಟ್ಟ ಸಾಹಿತ್ಯ ಸಮ್ಮೇಳನದಲ್ಲಿ ತಾಳಿಕೋಟಿಯ ಎಲ್ಲ ಸಾಹಿತ್ಯಾಸಕ್ತರು, ಗಣ್ಯರು ಮುಖಂಡರು ಸೇರಿಕೊಂಡು ನಮ್ಮ ತಾಲೂಕಿನ ಹಿರಿಯ ಸಾಹಿತಿ ಬಿ ಎಂ ಹಿರೇಮಠ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಗೌರವಿಸಿದ್ದಾರೆ. ಹಾಗಂತ ನಾವು ಸಾಹಿತ್ಯ ಸಮ್ಮೇಳನ್ನಕ್ಕೆ ಬರೋದಿಲ್ಲ ಎಂದು ಹೇಳುವುದಿಲ್ಲ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಎಲ್ಲೇ ಸಾಹಿತ್ಯ ಸಮ್ಮೇಳನ ನಡೆದರೂ ನಾವು ಸ್ವಯಂ ಪ್ರೇರಿತವಾಗಿ ಬಾಗವಹಿಸಿ ಕನ್ನಡ ತಾಯಿ ಭುವನೇಶ್ವರಿಯ ಸೇವೆ ಮಾಡುವಲ್ಲಿ ಮುಂದಾಗುತ್ತೇವೆ ಅದರಂತೆ ಸಧ್ಯ ಅ, 1 ರಂದು ತಾಳಿಕೋಟಿ ಪಟ್ಟಣದಲ್ಲಿ ಜರುಗಲಿರುವ ತಾಲೂಕಾ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲರೂ ಬಾಗವಹಿಸಿ ಯಶಶ್ವಿಗೊಳಿಸೋಣ ಎಂದರು
ಸಧ್ಯ ಕಳೇದ ಹಲವು ವರ್ಷಗಳಿಂದ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಚಟುವಟಿಕೆಗಳ ನಡೆಯದೆ ಕನ್ನಡ ಮನಸುಗಳಿಗೆ ಉತ್ಸಾಹ ಕುಂಟಿತಗೊಳ್ಳುವಲ್ಲಿ ಕಾರಣವಾಗಿದೆ. ಈ ನಿಟ್ಟಿನಲ್ಲಿ ಕಾಮರಾಜ ಬಿರಾದಾರ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಿರಿ ಯುವಕ ಪಡೆಯನ್ನು ಹೊಂದಿದ್ದಿರಿ ಮೊದಲು ನಿಮ್ಮ ಅಧಿಕಾರ ಸ್ವಿಕಾರ ಸಮಾರಂಭ ನಡೆಸುವ ಮೂಲಕ ತಾಲೂಕಿನಲ್ಲಿ ಸಾಹಿತ್ಯದ ಚಟುವಟಿಕೆಗಳನ್ನು ಕೈಗೊಳ್ಳಬೇಕು . ಇಡಿ ತಾಲೂಕಿನ ಎಲ್ಲ ಸಾಹಿತಿಗಳು ನಿಮ್ಮ ಬೆನ್ನ ಹಿಂದೆ ನಿಂತು ಇಮಗೆ ಸ್ಪೂರ್ತಿಯಾಗಿ ನಿಲ್ಲುತ್ತೇವೆ ಎಂದು ಸಲಹೆ ನೀಡಿದರು.
ಪತ್ರಕರ್ತರಾದ ಡಿ ಬಿ ವಡವಡಗಿ, ಪುಂಡಲೀಕ ಮುರಾಳ, ಪರುಶುರಾಮ ಕೋಣ್ಣೂರು, ಶಂಕರ ಹೆಬ್ಬಾಳ, ಸಾಹಿತಿ ಪಿ ಎಚ್ ಉಪ್ಪಲದಿನ್ನಿ, ಸಾಹಿತಿ ಮತ್ತು ತಾಲೂಕಾ ಅಕ್ಷರ ದಾಸೋಹ ಸಹಾಯಕ ನಿರ್ಧೇಶಕ ಎಂ ಎಂ ಬೆಳಗಲ್, ಪ್ರಭುಗೌಡ ರಾಯರಡ್ಡಿ ಸೇರಿದಂತೆ ಹಲವು ಸಾಹಿತಿಗಳು ಪತ್ರಕರ್ತರು ಮಾತನಾಡಿ. ತಾಳಿಕೋಟಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಲ್ಲಿನ ಅಧ್ಯಕ್ಷರು ಮುದ್ದೇಬಿಹಾಳಕ್ಕೆ ಬಂದು ಒಲ್ಲಿನ ಸಾಹಿತಿಗಳಿಗೆ ಪತ್ರಕರ್ತರಿಗೆ, ಗಣ್ಯರಿಗೆ ಸೌಜಕ್ಕಾದರೂ ಆಹ್ವಾನಿಸಬೇಕಿತ್ತು. ಆದರೇ ಆಮಂತ್ರಿಸದೇ ಯಾರದೋ ಒಬ್ಬರ ಕೈಯಲ್ಲಿ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಒಂದಿಷ್ಟು ಆಮಂತ್ರಣ ಪತ್ರಿಕೆಗಳನ್ನು ಕಳಿಸಿದ್ದು ಶೋಭೆ ತರುವಂತಹದ್ದಲ್ಲ. ಹಾಂಗೆಂದ ಮಾತ್ರವಕ್ಕೆ ಸಮ್ಮೇಳನದ ವಿರೋಧಿಗಳಲ್ಲ ನಾವ್ಯಾರು ಬರೋದಿಲ್ಲ ಎಂದು ಹೇಳುವುದಿಲ್ಲ ನಾವು ಕನ್ನಡ ಪ್ರೇಮಿಗಳು ಸ್ವಯಂ ಪ್ರೇರಿತರಾಗಿ ಎಲ್ಲ ಸಾಹಿತಿಗಳು, ಮುಖಂಡರು ಒಗ್ಗಟ್ಟಾಗಿ ಸಾಹಿತ್ಯ ಸಮ್ಮೇಳನದಲ್ಲಿ ಬಾಗವಹಿಸಿ ಯಶಸ್ವಿಗೆ ಸಹಕರಿಸುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ವೇಳೆ ಸಾಹಿತಿ ರಹೇಮನಸಾ ಬಿದರಕುಂದಿ, ತಾಲೂಕಾ ಲಿಂಗಾಯತ್ ಪಂಚಮಸಾಲಿ ಸಮಾಜದ ಅಧ್ಯಕ್ಷ ಅಮರೇಶ ಗೂಳಿ, ಹುಸೇನ ಮುಲ್ಲಾ, ವಿಜಯ ಭಾಸ್ಕರ, ಸದಾನಂದ ಮಠ, ಸಿದ್ದು ಹಡಲಗೇರಿ, ಎ ಆರ್ ಮುಲ್ಲಾ, ರಾಜುಗೌಡ ತುಂಬಗಿ, ಬಿ ಎಂ ಪಾಟೀಲ, ಸೋಮನಗೌಡ ಪಾಟೀಲ, ಸಂಗಪ್ಪ ಮೇಲಿಮನಿ, ಸೇರಿದಂತೆ ಹಲವರು ಇದ್ದರು.