ಮಹಲಿಂಗಪುರ

ಎನ್‌ಎಂಎಸ್ ಪರೀಕ್ಷೆಯಲ್ಲಿ ಸಾವಕ್ಕ್‌ ತಾಲೂಕಿಗೆ ದ್ವಿತೀಯ

ಎನ್‌ಎಂಎಸ್ ಪರೀಕ್ಷೆಯಲ್ಲಿ ಸಾವಕ್ಕ್‌ ತಾಲೂಕಿಗೆ ದ್ವಿತೀಯ

ಮಹಾಲಿಂಗಪುರ 22 : ಸಮೀಪದ ರನ್ನಬೆಳಗಲಿ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಯ ವಿದ್ಯಾರ್ಥಿನಿ 2020 -21 ನೇ ಸಾಲಿನ ಎನ್‌ಎಂಎಸ್ ಪರೀಕ್ಷೆಯಲ್ಲಿ -99 ಅಂಕಗಳಿಸಿ ತಾಲೂಕಿಗೆ ದ್ವಿತೀಯ ಹಾಗೂ ರನ್ನಬೆಳಗಲಿ ಕ್ಲಸ್ಟರಗೆ ಮೊದಲ ಸ್ಥಾನ ಪಡೆದು ಪಟ್ಟಣದ ಕೀರ್ತಿ ಹೆಚ್ಚಿಸಿದ್ದಾಳೆ. 

ವಿಧ್ಯಾರ್ಥಿನಿ ಕುಮಾರಿ ಸಾವಕ್ಕ ಮುಗಳಿ ತಂದೆ ಸಿದ್ದಪ್ಪ ತೀರಿಕೊಂಡಿದ್ದು, ಕಡು ಬಡತನ ಹಾಗೂ ಅನಕ್ಷರಸ್ಥಳಾದ ತಾಯಿ ಶಂಕ್ರೆವ್ವ ತವರು ಬೆಳಗಲಿ ಪಟ್ಟಣದಲ್ಲಿ ಕೂಲಿ ಮಾಡಿ ಮಗಳನ್ನು ಓದಿಸುತ್ತಿದ್ದಾರೆ.  

ಇಂತಹ ಪರಿಸ್ಥಿತಿಯಲ್ಲಿಯೂ ವಿದ್ಯಾರ್ಥಿನಿ ಪ್ರತಿ ದಿನ ಕನಿಷ್ಠ ಆರು ಗಂಟೆಗಳ ಶ್ರಮವಹಿಸಿ ಅಭ್ಯಾಸ ಮಾಡಿ ಶಾಲೆ ಹಾಗೂ ಊರಿಗೆ ಕೀರ್ತಿ ತಂದಿದ್ದಾಳೆಂದು ವಿದ್ಯಾರ್ಥಿನಿಯ ಸಾಧನೆಗೆ ಅಭಿನಂದಿಸಿ ಶಾಲಾ ಕಾರ್ಯದರ್ಶಿ ಪಂಡಿತ ಪೂಜಾರಿ ಮತ್ತು ಮುಖ್ಯಗುರು ಎಂ ಎಸ್ ಗಾಣಿಗೇರ್ ಹೇಳುತ್ತಾರೆ.  

ಮುಧೋಳ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಎಂ.ಪತ್ತಾರ್ ವಿದ್ಯಾರ್ಥಿನಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರೆ, ಸಹಶಿಕ್ಷಕ ಕೆ.ಎ.ಧಡೂತಿ, ಕೆ.ಬಿ. ಕುಂಬಾಳೆ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿನಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.  

ಚಿಕ್ಕಪ್ಪ ನಾಯಕ, ಗುರುನಾಥ್ ಹಿಪ್ಪರಗಿ,ಸಿದ್ದರಾಮಯ್ಯ, ಪೆಟ್ಲೂರ್, ಮುತ್ತಪ್ಪ ಸಿದ್ದಾಪುರ್, ಭೀಮನಗೌಡ ಪಾಟೀಲ್, ಅಶೋಕ್ ಸಿದ್ದಾಪುರ, ಕಾಡಯ್ಯ ಗಣಾಚಾರಿ, ಸಂಗನಗೌಡ ಪಾಟೀಲ್, ಪ್ರಭು ಸಣ್ಣಟ್ಟಿ, ಎಂ ಎಸ್ ಗಾಣಿಗೇರ. 

ಭೀಮನ್ ಗೌಡ ಪಾಟೀಲ್, ಅಶೋಕ್ ಸಿದ್ದಾಪುರ, ಚಿಕ್ಕಪ್ಪ ನಾಯಕ, ಗುರುನಾಥ್ ಹಿಪ್ಪರಗಿ, ಪೆಟ್ಲೂರ್, ಮುತ್ತಪ್ಪ ಸಿದ್ದಾಪುರ್, ಕಾಡಯ್ಯ ಗಣಾಚಾರಿ, ಸಂಗನಗೌಡ ಪಾಟೀಲ್, ಸಿದ್ದರಾಮಯ್ಯ ಶಿವಯೋಗಿಗಳು, ಪ್ರಭು ಸಣ್ಣಟ್ಟಿ, ಎಂ ಎಸ್ ಗಾಣಿಗೇರ. 


ಸುದ್ದಿ ಓದಿ