ಮಳೆಯ ಆರ್ಭಟಕ್ಕೆ ನದಿಯಂತಾದ ಸವದತ್ತಿ ಯಲ್ಲಮ್ಮ ದೇವಸ್ಥಾನ : ಭಕ್ತರು, ನಾಗರಿಕರು ಕಕ್ಕಾಬಿಕ್ಕಿ
ಬೆಳಗಾವಿ : ಗುರುವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಯಲ್ಲಮ್ಮನ ದೇವಸ್ಥಾನವು ಅಕ್ಷರಶಃ ನದಿಯಂತೆ ಕಂಡು ಬಂದಿದ್ದು, ಅಲ್ಲಿದ್ದ ಭಕ್ತರು ಹಾಗೂ ಸಾರ್ವಜನಿಕರು ಕಕ್ಕಾಬಿಕ್ಕಿಯಾದ ಘಟನೆ ನಡೆದಿದೆ.

ಗುರುವಾರ ಸಂಜೆ ಸುಮಾರು ಗಂಟೆಗಳ ಕಾಲ ಸುರಿದ ಭಾರಿ ಮಳೆಗೆ ಸವದತ್ತಿಯ ಗುಡ್ಡಗಾಡ ಪ್ರದೇಶಗಳಿಂದ ಮಳೆಯ ನೀರು ನದಿಯ ರೂಪದಲ್ಲಿ ಹರಿದು ಬಂದು ಯಲ್ಲಮ್ಮನ ದೇವಸ್ಥಾನದ ಒಳಗೆ ನುಗ್ಗಿದೆ. ಇದರಿಂದ ಸ್ಥಳದಲ್ಲಿ ಇದ್ದ ಭಕ್ತರು ಹಾಗೂ ನಾಗರಿಕರು ಸುರಕ್ಷಿತ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ತಿಳಿದು ಬಂದಿದೆ.