ಅಶ್ವಾರೂಢ ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪನೆಗೆ ಸಿದ್ದು ಸವದಿ ಭೂಮಿ ಪೂಜೆ.
ಮಹಾಲಿಂಗಪುರ: ಅಶ್ವಾರೂಢ ಶ್ರೀ ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪನೆ ಹಾಗೂ ರಸ್ತೆ ಸುಧಾರಣೆ ಸೇರಿದಂತೆ 2.50 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಶನಿವಾರ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ ಭೂಮಿ ಪೂಜೆ ನೆರವೇರಿಸಿದರು.
ಕರ್ನಾಟಕ ನೀರಾವರಿ ನಿಗಮದ 2 ಕೋಟಿ ಅನುದಾನದಲ್ಲಿ ಪರಪ್ಪ ಮುತ್ತಪ್ಪಗೋಳ ತೋಟದಿಂದ ತೋಟದ ಮಾರ್ಗವಾಗಿ ಮಹಾಲಿಂಗಪುರ ಢವಳೇಶ್ವರ ಮುಖ್ಯ ರಸ್ತೆವರೆಗೆ ರಸ್ತೆ ಸುಧಾರಣೆ ಹಾಗೂ ಸ್ಥಳೀಯ ಬಸವೇಶ್ವರ ವೃತ್ತದಲ್ಲಿ 50 ಲಕ್ಷ ವೆಚ್ಚದ ಅಶ್ವಾರೂಢ ಶ್ರೀ ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪನೆ ಕಾಮಗಾರಿಗಳಿಗೆ ಅವರು ಚಾಲನೆ ನೀಡಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ, ಪುರಸಭಾ ಅಧ್ಯಕ್ಷ ಬಸವ ಹಿಟ್ಟಿನಮಠ, ಭಾಜಪ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಕುಳ್ಳೊಳ್ಳಿ, ನಗರ ಘಟಕದ ಅಧ್ಯಕ್ಷ ಶ್ರೀಮಂತ ಹಳ್ಳಿ, ಮಹಾಂತೇಶ ಹಿಟ್ಟಿನಮಠ,ಈರಪ್ಪ ದಿನ್ನಿಮನಿ, ಮಹಾಲಿಂಗಪ್ಪ ಕೋಳಿಗುಡ್ಡ, ಜಿ.ಎಸ್.ಗೊಂಬಿ, ಶಿವಾನಂದ ಅಂಗಡಿ, ಪುರಸಭಾ ಸದಸ್ಯರಾದ ಶೇಖರ ಅಂಗಡಿ, ಚೆನ್ನಬಸು ಯರಗಟ್ಟಿ, ರಾಜು ಜಮಕೇರಿ, ಅಜರ್ುನ ಮೋಪಗಾರ, ಗುರುಪಾದ ಅಂಬಿ, ಬಸವಣ್ಯಪ್ಪ ಬ್ಯಾಳಿ, ಲಕ್ಕಪ್ಪ ಚಮಕೇರಿ, ಸಂಗಪ್ಪ ಹಲ್ಲಿ, ಶಂಕರಗೌಡ ಪಾಟೀಲ, ಚನ್ನಪ್ಪ ಪಟ್ಟಣಶೆಟ್ಟಿ,ಶಿವಲಿಂಗಪ್ಪ ಕೌಜಲಗಿ ಶ್ರೀಶೈಲ ನುಚ್ಚಿ ಇತರರಿದ್ದರು