ರಕ್ತದಾನದಿಂದ ಪ್ರಾಣ ರಕ್ಷಿಸಿ: ಕೆಪಿಸಿಸಿ ವಕ್ತಾರ ಪತ್ರೇಶ್ ಹಿರೇಮಠ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 10: ಇಂದಿನ ವೈಜ್ಞಾನಿಕ ಯುಗದಲ್ಲಿ ಎನು ಬೇಕಾದರೂ ಸೃಷ್ಠಿ ಮಾಡಬಹುದು, ಆದರೆ ರಕ್ತ ಕೃತಕವಾಗಿ ಸೃಷ್ಠಿಸಲು ಅಸಾಧ್ಯವಾಗಿದ್ದು ರಕ್ತದಾನ ಮಾಡುವ ಮೂಲಕ ಜನರ ಪ್ರಾಣ ರಕ್ಷಣೆಗೆ ಯುವಜನತೆ ಮುಂದಾಗಬೇಕೆಂದು ರಾಜ್ಯ ಕಾಂಗ್ರೆಸ್ ವಕ್ತಾರ ಪತ್ರೇಶ್ ಹಿರೇಮಠ ಕರೆ ನೀಡಿದರು.
ತಾಲೂಕಿನ ಬಸರಕೋಡು ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಬ್ಲಡ್ ಬ್ಯಾಂಕ್ ಪ್ರಾಥಮಿಕ ಆರೋಗ್ಯ ಕೇಂದ್ರ, ತಂಬ್ರಹಳ್ಳಿ ಸ್ಥಳೀಯ ಸಂಸ್ಥೆ, ಸಂಘ ಸಂಸ್ಥೆಗಳು ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ಯುವ ಜನತೆ ಹತ್ತಾರು ಮಹತ್ತರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ ಅದರಲ್ಲಿ ಜಯಂತಿ ಸೇರಿದಂತೆ ಸ್ಮರಣಾರ್ಥಗಳಲ್ಲಿ ರಕ್ತದಾನ ಶಿಬಿರಗಳು ಏರಿ್ಡಸಿ ಉತ್ತಮ ಕಾರ್ಯ ಮಾಡುತ್ತಾರೆ ಹಾಗಯೇ ಯುವ ಪಿಳಿಗೆಯು ಸಾವು ಬದುಕಿನ ಮದ್ಯ ಹೋರಾಡುತ್ತಿರುವವರಿಗೆ ರಕ್ತದ ಅವಶ್ಯಕತೆ ಇದ್ದಾಗ ಸೂದಲೇ ಸ್ಪಂದಿಸುವಂತಹ ಗುಣ ಬೇಳೆಸಿಕೊಳ್ಳಬೇಕೆ ಎಂದರು.
ತಂಬ್ರಹಳ್ಳಿ ಪೊಲೀಸ್ ಠಾಣೆಯ ಎ.ಎಸ್.ಐ ಕರೀವೀರ್ಪ ಕಬ್ಬೇರ್ ಮಾತನಾಡಿ ಪ್ರಸ್ತುತ ಪೀಳಿಗೆಯು ೆ ದುಶ್ಚಟಗಳ ದಾಸ್ಯರಾಗಿ ತಮ್ಮ ಅಮೂಲ್ಯ ಜೀವನವನ್ನು ಹಾಳುಮಾಡಿಕೊಳ್ಳದೇ, ಸಧೃಢ ಸಮಾಜ ನಿರ್ಮಾಣಕ್ಕೆ ಸಧೃಢ ಆರೋಗ್ಯ ಅವಶ್ಯಕವಾಗಿದೆ, ಆರೋಗ್ಯದತ್ತ ಗಮನ ನೀಡಿ ಆರೋಗ್ಯವಾಗಿದ್ದರೆ ಅವಶ್ಯಕವಿದ್ದಾಗ ಇನ್ನೊಂದು ಜೀವಕ್ಕೆ ರಕ್ತ ನೀಡುವುದರ ಮೂಲಕ ಜೀವ ಉಳಿಸುವ ಕಾರ್ಯ ಮಾಡಬಹುದಾಗಿದೆ ಎಂದು ಕಿವಿ ಮಾತು ಹೇಳಿದರು.
ಬನ್ನಿಗೋಳ ಗ್ರಾಮ ಪಂಚಾಯತಿ ಅಧ್ಯಕ್ಷ ಕರಿಬಸರಾಜ ಬಣಕಾರ ರಕ್ತದಾನ ಮಾಡುವ ಮೂಲಕ ಯುವಕರಿಗೆಆದರ್ಶಪ್ರಯಾವಾದರು. ಈ ಸಂಧರ್ಭದಲ್ಲಿ ಸರ್ಕಾರಿ ಪ್ರೌಢಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಕೆ.ಎಂ.ಶಿವಮೂರ್ತಿ, ಮಾಜಿ ಗ್ರಾ.ಪಂ.ಸದಸ್ಯರಾದ ಬಿ.ಸಿ.ಬಸವರಾಜ, ಹೆಚ್.ಬಿ.ಮೈಲಪ್ಪ, ನಾಗಭೂಷಣ, ಮುಖಂಡರಾದ ಶೇಖರಯ್ಯ ಎಸ್.ಎಂ., ಎ.ಕೆ.ಸಾರೆಪ್ಪ, ಮಹಾಂತೇಶ್ ಹೊಳಗುಂದಿ, ಧನಂಜಯ ಮೇಟಿ, ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ನಾಗರಾಜ, ಆಶಾ ಕಾರ್ಯಕರ್ತೆಯರಾದ ಪ್ರತಿಭಾ ಕೆ.ಎಂ., ಎಸ್.ಸರಸ್ವಚತಿ. ವಿವೇಕಾನಂದ ಬ್ಲಡ್ ಬ್ಯಾಂಕ್ನ ವಿರುಪಾಕ್ಷ, ಆಪ್ತ ಸಮಾಲೋಚಕ ಮಹೇಂದ್ರ, ರಾಜೇಂದ್ರ ಬಾಬು ಇದ್ದರು.