ಸವದತ್ತಿ ಪೊಲೀಸರ ಕಾರ್ಯಾಚರಣೆ : ಇಬ್ಬರು ಮನೆಗಳ್ಳರ ಬಂಧನ, 3.60 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ವಶ
ಬೆಳಗಾವಿ, ಜ, 28 : ಚಿಂದಿ ಆರಿಸುವ ಹಾಗೂ ಬೀಕ್ಷೆ ಬೆಡುವ ನೆಪದಲ್ಲಿ ಮನೆಗಳ್ಳತನ ಮಾಡಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಫರಾರಿಯಾಗಿದ್ದ ಖದೀಮರನ್ನು ಬಂಧಿಸುವಲ್ಲಿ ಜಿಲ್ಲೆಯ ಸವದತ್ತಿ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರಿಂದ 50 ಸಾವಿರ ನಗದು ಸೇರಿದಂತೆ 3.60 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಸವದತ್ತಿ ತಾಲೂಕಿನ ಬೆಟಸೂರ ಗ್ರಾಮದ ಹೊರವಲಯದಲ್ಲಿರುವ ಗುರಪ್ಪ ಅಳಗೋಡಿ ಇವರ ಮನೆಯಲ್ಲಿ ದಿ. 6ರಂದು ಹಗಲಿನಲ್ಲಿ ಚಿಂದಿ ಆಯುವ ಹಾಗೂ ಭೀಕ್ಷೆ ಬೇಡುವ ನೆಪದಲ್ಲಿ ಗ್ರಾಮದಲ್ಲಿ ತಿರುಗಾಡಿ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಮನೆಯಲ್ಲಿ ಕಳ್ಳತನ ಮಾಡಿದ ಬಗ್ಗೆ ಸವದತ್ತಿ ಪೋಲಿಸ್ ಠಾಣೆಯಲ್ಲಿ ಕೇಸ್ ನಂ: 10/2023 ಕಲಂ 454 380 ಐಪಿಸಿ ಅಡಿಯಲ್ಲಿ ದೂರು ದಾಖಲಾಗಿತ್ತು.
ಈ ಪ್ರರಕರಣದ ಪತ್ತೆ ಮಾಡಲು ರಾಮದುರ್ಗ ಡಿಎಸ್ ಪಿ ರಾಮನಗೌಡ ಇವರ ಮಾರ್ಗದರ್ಶನದಲ್ಲಿ ಸವದತ್ತಿ ಸಿಪಿಐ ಕರುಣೇಶಗೌಡ ಜೆ, ಪಿಎಸ್ ಐ ಪ್ರವೀಣ ಗಂಗೋಳ ಕಾ.ಸೂ ಹಾಗೂ ಕೆ. ಎಮ್ ಕಲ್ಲೂರ ಪಿಎಸ್‌ಐ ಅ.ವಿ ಹಾಗೂ ಸಿಬ್ಬಂದಿಗಳಾದ ರಮೇಶ ಗೇಜೇರಿ ಎಎಸ್‌ಐ, ಉಮೇಶ ಗಾಣಗಿ, ಮಲ್ಲಿಕಾರ್ಜುನ ತೇರದಾಳ, ಹಣಮಂತ ವಾಸನ, ಆನಂದ ಕಪ್ಪತ್ತಿ, ಶ್ರೀಕಾಂತ ಜಾಧವ, ಶ್ರೀಮತಿ ಸರಸ್ವತಿ ಹಂಪಣ್ಣವರ, ಶ್ರೀಮತಿ ಸವೀತಾ ಹೊಸೂರ ಇವರ ತಂಡವು ದಿ. 27ರಂದು ಸವದತ್ತಿಯ ಯಲ್ಲಮ್ಮನಗುಡ್ಡದಲ್ಲಿ ಇಬ್ಬರು ಆರೋಪಿತರಿಗೆ ಬಂಧಿಸಿ ಅವರಿಂದ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಚುಳುಕಿ, ಬೆಟಸೂರ, ಚಿಕ್ಕಉಳ್ಳಿಗೇರಿಯಲ್ಲಿ ಕಳ್ಳತನವಾದ ಒಟ್ಟು 60 ಗ್ರಾಮ ಬಂಗಾರದ ಆಭರಣಗಳು ಹಾಗೂ 100 ಗ್ರಾಮ ಬೆಳ್ಳಿಯ ಮೂರ್ತಿಗಳು ಮತ್ತು 50,000 ರೂ. ನಗದು ಹಣವನ್ನು ಹೀಗೆ ಒಟ್ಟು 3,60,000 ರೂ ಮೌಲ್ಯದ ಚಿನ್ನಾಭರಣ ವಶ ವಶಪಡಿಸಿಕೊಂಡಿದ್ದಾರೆ.
ಸದರಿ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಸವದತ್ತಿ ಪೊಲೀಸರ ಈ ಕಾರ್ಯವನ್ನು ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಹಾಗೂ ಹೆಚ್ಚುವರಿ ಎಸ್ ಪಿ ಮಹಾನಿಂಗ ನಂದಗಾವಿ ಅವರು ಪ್ರಶಂಶಿಸಿರುತ್ತಾರೆ.